ಪ್ರಮುಖ ಸುದ್ದಿಸಂಸ್ಕೃತಿ

ಪಠ್ಯದಾಚೆಗಿನ ಜಗತ್ತಿನ ಅರಿವು ಮಕ್ಕಳಿಗಿರಲಿ – ಡಿವೈಎಸ್ಪಿ ಮಂಜುನಾಥ

ನವೋದಯ ಶಾಲೆಯಲ್ಲಿ ಸಗರಾದ್ರಿ ಸಾಂಸ್ಕೃತಿಕ ವೈಭವ

ನವೋದಯ ಶಾಲೆಯಲ್ಲಿ ಸಗರಾದ್ರಿ ಸಾಂಸ್ಕೃತಿಕ ವೈಭವ

ಪಠ್ಯದಾಚೆಗಿನ ಜಗತ್ತಿನ ಅರಿವು ಮಕ್ಕಳಿಗಿರಲಿ – ಡಿವೈಎಸ್ಪಿ ಮಂಜುನಾಥ

Yadgiri, ಶಹಾಪುರಃ ಸಾಂಸ್ಕೃತಿಕ ಕ್ಷೇತ್ರ ಮನುಷ್ಯನ ಒತ್ತಡ ಕಡಿಮೆ ಮಾಡಲಿದೆ ಅಲ್ಲದೆ ಮನಸ್ಸಿಗೆ ಮುದ, ಸಂತೋಷ ನೀಡಲಿದೆ. ಹೀಗಾಗಿ ಮನುಷ್ಯ ಅಭಿರುಚಿಗೆ ತಕ್ಕಂತೆ ಆಯಾ ಕಲೆ, ಹಾಡು, ನೃತ್ಯ, ಅಭಿನಯ ಸೇರಿದಂತೆ ವಾದ್ಯಗಳನ್ನು ನುಡಿಸುವದು ಇತರೆ ಕಲೆಗಳಲ್ಲಿ ತೊಡಗಿಸಿಕೊಂಡಲ್ಲಿ ಮನುಷ್ಯನ ವೃತ್ತಿ ಜೀವನಕ್ಕೆ ಸ್ಪೂರ್ತಿಯಾಗಲಿದೆ ಎಂದು ಸುರಪುರ ವಲಯ ಡಿವೈಎಸ್ಪಿ ಡಾ.ಟಿ.ಮಂಜುನಾಥ ತಿಳಿಸಿದರು.

ತಾಲೂಕಿನ ಹೋತಪೇಟ ಗ್ರಾಮ ಸಮೀಪದ ನವೋದಯ ಶಾಲಾ ಭವನದಲ್ಲಿ ಶ್ರೀಚರಬಸವೇಶ್ವರ ಸಂಗೀತ ಸೇವಾ ಸಮಿತಿಯ ೧೨ ನೇ ವಾರ್ಷಿಕೋತ್ಸವ ಹಿನ್ನೆಲೆ ಸಗರಾದ್ರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯದಾಚೆಗಿನ ಜಗತ್ತು ಹೇಗಿದೆ ಎಂಬುದರ ಅರಿವು ಮಕ್ಕಳಿಗೆ ಇರಬೇಕು. ಸಾಂಸ್ಕೃತಿಕ ಇತರೆ ಕಲೆಗಳಲ್ಲಿ ಭಾಗವಹಿಸಿದರೆ ಶೈಕ್ಷಣಿಕ ಅಭಿವೃದ್ಧಿಗೆ ಪಎಟ್ಟು ಬೀಳುತ್ತದೆ ಎಂಬ ಭಯವಿದ್ದಲ್ಲಿ ಅದನ್ನು ತೊಡೆದು ಹಾಕಿ, ಶಿಕ್ಷಣದ ಜೊತೆಗೆ ಆಸಕ್ತ ಕ್ಷೇತ್ರಗಳಾದ ಸಾಹಿತ್ಯ, ಕಲೆ, ಹಾಡು ಇತರೆ ವಿಭಾಗಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಉತ್ತಮ ಅಭ್ಯಾಸ ಮಾಡುವ ಮೂಲಕ ತಂದೆ ತಾಯಿಯರ ಕನಸು ನನಸು ಮಾಡಬೇಕು. ಆಸಕ್ತ ಕ್ಷೇತ್ರಗಳಲ್ಲೂ ತಮ್ಮ ಪರತಿಭೆಯನ್ನು ಹೊರ ಹಾಕಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿ ಸಂಸ್ಥಾಪಕ, ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಮಕ್ಕಳಲ್ಲಿ ಸಾಂಸ್ಕೃತಿಕ ಅಭಿರುಚಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಗರನಾಡಿನಾದ್ಯಂತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಭಾಗದ ಜಾನಪದ, ಡೊಳ್ಳು ಕುಣಿ, ನಾಟಕೋತ್ಸವ ಇತರೆ ಕಲೆಗಳನ್ನು ಗುರುತಿಸುವ ಮತ್ತು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಿತಿ ಶ್ರಮವಹಿಸುತ್ತಿದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರು ಕಾಮಾ ಮಾತನಾಡಿದರು. ನವೋದಯ ವಿದ್ಯಾಲಯದ ಪ್ರಾಂಶುಪಾಲ ಬಿ.ಗೋವಿಂದರಾವ್ ಅಧ್ಯಕ್ಷತೆವಹಿಸಿದ್ದರು. ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಅಭಾವೀಲಿಂ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಮಹೇಶ ಆನೇಗುಂದಿ, ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಜಾನಪಾದ ನೃತ್ಯಗಳು ಮತ್ತು ಜಾನಪದ ಹಾಡುಗಾರ ನೀಲಪ್ಪ ಚೌದ್ರಿ, ಮಿಮಿಕ್ರಿಮಿ ಕಲಾವಿದ ಸುನೀಲ್ ಶಿರ್ಣಿ, ಕಲಾವಿದರಾದ ಬಾಲು ಸೇರಿದಂತೆ ಇತರರು ಕಲೆಯನ್ನು ಪ್ರದರ್ಶನ ನೀಡುವ ಮೂಲಕ ಮಕ್ಕಳ ಮನ ಗೆದ್ದರು.

Related Articles

Leave a Reply

Your email address will not be published. Required fields are marked *

Back to top button