ಸ್ನೇಹಿತ ನಟ ಪುನೀತ್ ಜವಬ್ದಾರಿ ಹೊತ್ತ ತಮಿಳು ನಟ ವಿಶಾಲ್

ಪುನೀತ್ ಓದಿಸುತ್ತಿದ್ದ 1800 ಮಕ್ಕಳ ಜವಬ್ದಾರಿ ಹೊತ್ತ ತಮಿಳು ನಟ ವಿಶಾಲ್
ವಿವಿ ಡೆಸ್ಕ್ಃ ಸ್ನೇಹಿತ ಪ್ರತಿಭಾವಂತ ನಟ ಪುನೀತ್ ರಾಜಕುಮಾರ ಇದುವರೆಗೂ 1800 ಮಕ್ಕಳನ್ನು ಶೈಕ್ಷಣಿಕವಾಗಿ ಇತರೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಅವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದು, ಪ್ರಸ್ತುತ ಪುನೀತ್ ನಮ್ಮೆಲ್ಲರನ್ನು ಅಗಲಿದ್ದಾರೆ. ಹೀಗಾಗಿ ಸ್ನೇಹಿತ ಅಪ್ಪು ನೋಡಿಕೊಳ್ಳುತ್ತಿದ್ದ ಆ 1800 ಮಕ್ಕಳ ಜವಬ್ದಾರಿ ನನ್ನದು ಎಂದು ತಮಿಳು ನಟ ವಿಶಾಲ್ ತಿಳಿಸಿದ್ದಾರೆ.
ನಟ ಪುನೀತ್ ಬರಿ ನಟನೆಯಲ್ಲಿ ಮಾತ್ರ ಪ್ರತಿಭಾವಂತ ಅಲ್ಲ ಆತ ಹೃದಯವಂತನು ಕೂಡ. ಮುಂದಿನ ವರ್ಷದಿಂದ ಆ 1800 ಮಕ್ಕಳ ಜವಬ್ದಾರಿ ನನ್ನದು.
ಪುನೀತ್ ಅವರ ಸಮಾಜ ಸೇವೆಯ ಮಾದರಿ ನಡೆ ನನಗೆ ಸ್ಪೂರ್ತಿ ನೀಡಿದೆ. ಸ್ನೇಹಿತನಂತೆ ಸೇವೆ ಮಾಡಬೇಕೆಂಬ ಹಂಬಲ ನನ್ನದು ಎಂದು ಅವರು ಕಾರ್ಯ ಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಪುನೀತ್ ಇಲ್ಲದೆ ಆ ಮಕ್ಕಳು ಅದೆಷ್ಟು ಕೊರಗುತ್ತಿವೆಯೋ ಪಾಪ. ಇಂತಹ ಸಂದರ್ಭ ತಮಿಳು ನಟ ಪುನೀತ್ ಸ್ನೇಹಿತ ವಿಶಾಲಗ ಜವಬ್ದಾರಿ ಹೊರಲು ಮುಂದೆ ಬಂದಿರುವದು ಕಣ್ಣಾಲೆ ತುಂಬಿಸಿದೆ.
ಮಕ್ಕಳ ಭವಿಷ್ಯ ಚಂದಾಗಿರಲಿ ಅವರ ಶೈಕ್ಷಣಿಕ ಅಭ್ಯಾಸ ನಿಲ್ಲದಿರಲಿ ಎಂಬುದೇ ವಿನಯವಾಣಿಯ ಸದುವಿನಯ ಪ್ರಾರ್ಥನೆ.