ಶಿವಾನಂದ ನಲವಡೆಗೆ ಶಹಾಪುರದಲ್ಲಿ ಸನ್ಮಾನ

ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಉಪಾಧ್ಯಕ್ಷರಿಗೆ ಸನ್ಮಾನ
yadgiri, ಶಹಪುರಃ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಕರ್ನಾಟಕ ರಾಜ್ಯ ಘಟಕದ ನೂತನ ಉಪಾಧ್ಯಕ್ಷರನ್ನಾಗಿ ನೇಮಕಗೊಂಡ ಜಮಖಂಡಿ ತಾಲೂಕಿನ ಶಿವಾನಂದ ಎಸ್.ನಲವಡೆ ಅವರನ್ನು ನಗರದ ರಾಜೂ ಜ್ಯೂವೆಲರ್ಸ್ ನಲ್ಲಿ ಗೆಳೆಯರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ರಾಜೂ ಬೊಮ್ಮನಳ್ಳಿ, ಭ್ರಷ್ಟಾಚಾರ ವಿರುದ್ಧ ಹೋರಾಡಲು ಮುಂದಾದ ವ್ಯಕ್ತಿಗೆ ನಾವೆಲ್ಲ ಬೆಂಬಲಿಸುವ ಅಗತ್ಯವಿದೆ. ಬಡವರ, ಶೋಷಿತರ ಪರವಾಗಿ ನ್ಯಾಯ ಒದಗಿಸಲು ಸಮಿತಿ ಪದಾಧಿಕಾರಿಗಳು ಹೋರಾಟ ನಡೆಸಲಿದ್ದಾರೆ. ಇಂತಹ ಸಂಘಟನೆಗೆ ನಾವೆಲ್ಲ ಬಲ ತುಂಬುವದು ಅಗತ್ಯವಿದೆ. ಮೋದಿಯವರು ಪ್ರಧಾನಿಯಾದ ಮೇಲೆ ಭ್ರಷ್ಟಾಚಾರ, ಹಗರಣಗಳು ಕಡಿಮೆಯಾಗಿರುವದು ತಿಳಿದು ಬರುತ್ತದೆ. ಪ್ರಧಾನಿಯವರು ಭ್ರಷ್ಟಾಚಾರದ ವಿರುದ್ಧ ದೇಶದ ಅಭಿವೃದ್ಧಿ ಪಥದತ್ತ ಒಯ್ಯಲು ಹಲವಾರು ಕಠಿಣ ಕ್ರಮ ನಿರ್ಧಾರಗಳನ್ನು ಕೈಗೊಂಡಿದ್ದು, ಅವುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತರಬೇಕಿದೆ ಎಂದರು.
ಆ ನಿಟ್ಟಿನಲ್ಲಿ ನೂತನ ಸಮಿತಿ ಉಪಾಧ್ಯಕ್ಷ ಭ್ರಷ್ಟಾಚಾರ ಎಸಗುವವರ ವಿರುದ್ಧ ಸೆಣಸಾಡಲು ದೇವರು ಅವರಿಗೆ ಅಪಾರ ಶಕ್ತಿ ತುಂಬಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಘವೇಂದ್ರ ಪತ್ತಾರ ಸರಾಫ್ ಬಜಾರ್ ಪ್ರಮುಖರು ಇದ್ದರು.