ಪ್ರಮುಖ ಸುದ್ದಿ
ಪ್ರಿಯಾಂಕ್ ಗೆ ಸಿಐಡಿಯಿಂದ 3 ನೇ ನೋಟಿಸ್- ನೋಟಿಸ್ ನೀಡುವ ಅಧಿಕಾರ ಸಿಐಡಿಗಿಲ್ಲ ಎಂದ ಸಿದ್ರಾಮಯ್ಯ
ಗೃಹ ಸಚಿವರ ಬೇಜವಾಬ್ದಾರಿ ಸಿದ್ರಾಮಯ್ಯ ಆಕ್ರೋಶ
ಗೃಹ ಸಚಿವರ ಬೇಜವಾಬ್ದಾರಿ ಸಿದ್ರಾಮಯ್ಯ ಆಕ್ರೋಶ
ಸಿಐಡಿ ತನುಖೆ ವಿಶ್ವಾಸವಿಲ್ಲ, ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿ ತನಿಖೆಯಾಗಲಿ – ಸಿದ್ದು
ಬೆಂಗಳೂರಃ ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆದಿದೆ ಎಂದು ಅದರ ಸುಳಿವು ಅರಿತು ಸಚಿವ ಪ್ರಭು ಚವ್ಹಾಣ ಮತ್ತು ಎಂಎಲ್ಸಿಗಳು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಆಗ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರು ಸುಳ್ಳು ಹೇಳಿದ್ದಾರೆ. ಇವರು ಅಸಮರ್ಥ ಸಚಿವರು, ಆಗಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕಿತ್ತು.
ಸಂಬಂಧಿಸಿದ ಆಫೀಸರ್ ಗಳನ್ನು ವರ್ಗಾವಣೆ ಮಾಡುವ ಮೂಲಕ ಮೌನವಹಿಸಿದ್ದೇಕೆ.? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಆಕ್ರೋಶ ವ್ಯಕ್ತಪಡಿಸಿದ ಅವರು, ಪತ್ರಕರ್ತರು ಕೇಳಿದ ಪ್ರಿಯಾಂಕ್ ಖರ್ಗೆ ಸಿಐಡಿ ನೋಟಿಸ್ ನೀಡಿದೆ ಎಂಬ ಪ್ರಶ್ನೆಗೆ ಸಿಐಡಿಗೆ ನೋಟಿಸ್ ಕೊಡುವ ಅಧಿಕಾರವೇ ಇಲ್ಲ. ಪ್ರಿಯಾಂಕ್ ಏನು ಅಪರಾಧಿನಾ..ಅಥವಾ ಸಾಕ್ಷಿದಾರನಾ.? ಬೇಕಿದ್ರೆ ಪ್ರಿಯಾಂಕ್ ಇದ್ದಲ್ಲಿಗೆ ಹೋಗಿ ಮಾಹಿತಿ ಪಡೆಯಲಿ ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.