ನಾಗರ ಕಟ್ಟೆಗೆ ತೆರಳಿ ಹಾಲೆರೆದ ಮಹಿಳೆಯರು
yadgiri, ಶಹಾಪುರಃ ನಾಗರ ಪಂಚಮಿ ಹಬ್ಬದ ಹಿನ್ನೆಲೆ ಮಹಿಳೆಯರು ಮಂಗಳವಾರ ನಗರದ ನಾಗರ ಕೆರೆ ಬಳಿಯ ನಾಗರ ಕಟ್ಟೆ ಹಾಗೂ ಶೀಲವಂತೇಶ್ವರ ದೇವಾಲಯ ಬಳಿ ನಾಗ ದೇವತೆಗಳಿ ಹಾಲೆರೆದು ಸಂಪ್ರದಾಯದಂತೆ ಆಚರಣೆ ಮಾಡಿದರು. ಆದರೆ ಬೆಳಗ್ಗೆ ಮಳೆಯಿಂದಾಗಿ ಹಾಲೆರೆಯಲು ಒಂದಿಷ್ಟ ತಡವಾಗಿದೆ ಎಂದು ಮಹಿಳೆಯರು ತಿಳಿಸಿದರು.
ತಾಲೂಕಿನ ಸಗರ ಗ್ರಾಮದಲ್ಲಿ ನಾಗರ ಪಂಚಮಿಗೆ ಯಾವುದೇ ಮಳೆ ಅಡ್ಡಿಯಾಗದ ಕಾರಣ ಪಂಚಮಿ ಹಬ್ಬದ ಸೊಗಡು ಕಂಗೊಳಿಸುತಿತ್ತು.
ಸಗರ ಗ್ರಾಮ ಹೊರ ವಲಯದಲ್ಲಿರು ನಾಗರ ಕಟ್ಟೆಗೆ ತೆರಳಿ ಮಹಿಳೆಯರು, ಮಕ್ಕಳು ತಂಬಿಟ್ಟು, ನವಣಿ ಅನ್ನ ನೈವೇದ್ಯ ಸಮರ್ಪಿಸಿ ಹೂ ಕಾಯಿ ಅರ್ಪಿಸಿ ಹಾಳೆರೆದು ಪೂಜೆ ಸಲ್ಲಿಸಿದರು. ನಂತರ ನಾಗರ ಕಟ್ಟೆ ಸಮೀಪ ಬೆಳೆದ ಹಸಿರು ಕರ್ಕಿ (ಹುಲ್ಲು), ಕಲ್ಲರಳು (ಸಣ್ಣ ಸಣ್ಣ ಕಲ್ಲುಗಳು) ತೆಗೆದುಕೊಂಡು ತಮ್ಮ ತಮ್ಮ ಮನೆಯ ಬಾಗಿಲ ಬಳಿ ಹೊಸ್ತಿಲದ ಎಡ, ಬಲ ಬದಿ ಇಟ್ಟು ಪದ್ಧತಿಯಂತೆ ಆಚರಿಸಿ ಧನ್ಯತಾ ಭಾವ ಮೆರೆದರು.
ನಂತರ ಸಗರ ಗ್ರಾಮದ ಕೆಲ ಬಡಾವಣೆಯಲ್ಲಿ ಮಹಿಳೆಯರು, ಯುವತಿಯರು ಜೋಕಾಲಿ ಆಡವು ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಮನೆಯಲ್ಲಿ ಮಾಡಿದ ವಿವಿಧ ಖಾದ್ಯ ಪದಾರ್ಥಗಳನ್ನು ತಿಂದು ಸಂಭ್ರಮಿಸಿದರು.