ಕಲ್ಬುರ್ಗಿಃ PWD ಜೆಇ ಶಾಂತಗೌಡ ಬಿರಾದಾರಗೆ ಎಸಿಬಿ ಶಾಕ್
ಕಲ್ಬುರ್ಗಿಃ PWD ಜೆಇ ಶಾಂತಗೌಡ ಬಿರಾದಾರಗೆ ಎಸಿಬಿ ಶಾಕ್
ಕಲ್ಬುರ್ಗಿಃ ಪಿಡಬ್ಲೂ ಜೆಇ ಶಾಂತಗೌಡ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಕೋಟಿಗಟ್ಟಲೇ ಹಣ, ಆಸ್ತಿ ಪತ್ತೆಯಾಗಿದ್ದು, ಈತ ತನ್ನ ಮೊಮ್ಮಕ್ಕಳು ಮರಿಮೊಮ್ಮಕ್ಕಳು ಕುಳಿತು ತಿನ್ನುವಷ್ಟು ಅಕ್ರಮ ಆಸ್ತಿ ಮಾಡಿರುವದು ಮುನ್ನೋಟಕ್ಕೆ ಬಂದಿದೆ.
ಇಲ್ಲಿನ ಗುಬ್ಬಿ ಕಾಲೊನಿಯಲ್ಲಿ ಬಂಗಲೆ, ಮತ್ತು ಹಂಗರಗಾ ಗ್ರಾಮದಲ್ಲಿಯೇ ಮೂರು ಮನೆಗಳನ್ನು ಹೊಂದಿದ್ದಾರೆ.
ಎರಡು ಕಾರು ಬೈಕ್ ಗಳು ಸೇರಿದಂತೆ ಅಪಾರ ಚಿನ್ನಾಭರಣ, ಬೆಳ್ಳಿ ಹೊಂದಿರುವದು ಬಯಲಾಗಿದೆ. ಸುಮಾರು10 ರಿಂದ 20 ಕೋಟಿ ಆಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ದೊರೆತಿದ್ದು, ಇನ್ನು ಅಧಿಕಾರಿಗಳು ತೋಡಿದಂತೆ ಭ್ರಷ್ಟಚಾರದ ಹಣ ಸಂಗ್ರಹ, ಆಸ್ತಿ ಮಾಡಿಟ್ಟಿರುವದು ಬೆಳಕಿಗೆ ಬರುತ್ತಿದೆ . ಇಂಥ ಭ್ರಷ್ಟ ಕುಳಗನ್ನು ಎಸಿಬಿ ಅಧಿಕಾರಿಗಳು ಜೈಲಿಗಟ್ಟಬೇಕಿದೆ.
ಬರಿ ದಾಳಿ ಪ್ರಕರಣ ದಾಖಲು ಮಾಡಿ ಕೈತೊಲೆಯವದು ಸರಿಯಲ್ಲ. ಇವರನ್ನು ನಾಡಿನ ಜನತೆ ಮುಂದೆ ಬೆತ್ತಲೆಗೊಳಿಸಿ ಕಾನೂನು ಮೂಲಕ ಶಿಕ್ಷೆಗೆ ಗುರಿಯಾಗುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಎಫ್ ಆಯ್ ಆರ್ ಹಾಕಬೇಕು. ಆ ಮೂಲಕ ಜೈಲಿಗೆ ಕಳುಹಿಸಬೇಕು ದಾಗ ಮಾತ್ರ ಜನರಲ್ಲೂ ಎಸಿಬಿ ಕುರಿತು ನಂಬಿಕೆ ಬರಲಿದೆ.
ಇಲ್ಲವಾದಲ್ಲಿ ಕೇವಲ ಮಾಧ್ಯಮದಲ್ಲಿ ಬಂದಿದಷ್ಟೆ ಆ ಮೇಲೆ ಇವರು ಆರಾಮವಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಎಸಿಬಿ ಅಧಿಕಾರಿಗಳು ದಿಟ್ಟತನ ಪ್ರಾಮಾಣಿಕತೆ ತೋರಲಿ ಎಂಬುದು ವಿವಿ ಆಶಯ.