Homeಪ್ರಮುಖ ಸುದ್ದಿ

Scholarship: ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

(Scholarship; ) ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2024-25 ಸಾಲಿನ ನೆಕ್ಸ್ಟ್ ಜೆನ್ ಎಜು ಸ್ಮಾಲರ್ ಶಿಪ್ ನೀಡುತ್ತಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಹರು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಇವೈ ಗ್ಲೋಬಲ್ ಡೆಲಿವರಿ ಸರ್ವೀಸಸ್ ನ ಸಹಯೋಗದಲ್ಲಿ ಬಡ್ಡಿ4ಸ್ಟಡೀಯು ಸಾಮಾಜಿಕ ಪ್ರಭಾವದ ಉಪಕ್ರಮವಾದ ನೆಕ್ಸ್ಟ್ ಜೆನ್ ಎಜು ಸ್ಮಾಲರ್‌ ಶಿಪ್ 2024-25 ರ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಇದಕ್ಕಾಗಿ ಭಾರತದಾದ್ಯಂತ ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿರುವಂತಹ 11 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* ಭಾರತದಾದ್ಯಂತ ಖಾಸಗಿ / ಸರ್ಕಾರಿ ಶಾಲೆಗಳಲ್ಲಿ 11ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳು ಅರ್ಹರು.
* ಅರ್ಜಿದಾರರು ತಮ್ಮ 10ನೇ ತರಗತಿಯಲ್ಲಿ ಕನಿಷ್ಠ 60% ಗಳಿಸಿರಬೇಕು.
* ವಾರ್ಷಿಕ ಕುಟುಂಬ ಆದಾಯವು ಎಲ್ಲಾ ಮೂಲಗಳಿಂದ 3 ಲಕ್ಷದವರೆಗೆ ಇರಬೇಕು.

ಎಷ್ಟು ವಿದ್ಯಾರ್ಥಿ ವೇತನ:
15,000

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?:
26-06-2024

ಅರ್ಜಿ ಸಲ್ಲಿಕೆ ಹೇಗೆ?;
www.b4s.in/nwmd/EYGDS1 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

Related Articles

Leave a Reply

Your email address will not be published. Required fields are marked *

Back to top button