Homeಪ್ರಮುಖ ಸುದ್ದಿಮಹಿಳಾ ವಾಣಿ

Kiwi Benefits: ಪ್ರತಿ ನಿತ್ಯ ಕಿವಿ ಸೇವಿಸುವುದರಿಂದ ಹಲವು ಲಾಭ?, ಯಾವಾಗ ತಿನ್ನಬೇಕು?

ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಹಕಾರಿ ಆಗುತ್ತದೆ ಎಂಬ ಮಾತಿದೆ. ದಿನ ನಿತ್ಯ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಿದರೆ, ಜನರು ಹಲವು ಪ್ರಯೋಜನವನ್ನು ಸಹ ಪಡೆಯಬಹುದು. ಒಂದು ಸೇಬು ಹಣನ್ನು ದಿನ ನಿತ್ಯ ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂಬ ಮಾತು ಇದೆ.

ಹೀಗಾಗಿ ಊಟದ ಜೊತೆಗೆ ಅಥವಾ ಊಟದ ಬಳಿಕ ಹಣ್ಣಗಳ ಸೇವನೆಗೆ ಒತ್ತು ನೀಡಲಾಗುತ್ತದೆ.

ಮಾರುಕಟ್ಟೆಯಲ್ಲಿ ಹಲವು ಹಣ್ಣುಗಳು ಸಿಗುತ್ತವೆ. ಇನ್ನು ಋತುಮಾನಕ್ಕೆ ಅನುಗುಣವಾಗಿಯೂ ಹಣ್ಣಗಳನ್ನು ಪಡೆಯಬಹುದು. ಈ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಹಲವು ಲಾಭಗಳಿವೆ. ಗುಣಗಳ ಗಣಿಯಾಗಿರುವ ಕೆಲವು ಹಣ್ಣುಗಳಿವೆ, ಅಂದರೆ ಅವುಗಳಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಈ ಹಣ್ಣುಗಳಲ್ಲಿ ಕಿವಿಯೂ ಒಂದು, ಇತ್ತೀಚಿನ ದಿನಗಳಲ್ಲಿ ಈ ಸಿಹಿ ಮತ್ತು ಹುಳಿ ಹಣ್ಣಿನ ಜನಪ್ರಿಯತೆ ಹೆಚ್ಚಾಗಿದೆ.

ಕಿವಿ ಹಣ್ಣನ್ನು ನೋಡಿದ ತಕ್ಷಣ, ಇದು ಹಣ್ಣಾ ಇದರಿಂದೇನು ಪ್ರಯೋಜನ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಅಲ್ಲದೆ ಈ ಹಣ್ಣನ್ನು ತಿನ್ನುವುದರಿಂದ ತುಂಬಾನೇ ಲಾಭ ನೀಡುತ್ತದೆ. ಈ ಹಣ್ಣು ಬೇರೆ ಹಣ್ಣುಗಳಂತೆ ಒಂದೇ ರುಚಿಯನ್ನು ಹೊಂದಿರುವುದಿಲ್ಲ. ಈ ಹಣ್ಣಿನಲ್ಲಿ ಸಿಹಿ ಹಾಗೂ ಹುಳಿ ಎರಡೂ ರುಚಿ ಸಿಗುತ್ತದೆ. ಇದರಿಂದ ಆಗುವ ಲಾಭದ ಬಗ್ಗೆ ನೀವು ತಿಳಿದು ಕೊಂಡರೆ ನಿಜಕ್ಕೂ ನೀವು ಈ ಹಣ್ಣುಗಳ ಸೇವನೆಯನ್ನು ಹೆಚ್ಚಾಗಿ ಮಾಡಬಹುದು.

ಕಿವಿ ಹಣ್ಣಿನಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?

ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಸಿ, ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಪಾಲಿಫಿನಾಲ್ಗಳು ಕಿವಿಯಲ್ಲಿ ಹೇರಳವಾಗಿ ಇರುತ್ತದೆ. ಅಲ್ಲದೆ, ಕಿವಿ ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಹಣ್ಣು ಅಮೃತವಿದ್ದಂತೆ. ಈ ಹಣ್ಣು ಯಾವ ರೋಗಗಳಲ್ಲಿ ಪರಿಣಾಮಕಾರಿ ಎಂದು ನಾವು ನಿಮಗೆ ಹೇಳೋಣ.

ಈ ಹಣ್ಣಿನ ಸೇವನೆಯಿಂದ ಆಗುವ ಲಾಭ ಏನು?

ಈ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಬಲಪಡುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಋತುಮಾನದ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನೀವು ಕಿವಿಯನ್ನು ಸೇವಿಸಬೇಕು. ಇದರಲ್ಲಿರುವ ವಿಟಮಿನ್ ಸಿ ನಿಮ್ಮ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನೀವು ಮಲಬದ್ಧತೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನೀವು ಪ್ರತಿದಿನ 2 ರಿಂದ 3 ಕಿವಿ ಹಣ್ಣುಗಳನ್ನು ಸೇವಿಸಬಹುದು. ಈ ಹಣ್ಣಿನ ಸೇವನೆ ಮಲಬದ್ಧತೆ ಹೋಗಲಾಡಿಸಲು ಪ್ರಯೋಜನಕಾರಿ. ಇದರ ಸೇವನೆಯಿಂದ ಹೊಟ್ಟೆ ಶುದ್ಧೀಕರಿಸುವ ಗುಣ ಹೊಂದಿದೆ.

ಕಿವಿ ಹಣ್ಣಿನ ಸೇವನೆ ದೃಷ್ಟಿಗೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ. ಕಿವಿಯ ಸೇವನೆಯು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು ಅಪಧಮನಿಗಳನ್ನು ಬಲಪಡಿಸುತ್ತದೆ.

ಈ ಹಣ್ಣನ್ನು ಯಾವಾಗ ತಿಂದರೆ ಉತ್ತಮ?

ಈ ಹಣ್ಣನ್ನು ಬೆಳಿಗ್ಗೆ 10 ರಿಂದ 12 ರ ನಡುವೆ ಸೇವಿಸದರೆ ಬೆಸ್ಟ್. ಇದರಲ್ಲಿ ಹೇರಳವಾದ ಪೋಷಕಾಂಶಗಳಿದ್ದು, ಇವುಗಳು ನಿಮ್ಮ ಆರೋಗ್ಯ ಕಾಳಜಿ ವಹಿಸುತ್ತವೆ. ಇದು ಕೊಂಚ ಹುಳಿ ಇರುವುದರಿಂದ ಖಾಳಿ ಹೊಟ್ಟೆಯಲ್ಲಿ ಸೇವಿಸ ಬೇಡಿ.

Related Articles

Leave a Reply

Your email address will not be published. Required fields are marked *

Back to top button