ಹಿಜಾಬ್ ವಿವಾದಃ ಇಸ್ಲಾಮಿಕ್ ಮೌಲ್ಯ ರಕ್ಷಣೆಗೆ ನಿಂತ ಯುವತಿ ಟ್ವಿಟರ್ ನಲ್ಲಿ ಪರದೇಶಿಗರ ಮೆಚ್ಚುಗೆ

ಹಿಜಾಬ್ ವಿವಾದಃ ಇಸ್ಲಾಮಿಕ್ ಮೌಲ್ಯ ರಕ್ಷಣೆಗೆ ನಿಂತ ಯುವತಿ – ಟ್ವಿಟರ್ ನಲ್ಲಿ ಪರದೇಶಿಗರ ಮೆಚ್ಚುಗೆ
ವಿವಿ ಡೆಸ್ಕ್ಃ ಹಿಜಾಬ್ ವಿವಾದ ರಾಜ್ಯ, ರಾಷ್ಟ್ರ ಮಟ್ಟದಲ್ಲಷ್ಟೆ ಅಲ್ಲಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕರುನಾಡಿನ ಹಿಜಾಬ್ ವಿವಾದ ಇದೀಗ ವಿಶ್ವಮಟ್ಟಕೆ ತಲುಪಿದೆ.
ಪರದೇಶದ ಇನಾಮುಲ್ಲಾ ಸಾಮಂಗನಿ ಹೆಸರಿನ ಟ್ವಿಟರ್ ಖಾತೆಯಲ್ಲಿ ಉರ್ದುವಿನಲ್ಲಿ ಈಚೆಗೆ ನಡೆಯುತ್ತಿದ್ದ ಹಿಜಾಬ್ ವಿವಾದ ಕುರಿತು ಉಲ್ಲೇಖಿಸಿದ್ದು,
ಮುಸ್ಲಿಂ ಮಹಿಳೆಯರು ತಮ್ಮ ಧಾರ್ಮಿಕ ಮೌಲ್ಯಗಳ ಪರವಾಗಿ ನಿಲ್ಲುವುದು ಮತ್ತು ಅದನ್ನು ವಿವಿಧ ರೀತಿಯಲ್ಲಿ ರಕ್ಷಿಸಲು ತ್ಯಾಗ ಮಾಡುವುದನ್ನು ನೋಡುವುದು ಸಂತೋಷಕರವಾಗಿದೆ. ವಿಶೇಷವಾಗಿ ಭಾರತದಂತಹ ಜಾತ್ಯತೀತ ದೇಶದಲ್ಲಿ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಹಿಜಾಬ್‌ಗಾಗಿ ಭಾರತೀಯ ಮುಸ್ಲಿಂ ಹುಡುಗಿಯರ ಹೋರಾಟವು ಹಿಜಾಬ್ ಅರಬ್, ಇರಾನಿಯನ್, ಈಜಿಪ್ಟ್ ಅಥವಾ ಪಾಕಿಸ್ತಾನಿ ಸಂಸ್ಕೃತಿಯಲ್ಲ, ಆದರೆ ಇಸ್ಲಾಮಿಕ್ ಮೌಲ್ಯವಾಗಿದೆ,
ಇದಕ್ಕಾಗಿ ಪ್ರಪಂಚದಾದ್ಯಂತ, ವಿಶೇಷವಾಗಿ ಜಾತ್ಯತೀತ ಜಗತ್ತಿನಲ್ಲಿ ಮುಸ್ಲಿಂ ಹುಡುಗಿಯರು ವಿವಿಧ ಪ್ರಕಾರಗಳೊಂದಿಗೆ ತ್ಯಾಗ ಮತ್ತು ತಮ್ಮ ಧಾರ್ಮಿಕ ಮೌಲ್ಯವನ್ನು ರಕ್ಷಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮೊನ್ನೆ ಮಂಡ್ಯಾ ಜಿಲ್ಲೆಯಲ್ಲಿ ನಡೆದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಹಿಜಾಬ್ ಧರಿಸಿದ ಯುವತಿ ಯೋರ್ವಳು ಇಲ್ಲಿನ ಕಾಲೇಜುವೊಂದರ ಆವರಣ ಪ್ರವೇಶಿಸುತ್ತಿದ್ದಂತೆ, ಅಲ್ಲಿಯೇ ನೆರೆದಿದ್ದ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ, ಜೈಶ್ರೀರಾಮ ಎಂದ್ದು ಕೂಗಿದ್ದಲ್ಲದೆ ಶಾಲಾ ಆವರಣದೊಳಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿದ್ದರು.
ಆದರೆ, ಅಲ್ಹಾ ಓ ಅಕ್ಬರ್ ಎಂದು ಪ್ರತಿಯಾಗಿ ಕೂಗವ ಮೂಲಕ ಆ ಯುವತಿ ಸಹಜ ಧೈರ್ಯ ತೋರಿದ್ದಳು. ಆದರೆ ಅದನ್ನೆ ವೈರಲ್ ಮಾಡಿ ಯುವತಿಯ ಧೈರ್ಯ ಮೆಚ್ಚುವಂತಹದ್ದು ಎಂದು ಪರದೇಶಿಗರು ಆ ಯುವತಿಯ ಫೋಟೊ ಹಾಕಿ ಟ್ವಿಟ್ ಮಾಡಿದ್ದಾರೆ. ಅದೇ ನಮ‌್ಮ ದೇಶದ ಹಲವು ರಾಜ್ಯಗಳು ಆಕೆಗೆ ಪ್ರಶಸ್ತಿಗಳು ಸಹ ಘೋಷಿಸಿದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರಗೊಂಡಿದ್ದವು. ಇದೀಗ ಆ ಯುವತಿ ಪರದೇಶದಲ್ಲೂ ಮಿಂಚಿದ್ದಾಳೆ.
ಸುಶಿಕ್ಷಿತರ ವಿನಮ್ರ ಮನವಿ..
ಸಹಜವಾಗಿ ಪ್ರತಿಕ್ರಿಯೆ ನೀಡಿದ ಆ ಮಗುವಿನ ನಡೆಯನ್ನೇ ಕೆಲವರು ದೊಡ್ಡ ವಿಷಯ ಮಾಡಿ ವಿದ್ಯಾರ್ಥಿನಿ ಬಾಳು ಹಾಳು ಮಾಡಲು ಹೊರಟಿದ್ದಾರೆ.ಧರ್ಮ, ಸಂಪ್ರದಾಯ ಕಟ್ಟಳೆ ಹೆಸರಲಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವದು ಸರಿಯಲ್ಲ. ಮುಂದೆ ಸತ್ಪ್ರಜೆಗಳಾಗಬೇಕಾದ ಮಕ್ಕಳ ಭಾವನೆಯಲ್ಲಿ ವಿಷ ಬೀಜ ಬಿತ್ತುವದು ಸರಿಯಲ್ಲ.
ತಾಲಿಬಾನ್, ಪಾಕಿಸ್ತಾನ ದಂತಹ ಘೋರ ನಡೆಯುಳ್ಳ ದೇಶಗಳಿಂದ ನಮ್ಮ ದೇಶ ಕಲಿಯಬೇಕಾದದ್ದು ಏನಿಲ್ಲ. ದಯವಿಟ್ಟು ಭಾರತದಲ್ಲಿ ಎಲ್ಲರೂ ಒಂದೆ. ಎಲ್ಲ ಧರ್ಮೀಯರು ತಮ್ಮ ತಮ್ಮ ಸಂಪ್ರದಾಯ ಮನೆಯಲ್ಲಿಟ್ಟು ಕೊಳ್ಳಲಿ, ಶಾಲಾ, ಕಾಲೇಜು, ಕೋರ್ಟ್, ಸರ್ಕಾರಿ ಕಚೇರಿಗಳಿಗೆ ತರಬೇಡಿ ಎಂಬುವದೇ ಸುಶಿಕ್ಷಿತರ ವಿನಮ್ರ ಮನವಿಯಾಗಿದೆ.