“ಕಾಮುಕನ ಕಂದ” ಚಂದಪ್ಪ ದೋರನಹಳ್ಳಿ ಬರೆದ ಕವಿತೆ
ಕಾಮುಕನ ಕಂದ
ಬೆಂಕಿಯ ಜ್ವಾಲೆಯಂತೆ ಉಗಿಯುತ್ತಿರುವ ಆ ಸೂರ್ಯನ ಕಿರಣಗಳ ಹೊಡೆತಕ್ಕೆ ನೆರಳಿಲ್ಲದೆ ಬೆಂದು ಬೆಂಡಾದೆ ನಾನು.
ತಿಪ್ಪೆ ಗುಂಡಿಯಲ್ಲಿ ಬಿದ್ದು ಬಗೆ ಬಗೆಯ ಎಂಜಲು ಸಿಪ್ಪೆಯ ಅನ್ನವು ತಿಂದು. ಎದುರಾಗವ ಬಿರುಗಾಳಿಗೆ ಎದೆಯೊಡ್ಡಿ. ತೂರಿ ಬರುತ್ತಿರುವ ವಾಹನ ಸವಾರರ ಲಾಲರಸವನ್ನು ನುಂಗಿ ಕರಳು ಹುಬ್ಬಿಸಿಕೊಂಡೆ.
ಹಗಲು ರಾತ್ರಿ ಬಳಿ ಇರುವವು ಹಂದಿ, ಸ್ವಾನಗಳು ನನ್ನ ಬಂಧು ಬಳಗ. ಮಲಮೂತ್ರ ವಿಸರ್ಜನೆಯ ಸ್ಥಳವೇ ನನ್ನ ಸೂರು ನಿದ್ರೆಗೊಂಡರೇ ಮುದ್ದು ಮಾಡಿವೆ ನನ್ನ ಸ್ವಾನಗಳು
ಇದುವೆ ನನ್ನ ಅರಮನೆಯ ಬಳಗ.
ವರ್ಷಗಳು ಉರುಳಿದವು ಮೈ ಬಣ್ಣ ತಿಳಿದಿಲ್ಲ ಬರಿಗಾಲು ತುಂಬ ಮುಳ್ಳುಗಳು ನೆಟ್ಟಾವ ಕಣ್ಣುಗಳು ಕೆಂಪೇರದು ನೆತ್ತರ ಹರಿದಾವ. ಹಾದಿಯಲ್ಲಿ ಹೋಗವ ತಾಯಿಯರನ್ನು ಕಂಡೆ. ಯಾರೆಂದು ನನಗೆ ಗೋಚರಿಸಲಿಲ್ಲ ಎನ್ನ ಹಡೆದವ್ವ.
ಹೆತ್ತವಳ ಹಂಬಲಕ್ಕೆ ಮನವು ಬಳಲಿ ಹೆತ್ತ ಕರಳು ಎನ್ನ ಕಾಣಲೆಂದು ಪಟ್ಟಣದ ಸಂತೆಯ ಮಧ್ಯ ನಾ ಕುಳಿತೆ. ಅನಾಥ ಭಿಕ್ಷು ಮಗುವೆಂದು ಎನ್ನ ಮಡಿಲಿಗೆ ಹಾಕಿದ್ದರು ಚಿಲ್ಲರದ ನ್ಯಾಣ ಆಗ ನಾನಾದೆ ಭಿಕ್ಷುಕ ಕಂದ.!
ತುತ್ತಿನ ಚೀಲ ತುಂಬಿಸಿಕೊಳ್ಳಲು ಭಿಕ್ಷೆಯ ಬಟ್ಟಲು ಹಿಡಿದು ನಗರದ ಬಡಾವಣೆಗೆ ನಾ ಹೋದೆ. ಸಂದಿ ಗೊಂದಿಯಲ್ಲಿ ಕಾಮುಕರ ಸಂತೆ ನಾ ಕಂಡೆ ಅಲ್ಲಿಯುವ ಗುರುತಿಸಲಿಲ್ಲ ಎನ್ನ ಹಡೆದವ್ವ.
ಕಾಮುಕರ ಹಟ್ಟಹಾಸಕ್ಕೆ ಎನ್ನವ್ವ ಸಿಕ್ಕು ಎನಗೆ ತಿಪ್ಪೆಯಲ್ಲಿ ಹೆತ್ತು ಜನ್ಮ ನೀಡಿ ಕೊನೆಯುಸಿರೆಳದಾಳ ಎಂದು ಅರಿತು. ನಾ ಬಂದೆ ರೈಲ್ವೆಯ ಗಾಲಿ ಅಡಿಗೆ ದೇಹವು ಅರ್ಪಿಸಲು.
ಓ-ಚಂದಪ್ಪ.ದೋರನಹಳ್ಳಿ.ಪತ್ರಕರ್ತರು.
ಮೊ.9740054088
ಸುಪರ್ ಕವಿತೆ ಪತ್ರಕರ್ತರೆ
ಕವಿತೆ ತುಂಬಾ ಚನ್ನಾಗಿದೆ ಅನಾಥ ಮಗುವಿನ ಏಕಾಂಗಿ ಬದುಕಿನ ತೊಳಲಾಟ ಅವನು ನಡಿವ ದಾರಿಯಲ್ಲಿ ಬೆರೆ ಮಕ್ಕಳು ತಮ್ಮ ತಾಯಿಯ ಕೈಹಿಡಿದು ನಡಿವದು ಮತ್ತು ತಾಯಿಯ ಹಾರೈಕೆ ನೊಡಿ ಅವನಿಗು ನನಗು ನಮ್ಮ ತಾಯಿ ಇದ್ದರೆ ಎಷ್ಟು ಚನ್ನಾಗಿಯಿರತ್ತು ನನ್ನ ಬದುಕು ಎನುವ ಆ ನೊವು ತನ್ನ ತಾಯಿ ಯಾರೆಂದು ಗೊತ್ತರದೆ ಬದುಕಿನ ಗೊಂದಲದಲ್ಲಿ ಜಿವನ ಸಾಗುಸುವ ಆ ಮಗುವಿ ಕವಿತೆ ಓದಿ ನನ್ನ ಮನ ಒಂದು ಕ್ಷಣ ಕಲಿಕಿಹೊಯಿತು
ನೊಂದ ಮಗುವಿನ ನೋವಿನ ಕವಿತೆ
ಇಂತ ಕವಿತೆ ಬರೆದಿದಕ್ಕೆ ನಿಮಗೂ ನಮ್ಮ ಧನ್ಯವಾದಗಳು ಸರ್