ಪ್ರಮುಖ ಸುದ್ದಿಮಹಿಳಾ ವಾಣಿ

ಶಹಪುರಃ ತವರಿನ ಸನ್ಮಾನ ತುಂಬಾ ಖುಷಿ ತಂದಿದೆ – ಡಾ.ಕಟ್ಟಿ

ಸಾಂಸ್ಕøತಿಕ, ಮಹಿಳಾ ದಿನಾಚರಣೆ ಸಮಾರಂಭ

ಸಾಂಸ್ಕøತಿಕ, ಮಹಿಳಾ ದಿನಾಚರಣೆ ಸಮಾರಂಭ

yadgiri,ಶಹಪುರಃ ನನ್ನ ವೃತ್ತಿ ಬದುಕನ್ನು ಆರಂಭಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಾಡಿದ ಸನ್ಮಾನ ನನ್ನ ತವರು ಮನೆಯ ಸನ್ಮಾನವೆಂದು ಭಾವಿಸಿದ್ದೇನೆ. ಈ ತವರಿನ ಸನ್ಮಾನ ತುಂಬಾ ಖುಷಿ ತಂದು ಕೊಟ್ಟಿದೆ. ಹತ್ತು ವರ್ಷಗಳವರೆಗೆ ಇಲ್ಲಿ ಸಲ್ಲಿಸಿದ ಸೇವೆ ನನ್ನ ಬದುಕಿಗೆ ಹೊಸ ತಿರುವು ನೀಡಿದೆ. ಒಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವೆಯಾಗಿ ನಾನು ಕಾರ್ಯನಿರ್ವಹಿಸಲು ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಕುಲಸಚಿವೆ ಡಾ. ಮೇಧಾವಿನಿ ಕಟ್ಟಿ ಅವರು ಅಭಿಪ್ರಾಯವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಂಸ್ಕøತಿಕ, ಕ್ರೀಡಾ, ಎನ್ನೆಸ್ಸೆಸ್, ರೆಡ್‍ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎನ್.ಇ.ಪಿ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು, ಕೌಶಲ್ಯಾಧಾರಿತ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು, ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಮತ್ತು ಅಧ್ಯಾಪಕರ ಜ್ಞಾನಮಟ್ಟ ವಿಸ್ತರಿಸಲು ತುಂಬಾ ಅನುಕೂಲಕರವಾಗಿದೆ ಎಂದು ತಿಳಿಸಿದರು.

ಧಾರಾವಾಡದ ತಹಸೀಲ್ದಾರ ರೇಣುಕಾ ಕಾಡಂಗೇರಾ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯ ಅಧ್ಯಯನ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಸಮಯ ಪ್ರಜ್ಞೆ, ಸಾಧನೆಯ ಛಲದೊಂದಿಗೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಕಲಿತ ಅನುಭವಗಳು ಹಾಗೂ ಹಲವಾರು ನಿದರ್ಶನಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಚನ್ನಾರಡ್ಡಿ ತಂಗಡಗಿವಹಿಸಿದ್ದರು.
ಸಮಾಜಶಾಸ್ತ್ರದ ಹಿರಿಯ ಸಹ ಪ್ರಾಧ್ಯಾಪಕ ಪ್ರೊ. ಆನಂದಕುಮಾರ ಜೋಶಿ, ರೂಸಾ ನೋಡಲ್ ಅಧಿಕಾರಿ ಡಾ. ಶಂಕ್ರಮ್ಮ ಪಾಟೀಲ, ರೆಡ್ ಕ್ರಾಸ್ ಸಂಚಾಲಕ ಡಾ. ನಾಗಪ್ಪ ಚಾವಾಳಕರ್, ಸಾಂಸ್ಕøತಿಕ ಸಂಚಾಲಕ ಡಾ.ಹೈಯ್ಯಾಳಪ್ಪ ಸುರಪುರಕರ್, ಕ್ರೀಡಾ ಸಂಚಾಲಕ ಡಾ.ಬಸಂತ ಸಾಗರ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ರಾಜು ಶ್ಯಾಮರಾವ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಡಾ.ಸಂತೋಷ ಹುಗ್ಗಿ, ಮೀನಾಕ್ಷಿ ರಾಠೋಡ್, ಡಾ.ಬಸವರಾಜ ಮಂಗಲಗಿ, ಡಾ.ದಯಾನಂದ ಕಾಂಬಳೆ, ಕಾಳಮ್ಮ ಎಸ್.ಎಚ್. ಹಾಗೂ ಭೀಮರಾಯ ಹೊಸ್ಮನಿ, ಅಜಯಸಿಂಗ್ ತಿವಾರಿ, ಅರ್ಜುನ ಕನ್ಯಾಕೋಳೂರು ಇತರರು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button