ಜಾರಕಿಹೊಳಿ ಐಸಿಯುಗೆ ದಾಖಲು ಆರೋಗ್ಯದಲ್ಲಿ ಏರುಪೇರು
ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ದೃಢ
ಬೆಳಗಾವಿಃ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕೊರೊನಾ ಪಾಸಿಟಿವ್ ದೃಢ ಹಿನ್ನೆಲೆ ಅವರು ಪ್ರಸ್ರುತ ಐಸೋಲೆಷನ್ ನಲ್ಲಿ ಇದ್ದಾರೆ ಎಂದು ಗೋಕಾಕ ತಾಲೂಕಾ ಟಿಎಚ್ಓ ಮುತ್ತಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಅವರು ಎಸ್ಐಟಿಗೆ ಹಾಜರಾಗಬೇಕಿತ್ತು ಆದರೆ ಅನಾರೋಗ್ಯ ಹಿನ್ನೆಲೆ ಹಾಜರಾಗಿರುವದಿಲ್ಲ ಎಂದು ಮಾಹಿತಿ ನೀಡಲಾಗುತ್ತಿದೆ.
ಈ ನಡುವೆ ಅಲ್ಲಿನ ಸರ್ಕಾರಿ ವೈದ್ಯರು ಜಾರಕಿಹೊಳಿ ಅವರು ಇಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಕೊರೊನಾ ಪಾಸಿಟಿವ್ ದೃಢ ಪಟ್ಟಿದ್ದು, ಉಸಿರಾಟದ ಸ್ವಲ್ಪ ತೊಂದರೆ ಕಾಣಿಸಿಕೊಂಡಿದ್ದು ಅಲ್ಲದೆ ಶುಗುರ್, ಬಿಪಿ ಏರುಪೆರಾಗಿದೆ ಹೀಗಾಗಿ ಐಸಿಯು ನಲ್ಲಿ ದಾಖಲಿಸಲಾಗಿದೆ ಎಂದು ವೈದ್ಯರು ಹೆಳಿದರೆ, ಟಿಎಚ್ಓ ಮನೆಯಲ್ಲಿ ಹೋಂಕ್ವಾರಂಟೈನ್ ನಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ,
ಜಾರಕಿಹೊಳಿ ಅವರ ಪರ ವಕೀಲ ಶ್ಹಾಮಸುಂದರ್ ಅವರ ಹೇಳಿಕೆ ಪ್ರಕಾರ ಜಾರಕಿಹೊಳಿ ಅವರಿಗೆ ಅನಾರೋಗ್ಯ ಹಿನ್ನೆಲೆ ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದು, ಹೇಳಿಕೆಯಲ್ಲಿ ಗೊಂದಲ ಮೂಡಿಸಿವೆ.
ಯಾವುದಕ್ಕೂ ಜಾರಕಿಹೊಳಿ ಆರೋಗ್ಯ ಸುಧಾರಿಸಿಕೊಂಡು ತಮ್ಮ ಮೇಲೆ ಬಂದಿರುವ ಆರೋಪ ಎದುರಿಸಲು ಸಿದ್ಧವಾಗಲಿ ಎಂಬುದು ಅವರ ಆಪ್ತರ ಆಶಯವಾಗಿದೆ.