ಪ್ರಮುಖ ಸುದ್ದಿ

ದರ್ಶನಾಪುರ ಹೇಳಿಕೆಗೆ ಶಿರವಾಳ ಆಕ್ಷೇಪಣೆ

ಕೊರೊನಾ ಸಂಕಷ್ಟ ಕಾಲದಲ್ಲಿ ರಾಜಕೀಯ ಸಲ್ಲದು – ಶಿರವಾಳ

yadgiri, ಶಹಾಪುರಃ ಕೋವಿಡ್ ಎರಡನೇ ಅಲೆ ಆರಂಭದ ಒಂದು ವಾರದಲ್ಲಿ ಆಕ್ಸಿಜನ್, ಬೆಡ್ ಸಮಸ್ಯೆಯಾಗಿದ್ದು ಗೊತ್ತಿರುವ ವಿಷಯ ಆದರೆ, ನಂತರದ ದಿನಗಳಲ್ಲಿ ಆಕ್ಸಿಜನ್, ಬೆಡ್ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವಿರತ ಶ್ರಮವಹಿಸುವ ಮೂಲಕ ಯಶಸ್ವಿಯಾಗಿ ನಿಭಾಯಿಸುತ್ತಿವೆ ಎಂಬುದು ಯಾರೊಬ್ಬರು ಮರೆಯುವಂತಿಲ್ಲ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮಾಧ್ಯಮದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಹೇಳಿಕೆ ನೀಡಿರುವ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ ಅವರು, ವಿಪಕ್ಷ ಎಂದ ಮಾತ್ರಕ್ಕೆ ಜನರನ್ನು ತಪ್ಪು ದಾರಿಗೆ ಎಳೆಯವುದು ಸರಿಯಲ್ಲ. ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿದೆ.

ಅಲ್ಲದೆ ಲಸಿಕೆ ಕುರಿತು ಮೊದಲಿಗೆ ಜನರಲ್ಲಿ ತಪ್ಪು ಭಾವನೆ ಬಿತ್ತಿರುವದೆ ಕಾಂಗ್ರೆಸ್‍ನವರು, ತಾವೂ ಲಸಿಕೆ ಹಾಕಿಸಿಕೊಂಡು ಹೊರಗಡೆ ಲಸಿಕೆ ಹಾಕಿಸಿಕೊಳ್ಳಬೇಡಿ ಅದು ಮೋದಿ ಲಸಿಕೆ ಸರಿಯಿಲ್ಲ ಎಂಬ ಭಯದ ವಾತಾವರಣ ನಿರ್ಮಾಣ ಮಾಡಿದವರು ಕಾಂಗ್ರೆಸ್ಸಿಗರು, ಇದರಿಂದ ಮುಗ್ಧ ಜನರು ಲಸಿಕೆ ಹಾಕಿಸಿಕೊಳ್ಳದೆ ಗೊಂದಲಕ್ಕೊಳಗಾಗಿ ಸಾಕಷ್ಟು ಜನರು ಮಸಣ ಸೇರುವಂತಾಯಿತು. ಇದಕ್ಕೆಲ್ಲ ಕಾಂಗ್ರೆಸ್ಸಿಗರೇ ಕಾರಣ ಎಂದು ದೂರಿದರು.

ಅಲ್ಲದೆ ಜಿಲ್ಲೆಯ ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ 27 ವೆಂಟಿಲೇಟರ್, ಶಹಾಪುರದಲ್ಲಿ 6 ಮತ್ತು ಸುರಪುರದಲ್ಲಿ 6 ವೆಂಟಿಲೇಟರ್ ಇದ್ದು, ಆಕ್ಸಿಜನೇಟ್ ಬೆಡ್ ಶಹಾಪುರದಲ್ಲಿ 50 ಮತ್ತು ಸುರಪುರದಲ್ಲಿ 50 ಇದ್ದು, ಅಲ್ಲದೆ ಯಾದಗಿರಿಯಲ್ಲಿ 194 ಆಕ್ಸಿಜನೇಟ್ ಬೆಡ್ ವ್ಯವಸ್ಥೆ ಇದೆ. ಪ್ರಾರಂಭದಲ್ಲಿ ಏಕಾಏಕಿ ಕೊರೊನಾ ಅಲೆ ಆವರಿಸಿದ್ದರಿಂದ ಒಂದು ವಾರ ಆಕ್ಸಿಜನ್ ಬೆಡ್ ಕೊರತೆ ಉಂಟಾಗಿರಬಹುದು ಅದು ಬಿಟ್ರೆ ತಕ್ಷಣಕ್ಕೆ ಎಲ್ಲಾ ವ್ಯವಸ್ಥೆ ಯಶಸ್ವಿಯಾಗಿ ಮಾಡಲಾಗಿದೆ. ಮತ್ತು ತಾಲೂಕಿಗೊಂದು ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿದೆ.

ಇಂತಹ ಸಂದರ್ಭದಲ್ಲಿ ರಾಜಕೀಯ ಹೇಳಿಕೆ ಸರಿಯಲ್ಲ. ಪ್ರಧಾನಿ ಮೋದಿಯವರು ಆರಂಭದಲ್ಲಿ ಲಾಕ್‍ಡೌನ್ ಮಾಡಬೇಡಿ ಅಗತ್ಯವೆನಿಸಿದರೆ, ಕೊನೆಗಳಿಗೆಯಲ್ಲಿ ಲಾಕ್ ಡೌನ್ ಮಾಡಿ ಎಂದು ಸೂಚನೆ ಕೊಟ್ಟಿರುವ ಹಿನ್ನೆಲೆ ಜನರು ತೊಂದರೆ ಅನುಭವಿಸಬೇಕಾಯಿತು ಎಂದು ಹೇಳಿರುವ ದರ್ಶನಾಪುರ ಹೇಳಿಕೆ ಹಾಸ್ಯಸ್ಪದ ಎನಿಸುತ್ತಿದೆ ಎಂದ ಅವರು,

ಪಂಜಾಬನಲ್ಲಿ ತಮ್ಮದೆ ಸರ್ಕಾರವಿದೆ ಅವರಿಗೂ ಪ್ರಧಾನಿಗಳು ಸೂಚನೆ ನೀಡಿದ್ದಾರಂತೆಯೇ.? ಅವರ್ಯಾಕೆ ಆರಂಭದಲ್ಲಿಯೇ ಲಾಕ್‍ಡೌನ್ ಘೋಷಿಸಿಲ್ಲ. ಅಲ್ಲಿ ಅವರ ಪಕ್ಷದ ಸರ್ಕಾರವೇ ಇದೆ. ಮಹಾರಾಷ್ಟ್ರದಲ್ಲೂ ತಮ್ಮದೆ ಪಕ್ಷದೊಂದಿಗೆ ಸಮ್ಮಿಶ್ರ ಸರ್ಕಾರವಿದೆ ಅವರಾದರೂ ಆರಂಭದಲ್ಲಿಯೇ ಲಾಕ್‍ಡೌನ್ ಮಾಡಬಹುದಿತ್ತಲ್ಲ ಎಂದು ಕುಟುಕಿದ್ದಾರೆ.

ಮೋದಿಯವರಿಗಿದ್ದ ಜನಪರ ಕಾಳಜಿ ಇಡಿ ದೇಶದಲ್ಲಿ ಹುಡುಕಿದರೂ ದೊರೆಯುವದು ಕಷ್ಟ. ಅಂತಹ ಜನಪರ ಸೇವಕನ ಕುರಿತು ಇಲ್ಲ ಸಲ್ಲದ ಮಾತಾಡುವದು ಸರಿಯಲ್ಲ. ಕಳೆದ ವರ್ಷದಿಂದ ಕೊರೊನಾ ಸಂಕಷ್ಟದಲ್ಲಿರುವ ಸುಮಾರು 80 ಕೋಟಿ ಕುಟುಂಬಗಳಿಗೆ ಉಚಿತ ರೇಷನ್ ನೀಡುತ್ತಿರುವ ಪ್ರಧಾನಿ ಮೋದಿಯವರ ಕಾರ್ಯ ಮಹತ್ತರವಾದದು.

ಕಾಂಗ್ರೆಸ್ ಲಸಿಕೆ‌‌ ಖರೀದಿಗೆ 100 ಕೋಟಿ ದೇಣಿಗೆ ನೀಡುವುದಾಗಿ ಹೇಳಿರುವದು ಹಾಸ್ಯಾಸ್ಪದ, ಕಾಂಗ್ರೆಸ್ ನ ಎಲ್ಲಾ ಶಾಸಕರು ಸರ್ಕಾರಿ ದುಡ್ಡನ್ನೆ ಒಂದು ಕೋಟಿ ಸಂಗ್ರಹಿಸಿ ನೂರು ಕೋಟಿ ನೀಡುವುದಾಗಿ ಹೇಳಿದೆ. ಇವರೇನು ತಮ್ಮ ಪಕ್ಷದ ದುಡ್ಡು ಸಂಗ್ರಹಿಸಿ ಕೊಡುವರೇ.? ಸರ್ಕಾರಿ ಅನುದಾನದ‌ ದುಡ್ಡು ಕೊಡುತ್ತಿದ್ದು,‌ ಜನರಲ್ಲಿ ತಾವೇ ಸ್ವತಃ ಪಕ್ಷದ‌ ದುಡ್ಟು ಕೊಟ್ಟಂತೆ ಪ್ರಚಾರ ಪಡೆಯುತ್ತಿರುವದು ಎಷ್ಟರಮಟ್ಟಿಗೆ ಸರಿ. ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಲಿ.

ಗುರು ಪಾಟೀಲ್ .‌ಮಾಜಿ ಶಾಸಕ.

ಜಗತ್ತಿನ ಶ್ರೀಮಂತ ರಾಷ್ಟ್ರಗಳು ಮತ್ತು ಅತಿ ಕಡಿಮೆ ಜನಸಂಖ್ಯೆ ಹೊಂದಿದ ದೇಶಗಳಲ್ಲಿಯೇ ಕೊರೊನಾ ನಾನಾ ಅವಗಡಗಳನ್ನು ಸೃಷ್ಟಿಸಿದೆ. ಕೊರೊನಾ ಸಂಕಷ್ಟಕಾಲದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಇಂತಹ ಸಮಯದಲ್ಲಿ ರಾಜಕೀಯ ಸಲ್ಲದು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button