ಪ್ರಮುಖ ಸುದ್ದಿ
Gruhalakshmi Yojana: ಖಾತೆಗೆ ಬಂತು 11 ನೇ ಕಂತಿನ ಗೃಹಲಕ್ಷ್ಮಿ ಹಣ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯೂ ಈಗಾಗಲೇ ಫಲಾನುಭವಿಗಳ ಖಾತೆಗೆ 10 ಕಂತಿನ ಹಣ ಜಮೆ ಆಗಿದೆ. ಇದೀಗ 11 ನೇ ಕಂತಿನ ಹಣ ಕೂಡ ಜಮೆ ಆಗಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರವು ಅರ್ಹ ಸ್ವೀಕೃತದಾರರ ಖಾತೆಗಳಿಗೆ ನೇರವಾಗಿ 10 ಕಂತುಗಳನ್ನು ಯಶಸ್ವಿಯಾಗಿ ವರ್ಗಾಯಿಸಿದ್ದರೂ, ಕೆವೈಸಿ ಅಥವಾ ಸಾಕಷ್ಟು ದಾಖಲಾತಿಗಳಂತಹ ಸಮಸ್ಯೆಗಳಿಂದಾಗಿ ಕೆಲವು ಮಹಿಳೆಯರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.
ಗೃಹಲಕ್ಷ್ಮಿ 11 ನೇ ಕಂತಿನ ಹಣ ಸರ್ಕಾರದಿಂದ ಬಿಡುಗಡೆಯಾಗಲಿದ್ದು ಮೊದಲು ಉಡುಪಿ ಹಾಗೂ ಚಿಕ್ಕಮಗಳೂರು ಮತ್ತು ಹಾಸನ ಮತ್ತು ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಇಷ್ಟು ಜಿಲ್ಲೆಗಳಿಗೆ ಮೊದಲು ಗೃಹಲಕ್ಷ್ಮಿ ಹಣವು ಬಿಡುಗಡೆಯಾಗಲಿದೆ.