ಜೋಡು ಪಲ್ಲಕ್ಕಿ ಉತ್ಸವಕ್ಕೆ ಬ್ರೇಕ್ ಹಾಕಿದ ಕೋವಿಡ್

ಇತಿಹಾಸದಲ್ಲಿ ಮೊದಲ ಬಾರಿಗೆ ಪಲ್ಲಕ್ಕಿ ಉತ್ಸವ ಸ್ಥಗಿತ
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ನಗರದಲ್ಲಿ ಪ್ರತಿ ವರ್ಷ ಧಾರ್ಮಿಕವಾಗಿ ವೈಭವಯುತವಾಗಿ ನಡೆಯುವ ಭೀ.ಗುಡಿ ಬಲಭೀಮೇಶ್ವರ ಮತ್ತು ದಿಗ್ಗಿಯ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ ಈ ಬಾರಿ ಕೋವಿಡ್ ಹಿನ್ನೆಲೆ ರದ್ದಾಗಿದ್ದು, ಭಕ್ತಾಧಿಗಳಲ್ಲಿ ಬೇಸರ ತರಿಸಿದೆ.
ಶಹಾಪುರ ನಗರದಲ್ಲಿ ಸಂಕ್ರಾಂತಿ ವೈಭವ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂದರೆ ತಪ್ಪಾಗಲಾರದು. ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಇಲ್ಲಿನ ದಿಗ್ಗಿ ಸಂಗಮೇಶ್ವರ ಮತ್ತು ಭೀಮರಾಯನ ಗುಡಿ ಬಲಭೀಮೇಶ್ವರರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವ ಅಂದು ಬೆಳಗ್ಗೆ ಸಮೀಪದ ಹುರಸಗುಂಡಿಗಿ ಭೀಮಾ ನದಿಗೆ ಗಂಗಾ ಸ್ನಾನಕ್ಕೆ ತೆರಳಿ ರಾತ್ರಿ ವಾಪಸ್ ನಗರದಲ್ಲಿ ವಿಜೃಂಭಣೆಯಿಂದ ಜೋಡು ಪಲ್ಲಕ್ಕಿ ಮೆರವಣಿಗೆ ಜರುಗುತಿತ್ತು. ವಿವಿಧ ರಾಜ್ಯ ಮತ್ತು ಹಲವಾರು ಜಿಲ್ಲೆಗಳಿಂದ ಸುತ್ತಮುತ್ತಲಿನ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಿದ್ದರು.
ಸಾಕಷ್ಟು ಪಾರಂಪರಿಕವಾಗಿ ವೈಭವಯುತವಾಗಿ ನಡೆಯುವ ಪಲ್ಲಕ್ಕಿ ಉತ್ಸವ ಇದೇ ಮೊದಲ ಬಾರಿಗೆ ಕೋವಿಡ್ ಹಿನ್ನೆಲೆ ರದ್ದಾಗಿದೆ. ಅಲ್ಲದೆ ಶನಿವಾರ ನಡೆಯಬೇಕದ ಭೀಮರಾಯನ ಗುಡಿ ಜಾತ್ರೆಯು ರದ್ದಾಗಿದೆ. ಹೀಗಾಗಿ ಭಕ್ತಾಧಿಗಳಲ್ಲಿ ಬೇಸರ ಮೂಡಿಸಿದೆ.
ಕೋವಿಡ್ ಹಿನ್ನೆಲೆ ಜಿಲ್ಲಾಡಳಿತ ಪಲ್ಲಕ್ಕಿ ಉತ್ಸವಕ್ಕೆ ಬ್ರೇಕ್ ಹಾಕಿದೆ. ಆದಾಗ್ಯೂ ಭಕ್ತಾಧಿಗಳು ಬಲಭೀಮೇಶ್ವರರ ಮತ್ತು ಸಂಗಮೇಶ್ವರರ ಉತ್ಸವ ಮೂರ್ತಿಗಳನ್ನು ಕಾರೊಂದರಲ್ಲಿ ಒಯ್ದು ಗಂಗಾಸ್ನಾನ ಮಾಡಿ ವಾಹನಗಳ ಮೂಲಕ ಮತ್ತು ಭಕ್ತಾಧಿಗಳು ಬೈಕ್ ಮೇಲೆ ದೇವಸ್ಥಾನ ತಲುಪುವ ಕಾರ್ಯ ಜರುಗಿತು. ದೇವಸ್ಥಾನದಲ್ಲಿ ಭಕ್ತಾಧಿಗಳು ಶ್ರೀದೇವರ ದರ್ಶನ ಪಡೆದು ಧನ್ಯತಭಾವ ಅರ್ಪಿಸಿದರು ಕಂಡು ಬಂದಿತು. ಇದೇ ಸಂದರ್ಭದಲ್ಲಿ ಕೋವಿಡ್ ಮಹಾಮಾರಿ ಇಡಿ ಜಗತ್ತಿನಿಂದಲೇ ಮಾಯವಾಗಲಿ ಯಾವುದೇ ಅಪಾಯ ತರದಿರಲಿ ಎಂದು ಪ್ರಾರ್ಥಿಸಲಾಯಿತು.
ಕೋವಿಡ್ ಹಿನ್ನೆಲೆ ಈ ಬಾರಿ ಯಾವುದೇ ಉತ್ಸವ, ಜಾತ್ರೆ, ಮೆರವಣಿಗೆಗಳಿಗೆ ಆಸ್ಪದ ಇರುವದಿಲ್ಲ. ಎಲ್ಲರೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೀಗಾಗಿ ಭೀ.ಗುಡಿ ಮತ್ತು ದಿಗ್ಗಿ ಶ್ರೀದೇವರ ಪಲ್ಲಕ್ಕಿ ಉತ್ಸವ ರದ್ದು ಪಡಿಸಲಾಗಿದೆ.
-ಮಧುರಾಜ್ ಕೂಡ್ಲಿಗಿ. ತಹಸೀಲ್ದಾರ.
ಕೋವಿಡ್ ತೀವ್ರತೆ ಹಿನ್ನೆಲೆ ಈ ಬಾರಿ ಪಲ್ಲಕ್ಕಿ ಉತ್ಸವ ರದ್ದು ಪಡಿಸಲಾಗಿದೆ. ಭಕ್ತಾಧಿಗಳು ಮನೆಯಲ್ಲಿಯೇ ಶ್ರೀದೇವರ ಪೂಜೆ ಮಾಡಬೇಕು. ಜಗತ್ತಿನಿಂದಲೇ ಕೋವಿಡ್ ಮಹಾಮಾರಿ ಓಡಿ ಹೋಗಲಿ ಎಂದು ಪ್ರಾರ್ಥಿಸಿ. ಈ ಬಾರಿ ಪಲ್ಲಕ್ಕಿ ಉತ್ಸವ ರದ್ದಾದ ಹಿನ್ನೆಲೆ ವಯಕ್ತಿಕವಾಗಿ ನೋವಾಗಿದೆ. ಆದರೆ ಅನಿವಾರ್ಯ. ಪರಂಪರೆ, ಸಾಂಪ್ರದಾಯಿಕವಾದ ಧಾರ್ಮಿಕ ಆರಣೆಗೆ ಇದೇ ಬಾರಿ ರದ್ದಾಗಿದೆ. ಆದರೂ ಕೆಲವೇ ಯುವಕರು ಕೋವಿಡ್ ನಿಯಮಗಳನ್ನು ಅನುಸರಿಸಿ ವಾಹನದಲ್ಲಿ ಶ್ರೀಮೂರ್ತಿ ಒಯ್ದು ಗಂಗಾಸ್ನಾನ ಮಾಡಿಕೊಂಡು ಬರಲಾಗಿದೆ.
-ರಾಯಪ್ಪ ಸಾಲಿಮನಿ. ಮಾಜಿ ಅಧ್ಯಕ್ಷರು, ನಗರಸಭೆ ಶಹಾಪುರ.