ಹಲವು ಚಾರಿತ್ರಿಕ ಹಿನ್ನೆಲೆ ಹೊಂದಿದ ಶಹಾಪುರ ಬೆಟ್ಟ – ಡಾ. ಬಡಿಗೇರ

ಕೋಟೆ, ಸ್ಮಾರಕ ಕ್ಷೇತ್ರಕಾರ್ಯ ಅಧ್ಯಯನ
yadgiri, ಶಹಾಪುರಃ ಬೆಟ್ಟದ ಪರಿಸರದಲ್ಲಿರುವ ಪ್ರಮುಖ ಐತಿಹಾಸಿಕ ಕೋಟೆ, ಶಾಸನಗಳು, ದೇವಾಲಯಗಳು, ತೋಪುಗಳು, ವಿವಿಧ ಸ್ಮಾರಕಗಳು ಮುಂತಾದವು ಐತಿಹಾಸಿಕ ಸಾಂಸ್ಕøತಿಕ ಪರಂಪರೆಯ ತಾಣವೇ ಈ ಸಗರಾದ್ರಿ ಬೆಟ್ಟ ಎಂದು ಜೇವರ್ಗಿಯ ಮಹಾಲಕ್ಷ್ಮೀ ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಧರ್ಮಣ್ಣ ಬಡಿಗೇರ ಅವರು ಅಭಿಪ್ರಾಯಪಟ್ಟರು.
ನಗರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಎನ್ನೆಸ್ಸೆಸ್ (ಎ) ಮತ್ತು (ಬಿ) ಘಟಕಗಳ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಇಲ್ಲಿನ ಕೋಟೆ ಹಾಗೂ ಸ್ಮಾರಕಗಳ ಕುರಿತು ಕ್ಷೇತ್ರ ಕಾರ್ಯ ಅಧ್ಯಯನದಲ್ಲಿ ಭಾಗವಹಿಸಿ ಅವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ನಗರದ ಬೆಟ್ಟ, ಕೋಟೆ ಹಾಗೂ ಸ್ಮಾರಕಗಳ ವೀಕ್ಷಣೆ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಐತಿಹಾಸಿಕ ಕೋಟೆ, ಕೊತ್ತಲಗಳ ಮಾಹಿತಿ ನೀಡಿದ ಅವರು, ಪ್ರತಿಯೊಂದನ್ನು ಸವಿವರವಾಗಿ ತಿಳಿಸಿದರು.
ಸಗರಾದ್ರಿ ಬೆಟ್ಟದ ಸ್ಮಾರಕಗಳ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ಮಾಡಿದ ಸಾಯಿಬಾಬಾ ಅಣಬಿ ಅವರು ಸಗರನಾಡಿನ ಹಾಗೂ ಸಗರಾದ್ರಿ ಬೆಟ್ಟದ ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆಯನ್ನು ಕುರಿತು ಅನೇಕ ನಿರ್ದೇಶನಗಳ ಮೂಲಕ ತಮ್ಮ ಅಧ್ಯಯನದ ಫಲಿತಗಳನ್ನು ವಿಶ್ಲೇಷಿಸಿದರು.
ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಮಾತನಾಡಿ, ಸಗರ ಚಕ್ರವರ್ತಿ, ಸಗರನಾಡು ಮತ್ತು ಸಗರಾದ್ರಿಯ ಬೆಟ್ಟದ ಇತಿಹಾಸವು ತುಂಬಾ ರೋಚಕತೆಯಿಂದ ಕೂಡಿದೆ. ಇಲ್ಲಿನ ವಿವಿಧ ಸ್ಮಾರಕಗಳು ನಾಡಿನ ಚರಿತ್ರೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎನ್ನೆಸ್ಸೆಸ್ ಅಧಿಕಾರಿಗಳಾದ ಗಂಗಣ್ಣ ಹೊಸ್ಮನಿ, ಭೀಮರಾಯ ಭಂಡಾರಿ, ಮಾನಯ್ಯ ಗೌಡಗೇರ, ದೇವಿಂದ್ರಪ್ಪ ಆಲ್ದಾಳ, ಸಂಗಣ್ಣ ದಿಗ್ಗಿ, ಶುಭಲಕ್ಷ್ಮೀ ಬಬಲಾದಿ, ಗೀತಾ ಜಿ.ಎಚ್. ಇತರರಿದ್ದರು.
ಬೆಟ್ಟದಲ್ಲಿರುವ ಮಂದಾಕಿನಿ, ತಾವರೆಕೆರೆ, ವಿವಿಧ ಬಾವಿಗಳು, ಕೊಳಗಳು ಮುಂತಾದವು ಇಲ್ಲಿನ ಜಲಮೂಲಗಳಿಗೆ ಸಾಕ್ಷಿಯಾಗಿವೆ. ಮತ್ತು ಈ ಜಲಮೂಲಗಳು ಬೆಟ್ಟದ ಜೀವ ಪರಿಸರದ ಉಳಿವಿಕೆಗೆ ಕಾರಣವಾಗಿವೆ. ಇಂತಹ ಐತಿಹಾಸಿಕ ಬೆಟ್ಟ ಹಾಗೂ ವಿಶಿಷ್ಟ ಜೀವ ಪರಿಸರ ವ್ಯವಸ್ಥೆ ಉಳಿಸಿ ಬೆಳಸಲು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಹಾಗೂ ಪರಿಸರ ಸಂರಕ್ಷಣೆ ಇಲಖೆಗಳು ಸೂಕ್ತ ರಕ್ಷಣಾ ಕ್ರಮಗಳು ಕೈಗೊಳ್ಳಬೇಕಿದೆ.
–ರಾಘವೇಂದ್ರ ಹಾರಣಗೇರಾ. ಉಪನ್ಯಾಸಕ, ಲೇಖಕ.