ನಟಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ
ಹೈದರಾಬಾದನ ಪ್ರತಿಷ್ಟಿತ ಆಸ್ಪತ್ರೆಗೆ ನಟಿ ರಶ್ಮಿಕಾ ದಾಖಲು
ನಟಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ
ಹೈದರಾಬಾದನ ಪ್ರತಿಷ್ಟಿತ ಆಸ್ಪತ್ರೆಗೆ ನಟಿ ರಶ್ಮಿಕಾ ದಾಖಲು
ವಿವಿ ಡೆಸ್ಕ್ಃ ದಕ್ಷಿಣದ ಹೆಸರಾಂತ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೌದು ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆಗಾಗಿ ಹೈದ್ರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಅವರ ಅಭಿಮಾನಿಗಳಲ್ಲಿ ದುಗುಡ ಹೆಚ್ಚಾಗಿದೆ. ಎನಾಯಿತು ರಶ್ಮಿಕಾಗೆ ಎಂದು ಎಲ್ಲಡೆ ಆತಂಕದ ದುಗುಡದ ಮೆಸೇಜ್, ಮಾತುಗಳು ಕೇಳಿ ಬರುತ್ತಿವೆ.
ಅವರಿಗೆ ಚಿಕಿತ್ಸೆ ನೀಡುತ್ತಿರುವ ಆರ್ಥೋ ಸ್ಪೆಷಲಿಸ್ಟ್ ವೈದ್ಯ ಗುರುವಾ ರಡ್ಡಿ ಮಾಧ್ಯಮದೊಂದಿಗೆ ಮಾತನಾಡಿ, ನಟಿ ರಶ್ಮಿಕಾ ಅವರಿಗೆ ಒಂದಿಷ್ಟು ಮೊಣಕಾಲಿನ ನೋವಿನ ಸಮಸ್ಯೆಯಾಗಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದಿದ್ದು, ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ. ಮತ್ತೆ ಅವರು ಚಿತ್ರಗಳಲ್ಲಿ ನಟಿಸಲಿದ್ದಾರೆ.
ಮತ್ತೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.