ಒಂದೇ ದಿನ ಮುಕ್ಕೋಟಿ ಸಸಿ ನೆಡಲು ನಿರ್ಧಾರ
ಒಂದೇ ದಿನ ಮುಕ್ಕೋಟಿ ಸಸಿ ನೆಡಲು ನಿರ್ಧಾರ
ಹಸಿರು ತೆಲಂಗಾಣ ಸಿಎಂ ಸಂಕಲ್ಪಕ್ಕೆ ವೇದಿಕೆ
ತೆಲಂಗಾಣಃ ಸಿಎಂ ಕೆಸಿಆರ್ ಅವರ ಸಂಕಲ್ಪದಂತೆ ಹಸಿರು ತೆಲಂಗಾಣ ನಿರ್ಮಾಣಕ್ಕೆ ರಾಜ್ಯದಾದ್ಯಂತ ಇದೇ ಜುಲೈ 24 ರಂದು ಯುವ ನಾಯಕ ಕೆಟಿಆರ್ ಜನ್ಮದಿನದಂದು ಮುಕ್ಕೋಟಿ ಸಸಿಗಳನ್ನು ನೆಡುವ ಮೂಲಕ ದಾಖಲೆ ನಿರ್ಮಿಸಲು ಗ್ರೀನ್ ಇಂಡಿಯಾ ಚಾಲೆಂಜ್ ಪಣ ತೊಟ್ಟಿದೆ ಎಂದು ಸಂಸದ ಜೋಗಿನಪಲ್ಲಿ ಸಂತೋಷಕುಮಾರ ತಿಳಿಸಿದ್ದಾರೆ.
ಈ ಕುರಿತು ಕರಪತ್ರ ಬಿಡುಗೊಳಿಸಿ ಮಾತನಾಡಿದ ಅವರು, ಕೆಟಿಆರ್ ರಾಜ್ಯದ ಯುವ ನಾಯಕ ತಂದೆಯಂತೆ ಜನ ಸೇವಕ, ರಾಜ್ಯದ ಅಭಿವೃದ್ಧಿಯ ಕನಸುಗಾರ ಇವರ ಜನ್ಮ ದಿನ ಅಂಗವಾಗಿ ಈ ತಿಂಗಳ 24 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯದಾದ್ಯಂತ ಒಬ್ಬರು ಮೂರು ಸಸಿ ನೆಡುವ ಮೂಲಕ ಒಂದು ಗಂಟೆಯಲ್ಲಿ ಮೂರು ಕೋಟಿ ಸಸಿ ನೆಟ್ಟು ಉಡುಗೊರೆಯಾಗಿ ನೀಡಲಿದ್ದೆವೆ ಎಂದರು.
ಸಿಎಂ ಅವರ ಜನ್ಮ ದಿನದಂದು ಒಂದು ಕೋಟಿ ಸಸಿ ನೆಡಲಾಗಿತ್ತು. ಗ್ರೀನ್ ಇಂಡಿಯಾ ಚಾಲೆಂಜ್ ಪ್ರತಿನಿಧಿಗಳು “ವೃಕ್ಷಾರ್ಚನ” ಎಂಬ ಮಹತ್ವದ ಕಾರ್ಯಕ್ರಮ ಹಾಕಿಕೊಂಡಿದೆ. ಲಕ್ಷಾಂತರ ಜನ ಇದಕ್ಕೆ ಕೈಜೋಡಿಸಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಮಹ್ಮದ್ ಅಲಿ, ಜಿ.ಜಗಧೀಶ ರಡ್ಡಿ, ತಲಸಾನಿ ಶ್ರೀನಿವಾಸಗೌಡ, ಸಿ.ಎಚ್.ಮಲ್ಲರಡ್ಡಿ, ಸಂಸದ ಕೇಶವರಾವ್, ಬಾಲ್ಕಾ ಸುಮನ್, ಶಾಸಕರಾದ ಗದ್ರಿ ಕಿಶೋರ್, ಶಾನಂಪುಡಿ ಸೈದಿರಡ್ಡಿ ಮತ್ತು ಆರ್ಟಿಎಸ್ ಮುಖಂಡ ಮಾರಿ ರಾಜಶೇಖರ ರಡ್ಡಿ, ಸಂತೋಷಕುಮಾರ ಇದ್ದರು.