Home

ಕನ್ನಡದ ಕಬೀರ ಇಬ್ರಾಹಿಂ ಸುತಾರ ಇನ್ನಿಲ್ಲ

ಕನ್ನಡದ ಕಬೀರ ಇಬ್ರಾಹಿಂ ಸುತಾರ ಇನ್ನಿಲ್ಲ

ಬಾಗಲಕೋಟಃ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಪಾರ ಜ್ಞಾನಿ, ಧಾರ್ಮಿಕ ಚಿಂತಕ, ಪ್ರವಚನಕಾರ, ಕನ್ನಡದ ಕಬೀರ ಇಬ್ರಾಹಿಂ ಸುತಾರ ಇಂದು ಬೆಳಗಿನಜಾವ ವಿಧಿವಶರಾದರು.
ಅವರು ಹೃದಯಾಘಾತದಿಂದ ದೇಹವನ್ಮು ತ್ಯೇಜಿಸಿದರು ಎಂದು ಮೂಲಗಳು ತಿಳಿಸಿವೆ.

ಮೇ.10, 1940 ರಂದು ಅವರು ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದ ಬಡ ಕುಟುಂಬದಲ್ಲಿ ಜನಿಸಿದ್ದರು.

ಉರ್ದು ಮೂರನೇಯ ತರಗತಿ ಓದಿದ್ದ ಅವರಿಗೆ, ದೈವದತ್ತವಾಗಿ ಸರಸ್ವತಿ ಕೃಪಾಕಟಾಕ್ಷದಿಂದ ಅಪಾರ ಜ್ಞಾನವುಳ್ಳವರು ಮತ್ತು ಎಲ್ಲಾ ಧರ್ಮದ ತಿರುಳನ್ನು ತಿಳಿದವರಾಗಿದ್ದರು. ಅವರ ಅಪಾರ ಚಿಂತನೆ ಮೂಲಕ ಧಾರ್ಮಿಕ ಉಪನ್ಯಾಸ ನೀಡುವ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದರು.

ತಾಯಿ ಸರಸ್ವತಿ ಕೃಪಾಕಟಾಕ್ಷವಿದ್ದ ಸುತಾರ ಅವರು ಇಂದು ಅದೇ ತಾಯಿ ಸರಸ್ವತಿ ‌ವಿದ್ಯಾದೇವಿಯ ಜನ್ಮದಿನ ವಸಂತ ಪಂಚಮಿ ವಿಶಿಷ್ಟ ಶುಭದಿನದಂದೆ ಅವರು ದೇಹವನ್ನು ತ್ಯೇಜಿಸಿರುವದು ವಿಶಿಷ್ಟ ವಾಗಿದೆ ಚಿಂತನಾರ್ಹವಾಗಿದೆ ಎಂದರೆ ತಪ್ಪಿಲ್ಲ.

ಪುರಾಣ ಪುಣ್ಯಕಥೆಯಲ್ಲಿ ಕಾಳಿದಾಸರಿಗೆ ಹೇಗೆ ಸರಸ್ವತಿ‌ ಒಲಿದಿದ್ದಳೋ ಅದೇ ರೀತಿ ಸುತಾರ ಅವರಿಗೆ ಸರಸ್ವತಿ ದೇವಿಯ ಆಶೀರ್ವಾದ ವಿತ್ತೆಂದರೆ ತಪ್ಪಿಲ್ಲ.

ಅವರು ವೈದಿಕ, ವಚನ ಮತ್ತು ಸೂಫಿ ಸಂತರ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆಯನ್ನು ಬೆಸೆಯುತ್ತಿದ್ದರು. ಉತ್ತಮ ತತ್ವಪದಕಾರರು‌, ಪ್ರವಚಮಕಾರರಾಗಿ ಮನೆ ಮಾತಾಗಿದ್ದರು. ಅವರ ನೋಟ ಮುಖ ಲಕ್ಷಣ ಬಾಡಿ‌ ಲ್ಯಾಂಗ್ವೇಜ್ ಅತ್ಯಾಕರ್ಷಕ ವಾಗಿತ್ತು.

ಸ್ವತಃ ಅವರೊಬ್ಬ ಸಂತರಂತೆ ಕಂಗೊಳಿಸುತ್ತಿದ್ದರು. ನಾಡಿನ ಜನರ ಮನಸ್ಸಲ್ಲಿ ಅವರ ಉಣಬಡಿಸಿದ ಸಂತ,‌ ಸೂಫಿ ಧಾರ್ಮಿಕತೆಯ ತಿರಳು ಇಂದಿಗೂ ಅಚ್ಚಳಿಯದೆ ಜೀವಂತವಾಗಿದೆ. ಕನ್ನಡದ ಕಬೀರ ಇಬ್ರಾಹಿಂ ಸುತಾರ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು ಎಲ್ಲಾ ಧರ್ಮದವರಿಗೆ ಅವರು ಪ್ರಿಯರಾಗಿದ್ದರು.

ನಾಡಿನ ಮತ್ತೋರ್ವ ಸಂತ ಶಿಶುನಾಳಧೀಶರಂತೆ ಕಂಗೊಳಿಸುತ್ತಿದ್ದ ಅವರು ಇನ್ನಿಲ್ಲ ಎಂಬ ಸಂಗತಿ ನಾಡಿಗೆ ಅಪಾರ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ‌ ಅಲ್ಲಾಃ,‌ ಶ್ರೀದೇವರು ಚಿರಶಾಂತಿ ನೀಡಿಲಿ ಎಂದು ವಿವಿ ಬಳಗ ಪ್ರಾರ್ಥಿಸುತ್ತದೆ.

ಮಲ್ಲಿಕಾರ್ಜುನ ಮುದ್ನೂರ

Related Articles

Leave a Reply

Your email address will not be published. Required fields are marked *

Back to top button