Home

ಬಾಡದ ಸಹೃದಯವಂತ ಶಿವಶೇಖರಪ್ಪಗೌಡರ ನೆನಪು – ಅನ್ನದಾನ ಶ್ರೀ

ಶಿರವಾಳ ಶಿವಶೇಖರಪ್ಪಗೌಡರ 12 ನೇ ಪುಣ್ಯ ಸ್ಮರಣೆ

ಶರಣರ ಮಾರ್ಗದಂತೆ ನಡೆದಿದ್ದ ಶಿರವಾಳ ಗೌಡ

ಶಿರವಾಳ ಶಿವಶೇಖರಪ್ಪಗೌಡರ 12 ನೇ ಪುಣ್ಯ ಸ್ಮರಣೆ

yadgiri, ಶಹಾಪುರಃ ಮಾಜಿ ಶಾಸಕ ಶಿವಶೇಖರಪ್ಪಗೌಡ ಶಿರವಾಳ ಶರಣರ ಮಾರ್ಗ ಅನುಸರಿಸಿದವರು, ಜನಪರವಾದ ಕಾರ್ಯಚಟುವಟಿಕೆಗಳೊಂದಿಗೆ ಜನಾನುರಾಗಿಯಾಗಿ ಬಾಳಿದವರು. ಸಹೃದಯವಂತ ಧೀಮಂತ ನಾಯಕ ಶಿರವಾಳ ಗೌಡರ ನೆನಪು ಎಂದಿಗೂ ಬಾಡದೂ ಬತ್ತದು ಎಂದು ಬೆಂಗಳೂರಿನ ಅನ್ನದಾನ ಶ್ರೀಗಳು ಹೇಳಿದರು.
ತಾಲೂಕಿನ ಶಿರವಾಳ ಗ್ರಾಮದಲ್ಲಿ ಮಾಜಿ ಶಾಸಕ ದಿ.ಶಿವಶೇಖರಪ್ಪಗೌಡರ 12 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಶಿರವಾಳ ಗೌಡರ ಮನೆತನ ಕ್ಷೇತ್ರದಾದ್ಯಂತ ದಾಸೋಹಿ ಕಾರ್ಯಕ್ಕೆ ಹೆಸರು ವಾಸಿಯಾಗಿದೆ. ಶಿರವಾಳ ಗೌಡರ ಮನೆತನ ಶರಣ ಸಂತರ ಮಾರ್ಗ ಅನುಸರಿಸುವವರು. ಕ್ಷೇತ್ರದ ಜನರ ಕಾಳಜಿ ಹೊಂದಿದ್ದ ಅವರು ಹಗಲು ರಾತ್ರಿ ಶ್ರಮಿಸಿದ್ದಾರೆ. ಹೀಗಾಗಿ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಅವರ ಸುಪುತ್ರರು ಇದೇ ಕ್ಷೇತ್ರದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿ ತಂದೆಯ ಮಾರ್ಗವನ್ನೆ ಅನುಸರಿಸುತ್ತಿದ್ದಾರೆ. ಅವರ ತತ್ವಾದರ್ಶದಂತೆ ಸಾಗುತ್ತಿದ್ದು, ಅಪಾರ ಜನರ ವಿಶ್ವಾಸ ಪ್ರೀತಿ ಗಳಿಸಿದ್ದಾರೆ. ಇವತ್ತಿನ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸೇರಿರುವ ಅವರ ಅಪಾರ ಅಭಿಮಾನ ಬಳಗವೇ ಸಾಕ್ಷಿಕರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಳಹಸ್ತೇಂದ್ರ ಶ್ರೀಗಳು ಮಾತನಾಡಿದರು. ಕಡಕೋಳ ರುದ್ರಮುನಿ ಶಿವಾಚಾರ್ಯರು, ಕುಕನೂರ ಚನ್ನಮಲ್ಲ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಹತ್ತಿಗೂಡೂರ ಗಿರಿಮಲ್ಲ ಸ್ವಾಮೀಜಿ, ಕಲ್ಬುರ್ಗಿ ರೇವಣಸಿದ್ಧ ಸ್ವಾಮೀಜಿ, ಮದ್ರಿಕಿ ಶೀಲವಂತ ಸ್ವಾಮೀಜಿ, ಸಗರ ಮರಳು ಮಹಾಂತೇಶ್ವರ ಸ್ವಾಮೀಜಿ, ಬಾರಾ ಜ್ಯೋತಿರ್ಲಿಗ ದೇವಾಲಯದ ವಿಶ್ವರಾಧ್ಯ ದೇವರು, ಲೋಕಾಪುರ ಸ್ವಾಮೀಜಿ ಸೇರಿದಂತೆ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಹಾಗೂ ಅವರ ಕುಟುಂಬಸ್ಥರು ಮತ್ತು ಸ್ಥಳೀಯ ಮುಖಂಡರಾದ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಡಾ,ಚಂದ್ರಶೇಖರ ಸುಬೇದಾರ, ಅತೀಕ್ ಸಾಬ, ಲಾಲನಸಾಬ ಖುರೇಶಿ, ಗುರು ಕಾಮಾ, ಮಲ್ಲಿಕಾರ್ಜುನ ಗಂಧದಮಠ ಇತರರಿದ್ದರು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ತಜ್ಞ ವೈದ್ಯರಿಂದ ಉಚಿತ ಕಣ್ಣು ಪರೀಕ್ಷೆ ನಡೆಸಲಾಯಿತು.

Related Articles

Leave a Reply

Your email address will not be published. Required fields are marked *

Back to top button