ಮಡಿವಾಳ ಸಮಾಜದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ
ಕಾರ್ಮಿಕ ಇಲಾಖೆಯಿಂದ ಆಹಾರ ಧಾನ್ಯ ಕಿಟ್ ವಿತರಣೆ
ಮಡಿವಾಳ ಸಮಾಜದ ಬಡವರಿಗೆ ಕಿಟ್ ವಿತರಣೆ
Yadgiri, ಶಹಾಪುರಃ ಕೊರೊನಾ ಸಂಕಷ್ಟ ಕಾಲದಲ್ಲಿ ಅಸಂಘಟಿತ ಕಾರ್ಮಿಕರಾದ ಮಡಿವಾಳ ಸಮುದಾಯದವರಿಗೆ ಸರ್ಕಾರ ಆಹಾರ ಧಾನ್ಯ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ ಎಂದು ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸಪುರ ತಿಳಿಸಿದರು.
ನಗರದ ಫಕಿರೇಶ್ವರ ಮಠದ ಹತ್ತಿರದ ಬಸವಣ್ಣ ಮಂದಿರದ ಆವರಣದಲ್ಲಿ ಅಸಂಘಟಿತ ಸಮುದಾಯವಾದ ಮಡಿವಾಳ ಸಮಾಜದ ಬಡವರಿಗೆ ಕಾರ್ಮಿಕ ಇಲಾಖೆ ನೀಡಿದ ಆಹಾರ ಧಾನ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೊನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಜಾರಿಯಿಂದ ಕಾರ್ಮಿಕರು ಬದುಕು ಒಪ್ಪತ್ತಿನ ಗಂಜಿಗೂ ಹುಡುಕಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಸಮರ್ಪಕವಾಗಿ ಗುರುತಿಸಿದ ಸರ್ಕಾರ ಆಹಾರ ಧಾನ್ಯ ವಿತರಿಸುವ ಕೆಲಸ ಮಾಡಿರುವದು ಶ್ಲಾಘನೀಯವಾದದು ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಮುದನೂರ ಹಾಗೂ ನಗರಸಭೆ ಸದಸ್ಯ ಮಹೇಶ ಮಡಿವಾಳಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಸಮುದಾಯದ ತಾಲೂಕಿನ 300 ಜನರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾಯ ಮಡಿವಾಳಕರ್, ನಿವೃತ್ತ ಉಪ ತಹಸೀಲ್ದಾರ ಸಾಯಬಣ್ಣ ಮಡಿವಾಳಕರ್, ನಾಗು ಮಡಿವಾಳರ, ಲಕ್ಷ್ಮಣ ಮಡಿವಾಳ, ಮಹಾದೇವಪ್ಪ ಸಗರ, ಸಂತೋಷ ಮಡಿವಾಳ, ಪ್ರಕಾಶ ಹಳಿಸಗರ, ಮಲ್ಲಪ್ಪ ಮಾಸ್ತರ ಹಳಿಸಗರ, ಶಿವಪ್ಪ ಮಡಿವಾಳ ಹಳಿಸಗರ, ಬಸವರಾಜ ಸಗರ, ಮಲ್ಲು ಮದ್ರಿಕಿ, ಬಸವರಾಜ ಶಿರವಾಳ, ಬಸಲಿಂಗ ಹಳಿಪೇಠ ಸೇರಿದಂತೆ ಇತರರು ಉಪಸ್ಥಿತರಿದ್ದರು.