Homeಪ್ರಮುಖ ಸುದ್ದಿ
ಕೇಂದ್ರ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಜೆ.ಪಿ.ನಡ್ಡಾ
![](https://vinayavani.com/wp-content/uploads/2024/06/download-24.jpg)
ನವದೆಹಲಿ: ಜೆ. ಪಿ ನಡ್ಡಾ ಅವರು ಇಂದು (ಮಂಗಳವಾರ) ಕೇಂದ್ರ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ. ನಡ್ಡಾ ಅವರಿಗೆ ಆರೋಗ್ಯ ಖಾತೆಯೊಂದಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಗಿದೆ.
ಹಿಂದಿನ ಮೋದಿ ಸರ್ಕಾರದಲ್ಲಿ ಈ ಎರಡು ಖಾತೆಗಳನ್ನು ಮನ್ಸುಖ್ ಮಾಂಡವೀಯಾ ಅವರು ನಿರ್ವಹಿಸಿದ್ದರು. 2014ರ ಅವಧಿಯ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಜೆ. ಪಿ ನಡ್ಡಾ ಅವರು ಆರೋಗ್ಯ ಖಾತೆಯನ್ನು ನಿರ್ವಹಿಸಿದ್ದರು. 2019ರ ಲೋಕಸಭೆ ಚುನಾವಣೆಯ ನಂತರ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿತ್ತು. ಆರೋಗ್ಯ ಖಾತೆಯ ರಾಜ್ಯ ಸಚಿವರಾಗಿ ಶಿವಸೇನಾ ಸಂಸದ ಪ್ರತಾಪ್ರಾವ್ ಜಾದವ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. 64 ವರ್ಷದ ಜಾದವ್ ಅವರು ಮಹಾರಾಷ್ಟ್ರದ ಬುಲ್ಧಾನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.