ಪ್ರಮುಖ ಸುದ್ದಿ

ಅಂಜನಾದ್ರಿ ಹೈಜಾಕ್ ಮಾಡಲು ಬಿಡೆವು – ಎಚ್.ಆರ್.ಶ್ರೀನಾಥ

ನಾನು ಟಿಕೆಟ್ ಆಕಾಂಕ್ಷಿ‌ ಎಂದ ಮಾಜಿ ಎಂಎಲ್ಸಿ ಶ್ರೀನಾಥ

ಅಂಜನಾದ್ರಿ ಹೈಜಾಕ್ ಮಾಡಲು ಬಿಡೆವು – ಎಚ್.ಆರ್.ಶ್ರೀನಾಥ

ಬಿಜೆಪಿ, ಸಂಘ ಪರಿವಾರದಿಂದ ಹೈಜಾಕ್ ಶ್ರೀನಾಥ ಆರೋಪ

ಗಂಗಾವತಿಃ ಇತಿಹಾಸ ಪ್ರಸಿದ್ಧ ಪವಿತ್ರ‌ ಸ್ಥಳವಾದ ಅಂಜನಾದ್ರಿಯನ್ನು (ಕಿಷ್ಕಿಂದಾ) ಬಿಜೆಪಿ ಮತ್ತು ಸಂಘ ಪರಿವಾರ ಹೈಜಾಕ್ ಮಾಡುವ ಮೂಲಕ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಹವಣಿಸುತ್ತಿದ್ದು ಇದಕ್ಕೆ ಅವಕಾಶ ಕಲ್ಪಿಸುವದಿಲ್ಲ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ತಿಳಿಸಿದರು.

ಕಾಂಗ್ರೆಸ್ ಸೇರ್ಪಡೆ ನಂತರ ನಗರಕ್ಕೆ ಆಗಮಿಸಿದ ಅವರು, ಕಾರ್ಯಕರ್ತರು, ಆಪ್ತರು ಆಯೋಜಿಸಿದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು,  ಬಿಜೆಪಿ ಜಾತಿ,‌ ಧರ್ಮದ‌ ಆಧಾರದ ಮೇಲೆ‌ ಚುನಾವಣೆ ಎದುರಿಸುವ ಮೂಲಕ ಜನರ‌ ಭಾವನೆಗಳೊಂದಿಗೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಭಾಗದಲ್ಲೂ ಕಿಷ್ಕಿಂದಾ ಪವಿತ್ರ ಕ್ಷೇತ್ರ ಮುನ್ನೆಲೆಗೆ ತಂದಿದ್ದು ಇದರ ಲಾಭವನ್ಮು ಬಿಜೆಪಿ ಪಡೆಯಲು ಸಿದ್ಧತೆ ನಡೆಸಿಕೊಂಡಿದೆ. ಅದು ಸಾಧ್ಯವಿಲ್ಲವೆಂದು ಅದಕ್ಕೆ ಅವಕಾಶ ನೀಡುವದಿಲ್ಲ.

ಅಂಜನಾದ್ರಿ ಕೇವಲ ಬಿಜೆಪಿ, ‌ಸಂಘ ಪರಿವಾದವರ‌ ಸ್ವತ್ತಲ್ಲ. ಅಂಜನಾದ್ರಿ ಆಂಜನೇಯ ಸ್ವಾಮಿಯ ಜನ್ಮ ಸ್ಥಳವಾಗಿದ್ದು ಪವಿತ್ರ ಭೂಮಿಯಾಗಿದೆ. ಇದಕ್ಕೆ ಎಲ್ಲಾ ಜಾತಿ,‌ ಪಕ್ಷದವರು ಭಕ್ತರಿದ್ದಾರೆ‌ ಎಂದರು.

ನಾನು ಟಿಕೆಟ್ ಆಕಾಂಕ್ಷಿಃ ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ‌ ಸೇರ್ಪಡೆಯಾಗಿದ್ದೇನೆ. ಆದರೆ ನಾನು ಗಂಗಾವತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ಮುಖಂಡರು ಯಾರಿಗೆ ಟಿಕೆಟ್‌ ನೀಡುತ್ತಾರೆ ಅವರ ಗೆಲುವಿಗಾಗಿ‌ ಶ್ರಮಿಸಲಿದ್ದೇವೆ ಎಂದು ಎಚ್.ಆರ್.ಶ್ರೀನಾಥ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button