ಬೇಳೆಕಾಳು ನಮ್ಮ ದೇಹಕ್ಕೆ ಪೋಷಕಾಂಶ ನೀಡುವಲ್ಲಿ ಸಹಕಾರಿ
![](https://vinayavani.com/wp-content/uploads/2024/06/download-1-6.jpg)
ಬೇಳೆಕಾಳುಗಳು ನಮ್ಮ ನಿತ್ಯ ಬಳಕೆಯಲ್ಲಿ ಬಳಸಲ್ಪಡುವ ಆಹಾರಗಳು. ನಮ್ಮ ಅಡುಗೆಯ ರುಚಿ ಹೆಚ್ಚಿಸಿ, ಪೋಷಕಾಂಶವನ್ನೂ ನಮ್ಮ ದೇಹಕ್ಕೆ ನೀಡುವ ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪೈಕಿ ಇವು ಪ್ರಮುಖವಾದವು.
ಬೇಳೆಕಾಳುಗಳನ್ನು ನಾವು ಅತಿಯಾಗಿ ಬೇಯಿಸುವ ಮೂಲಕ ಇದರಲ್ಲಿರುವ ಪೋಷಕಾಂಶಗಳನ್ನು ಬಹುತೇಕ ಮಂದಿ ನಷ್ಟ ಮಾಡುವುದೇ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಕಾಲ ಬೇಳೆಯನ್ನು ಬೇಯಿಸುವುದರಿಂದ ಇದರಲ್ಲಿರುವ ಪೋಷಕಾಂಶಗಳ್ನು ನಷ್ಟಮಾಡುತ್ತದೆ. ಮುಖ್ಯವಾಗಿ ಲೈಸೀನ್ ಎಂಬ ಅಂಶ ನಷ್ಟವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರನ್ನು ಹಾಕಿ ಬೇಯಿಸುವುದೂ ಕೂಡಾ ಒಳ್ಲೆಯದಲ್ಲ. ಬೇಳೆಕಾಳುಗಳಲ್ಲಿ ಪ್ರೊಟೀನ್‌ಗಳು ಹೆಚ್ಚಿವೆ. ಇವು ನಮ್ಮ ದೇಹದಲ್ಲಿ ಬಿಲ್ಡಿಂಗ್ ಬ್ಲಾಕ್‌ನಂತೆ ಕೆಲಸ ಮಾಡುತ್ತವೆ. ಆದರೆ ಇದು ಸರಿಯಾಗಿ ಇದ್ದಾಗ, ಪೂರೈಕೆಯಾದಾಗ ಮಾತ್ರ ಹೀಗಾಗುತ್ತದೆ.
ಇಲ್ಲವಾದರೆ, ಅತಿಯಾಗಿ ಬೇಳೆಗಳು ಬೆಂದಾಗ ಇದರಲ್ಲಿರುವ ಪ್ರೊಟೀನ್‌ನ ರಚನೆಯಲ್ಲೇ ವ್ಯತ್ಯಾಸವಾಗಿ ಇದರ ಪರಿಣಾಮದಲ್ಲೂ ವ್ಯತ್ಯಾಸವಾಗುತ್ತದೆ. ಬೇಳೆಕಾಳುಗಳಲ್ಲಿ ವಿಟಮಿನ್ ಬಿ ಹಾಗೂ ಸಿ ಹೇರಳವಾಗಿ ಇದ್ದು, ಇವು ಉಷ್ಣತೆಗೆ ಒಳಪಟ್ಟರೆ ಅವುಗಳ ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ, ಒಂದು ಮಿತಿಗಿಂತ ಹೆಚ್ಚು ಬೇಯಿಸುವುದರಿಂದ ಇವುಗಳೂ ಕೂಡಾ ನಷ್ಟವೇ ಆಗುತ್ತವೆ. ಇವುಗಳ ನಿಜವಾದ ಲಾಭ ಸಿಗುವುದಿಲ್ಲ. ಅತಿಯಾಗಿ ಬೇಳೆಕಾಳುಗಳ್ನು ಬೇಯಿಸಿದಾಗ ಅದು ಖಂಡಿತವಾಗಿ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಬೆಂದಾಗ ಅವು ಕರಿದಂತಾಗಿ ಬೇಳೆಯ ಸ್ವಾದ ಕೆಡುತ್ತದೆ. ಬೇಳೆಕಾಳುಗಳನ್ನು ಸರಿಯಾದ ಹದದಲ್ಲಿ ಬೇಯಿಸಿದಾಗ ಅದರಲ್ಲಿರುವ ಫೈಟಿಕ್ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಬೆಂದರೆ, ಫೈಟಿಕ್ ಆಸಿಡ್ ಹೆಚ್ಚಾಗಿ ವಿರುದ್ಧ ಪರಿಣಾಮಗಳನ್ನು ನೀಡಬಹುದು. ಇದರಿಂದ ಕಬ್ಬಿಣಾಂಶ, ಝಿಂಕ್, ಮೆಗ್ನೀಶಿಯಂ ಹಾಗೂ ಕ್ಯಾಲ್ಶಿಯಂನ ಹೀರುವಿಕೆಯ ಶಕ್ತಿಯೂ ಕಡಿಮೆಯಾಗುತ್ತದೆ. ಹೆಚ್ಚಾದ ಫೈಟಿಕ್ ಆಸಿಡ್‌ನಿಂದ ಗ್ಯಾಸ್ ಹಾಗೂ ಹೊಟ್ಟೆಯುಬ್ಬರದ ಸಮಸ್ಯೆಗಳೂ ಬರಬಹುದು. Ad