ಪ್ರಮುಖ ಸುದ್ದಿ
ದೇಶದ ಜನತೆಗೆ ಮಾ ದುರ್ಗಾ ಶಕ್ತಿಯ ಆಶೀರ್ವಾದವಿರಲಿ-ಪ್ರಧಾನಿ ಮೋದಿ
ವಿವಿ ಡೆಸ್ಕ್ಃ ಪ್ರಪಂಚದಾದ್ಯಂತ ದುರ್ಗಾ ಮಾತೆಯ ಪೂಜೆ, ಉತ್ಸವಗಳು ತುಂಬಾ ಹುರುಪಿನಿಂದ ನಡೆಯುತ್ತಿದ್ದು, ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಹಬ್ಬದ ಶುಭಾಶಯಗಳು ಎಂದು ಟ್ವಿಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಾ ದುರ್ಗಾ ಶಕ್ತಿ, ಧೈರ್ಯ ಮತ್ತು ಸಹಾನುಭೂತಿಯನ್ನು ನಿರೂಪಿಸುವ ಶಕ್ತಿ ಮಾತೆ. ನಮ್ಮ ಸಮಾಜದ ಯೋಗಕ್ಷೇಮಕ್ಕಾಗಿ ದುರ್ಗಾ ಮಾತೆಯ ಆಶೀರ್ವಾದವನ್ನು ನಾವೆಲ್ಲ ಬಯಸುತ್ತೇವೆ. ಈ ಶುಭ ಸಂದರ್ಭದಲ್ಲಿ ಮಾ ದುರ್ಗಾ ಮಾತೆ ದೇಶದ ಜನರನ್ನು ಕ್ಷೇಮವಾಗಿಡಲಿ ಎಂದು ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.