ಪ್ರಮುಖ ಸುದ್ದಿ

ಕಾನಿಪಸಂದ ನೂತನ ಅಧ್ಯಕ್ಷ ಸಿನ್ನೂರಗೆ ಸನ್ಮಾನ

 

ಯಾದಗಿರಿಃ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಐಕೆಯಾದ ಇಂದುಧರ ಸಿನ್ನೂರ ಅವರಿಗೆ ಜಿಲ್ಲಾ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಾಜದ ಜಿಲ್ಲಾಧ್ಯಕ್ಷ ಸಂಗಪ್ಪ ಲಾಳಸಂಗಿ ಸಿನ್ನೂರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇಂಧುದರ ಸಿನ್ನೂರ, ನನ್ನನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಿ ಸಮಾಜದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಸದಾ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ನ್ಯಾಯಯುತವಾದ ಯಾವುದೇ ಕೆಲಸವಿರಲಿ ಸರ್ಕಾರಿ ಅಧಿಕರಿಗಳಲ್ಲಿರಲಿ ಅಥವಾ ರಾಜಕಾರಣಿಗಳಲ್ಲಿರಲಿ ನನ್ನಿಂದಾದ ಸಹಾಯ ಸಹಕಾರದ ನೀಡುವ ಮೂಲಕ ಸಾಮಾಜಿಕ ಕಾರ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುವೆ.

ನನ್ನ ಜವಬ್ದಾರಿ ಅರಿತು ನಾನು ನಡೆಯಬೇಕಾಗುತ್ತದೆ. ಮಾಧ್ಯಮಗಳಲ್ಲಿ ಹೌದು ಇದೆ ಅಲ್ಲವು ಇದೆ. ಅವೆಲ್ಲವುಗಳನ್ನು ಸ್ವೀಕರಿಸಿ ಜವಬ್ದಾರಿಯಿಂದ ನ್ಯಾಯ ಧರ್ಮದ ಹಾದಿಯಲ್ಲಿ ಸಾಗುವೆ. ಎಲ್ಲಿಯಾದರೂ ತಪ್ಪಿದ್ದರೆ ಹಿರಿಯರು ದಯವಿಟ್ಟು ಮಾರ್ಗದರ್ಶನ ನೀಡಬೇಕು. ನಿಮ್ಮೆಲ್ಲರ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಈರಣ್ಣ ರ್ಯಾಖಾ, ಡಾ.ಮುನೆಪ್ಪ, ಬಸವರಾಜ ರಾಜಾಪುರ, ಸಿದ್ರಾಮಪ್ಪ ಅರಿಕೇರಿ, ಮಲ್ಲು ಕಡೇಚೂರ, ಅಶೋಕ ಕಿಣಿಕೇರಿ, ವೀರಭದ್ರಪ್ಪ ಮೋಟರ್, ಈಶಪ್ಪ ಕಾಜಗಾರ, ಶೇಖರ ರ್ಯಾಖಾ, ನಾಗು ಬೆಳಗೇರಿ, ಬಸವರಾಜ ಹವಲ್ದಾರ, ರಾಜಶೇಖರ ಪುಲಮಾಮಿಡಿ, ಬಸವರಾಜ ನಗಲಾಪುರ, ರುದ್ರಗೌಡ, ವಿಶ್ವನಾಥ ಕಾಜಗಾರ, ಶಿವಕುಮಾರ ಲಾಳಸಂಗಿ, ಸೂಗಪ್ಪ ಪಾಟೀಲ್, ವೀರಭದ್ರಪ್ಪಗೌಡ ಆಶನಾಳ ಇನ್ನಿತರರಿದ್ದರು.

Related Articles

Leave a Reply

Your email address will not be published. Required fields are marked *

Back to top button