20 ವರ್ಷ ವೀರ ಯೋಧನಾಗಿ ಸೇವೆ ಸಲ್ಲಿಸಿದ ಮಡಿವಾಳರ ಹುಲಿ

20 ವರ್ಷ ದೇಶ ಸೇವೆ ಸಲ್ಲಿಸಿದ ಮಡಿವಾಳರ ಕುಡಿ
ನರಗುಂದಃ ಭಾರತದ ಹೆಮ್ಮೆಯ ಪುತ್ರ ನರಗುಂದದ ಮಡಿವಾಳರ ಕುಟುಂಬದ ಸುಪುತ್ರ ಸಂಗಪ್ಪ ಮಡಿವಾಳರ ಅವರು ಕಳೆದ 20 ವರ್ಷದಿಂದ ಭಾರತದ ವೀರ ಯೋಧನಾಗಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು, ಕುಟುಂಬಸ್ಥರು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮಡಿವಾಳ ಸಮಾಜದಲ್ಲಿ ಜನಿಸಿದ ವೀರಪುತ್ರ ಸಂಗಪ್ಪ ಯುದ್ಧಭೂಮಿಯಲ್ಲಿ ಪರಾಕ್ರಮ ಮೆರೆದು ವೈರಿಗಳ ಸದ್ದಡುಗಿಸಿದ ಧೀರ. ಸೈನಿಕರು ದೇಶದ ಗಡಿಯುದ್ದಕ್ಕೂ ಕಾಯುವ, ಹೋರಾಡುವ ಮೂಲಕ ತಮ್ಮ ಪ್ರಾಣ ಪಣಕ್ಕಿಟ್ಟು ದೇಶದ ರಕ್ಷಣೆ ಮಾಡುತ್ತಿದ್ದಾರೆ.
ದೇಶದ ಯೋಧರೆಲ್ಲ ನಮ್ಮ ರಕ್ಷಣೆಗೆ ಇದ್ದಾರೆ ಎಂಬ ನಂಬಿಕೆಯಿಂದಲೇ ನಾವೆಲ್ಲ ಸಮಧಾನದ, ಆತಂಕವಿಲ್ಲದ ಜೀವನ ನಡೆಸುತ್ತಿದ್ದೇವೆ. ಇಂದು ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸಲು ಹುಟ್ಟೂರಿಗೆ ಬರುತ್ತಿರುವ ಯೋಧ ಸಂಗಪ್ಪನನ್ನು ನಾವೆಲ್ಲ ಬರ ಮಾಡಿಕೊಂಡು ಆತನ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹರಸೋಣ.
ಆತನಿಗೆ ಗೌರವದ ಪ್ರೀತಿಯ ನಮನಗಳನ್ನು ಸಮರ್ಪಿಸೋಣ. ಆತ ಎಲ್ಲೇ ಎದುರಾದರೂ ಗೌರವಿಸೋಣ ಆತನ ಸುಖ ದುಃಖದಲ್ಲಿ ನಾವೆಲ್ಲ ಭಾಗಿಯಾಗೋಣ ಜೈ ಹಿಂದ್..ಭಾರತ ಮಾತಾಕೀ ಜೈ..
– ಸಂ.ವಿನಯವಾಣಿ