ಹಣದಾಹಿ ನಾನಾಗಲಾರೆ.! ಕಾವ್ಯ ಪಾಠ ಮುದ್ನೂರ ರಚಿತ ಓದಿ ಕಾಮೆಂಟ್ ಮಾಡಿ
ಹೊಗಳುಭಟ್ಟ ನಾನಾಗಲಾರೆ.? ಹಣದಾಹಿಯೂ ನಾನಲ್ಲ.!

ಹಣದಾಹಿ ನಾನಾಗಲಾರೆ.!
ಸುಳ್ಳು ಹೇಳಲಿ, ಮೋಸ ಮಾಡಿ ಹಣ ಗಳಿಸಲಿ, ಅವರನ್ನ ದೊಡ್ಡವರು, ಶ್ರೀಮಂತ, ಒಳ್ಳೆ ದುಡ್ಡು ಮಾಡಿದಿ, ನಿನ್ನ ಕೈ ಮೇಲೆ ಎಲ್ಲಾ ಮಾಡಿದ್ದು, ಭೇಷ್ ಎಂದು ಹೊಗಳುತ್ತಿದ್ದರೆ ನಿನಗೆ ಗೌರವ.
ನೀವೇನ್ ಮಹಾ, ಅಡ್ಡ ದಾರಿಯಿಂದ ಕೆಟ್ಟ ನಡೆಯಿಂದ ಗಳಿಸಿದ್ದೀರಿ ಎಂದು ಎದುರಿಗೆ ಅನ್ನದಿದ್ದರೂ, ಅವರ ಸಂಪತ್ತಿಗೆ ಅವರಿಗೆ ಗೌರವ ನೀಡದಿರೆ, ನಮ್ಮನ್ನೆನ್ನುವರು ಸೊಕ್ಕಿನವನು, ಅದರ ಹತ್ರ ಏನಿಲ್ಲ ಭಿಕಾರಿನೇ ಎಂದೂ ದೂರ ತಳ್ಳುವರು.
ಸತ್ಯ, ಧರ್ಮದ ಹಾದಿ ತುಳಿದು ಸಾತ್ವಿಕ ಬದುಕು ಕಟ್ಟಿಕೊಂಡಿದ್ದರೂ ಅದೇನ್ ಮಾಡ್ಲಿಲ್ಲ, ಗಳಿಸ್ಲಿಲ್ಲ ಕಳಿಲೂ ಇಲ್ಲ ಎಂದೂ ಹಿಂದೆ, ಮುಂದೆ ಗಹಗಹಿಸಿ ನಗುವರು, ಹಣದಾಹಿಗಳು.
ಒಂದ್ ನೆನಪಿರಲಿ ಹಣದಾಹಿ ಆಗಲೂ ನನಗೂ ಬರುತ್ತೆ, ನಿಮ್ಮಂಥ ಅಡ್ಡ ದಾರಿ ತುಳಿದರೆ ನೀವು ತೆಗೆದುಕೊಂಡ ಸಮಯ ನನಗೆ ಬೇಕಿಲ್ಲ. ಕೇವಲ ಕ್ಷಣಾರ್ಧ ಸಾಕು ನಿಮ್ಮೆಲ್ಲರಿಗಿಂಥ ಹಣವಂತ, ಆಸ್ತಿವಂತ ಆಗಬಲ್ಲೆ.
ಆದರೆ ಅಂತ ನಡೆ ನನಗೆ ಬೇಕಿಲ್ಲ. ನಾನೇನಿದ್ರೂ ಹಣದಾಹಿಯಾಗಲಾರೆ, ನ್ಯಾಯ, ಧರ್ಮ, ಮಮತೆ, ಮಾನವೀಯತೆಯ ಸರಳ, ಸಮಾಧಾನದಿ ಜೀವಪರದಿ ಬದುಕುವವ ತಿಳಿದಿರಲಿ.
– ಮಲ್ಲಿಕಾರ್ಜುನ ಮುದ್ನೂರ