ಮೊಬೈಲ್ ಉತ್ತಮ ಸಾಧನ ಅದರಿಂದ ಸದುಪಯೋಗ ಪಡೆಯಿರಿ- ಹುಂಡೇಕಾರ
ದರ್ಶನಾಪುರ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ದರ್ಶನಾಪುರ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಮೊಬೈಲ್ ಉತ್ತಮ ಸಾಧನ ಅದರಿಂದ ಸದುಪಯೋಗ ಪಡೆಯಿರಿ- ಹುಂಡೇಕಾರ
yadgiri, ಶಹಾಪುರಃ ವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ನಿಮ್ಮ ಪಾಲಕರು, ಸಹೋದರ, ಸಹೋದರಿಯರ ಕುಟುಂಬದ ನೆನಪು ಮಾಡಿಕೊಳ್ಳಬೇಕು. ಅವರೆಷ್ಟು ಕಷ್ಟ ಪಟ್ಟು ನಿಮಗೆ ಶಿಕ್ಷಣ ಕೊಡಿಸುತ್ತಾರೆ ಎಂಬುದು ಅರಿತು ಅಭ್ಯಾಸ ಮಾಡಬೇಕು. ನಿಮ್ಮ ಭವಿಷ್ಯದ ಬಗ್ಗೆ, ನಿಮ್ಮ ಪಾಲಕರ ಬಗ್ಗೆ ಚಿಂತನೆ ಮಾಡಿ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದು ಪ್ರಾಂಶುಪಾಲ ಎಂ.ಎಂ.ಹುಂಡೇಕಾರ ತಿಳಿಸಿದರು.
ನಗರದ ಶ್ರೀಬಾಪುಗೌಡ ದರ್ಶನಾಪುರ ಪಿಯು ಕಾಮರ್ಸ್, ಸೈನ್ಸ್ ಮತ್ತು ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ ಪಿಯುಸಿ ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಸಾಂಸ್ಕøತಿಕ ಚುಟುವಟಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೊಬೈಲ್ ಒಂದು ಉತ್ತಮ ಸಾಧನ ಅದರಿಂದ ಸದುಪಯೋಗ ಪಡೆಯಬೇಕು. ಮೊಬೈಲ್ ಶಿಕ್ಷಕರಿದ್ದಂತೆ ನಿಮ್ಮ ಕೈಯಲ್ಲೇ ಶಿಕ್ಷಕನಿದ್ದಾನೆ. ಅದರಿಂದ ಉತ್ತಮ ಜ್ಞಾನಾರ್ಜನೆ ಪಡೆದುಕೊಳ್ಳಬೇಕು. ಅದು ಬಿಟ್ಟು ಮನೋರಂಜನೆಯಾಗಿ ಬಳಸಿಕೊಳ್ಳಬಾರದು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಪ್ರಸ್ತುತ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆ ಇದ್ದು, ಯಾವುದೇ ಕ್ಷೇತ್ರದಲ್ಲಿ ಮುಂಜಾಗೃತವಾಗಿ ಸಿದ್ಧತೆ ಮಾಡಿಕೊಂಡು ಆಯಾ ಕ್ಷೇತ್ರ ಕುರಿತು ಸಂಪೂರ್ಣ ಅಧ್ಯಯನ ಮಾಡಿಕೊಂಡು ಸ್ಪರ್ಧೆಗೆ ಇಳಿಯಬೇಕಿದೆ. ಆ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ತಾವೆಲ್ಲ ಸಬಲರಾದಲ್ಲಿ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.
ದೇಶ ಸೇವೆ ಮಾಡಬೇಕೆಂದರೆ ನಾವೆಲ್ಲ ಯೋಧರಾಗಿ ಯುದ್ಧವೇ ಮಾಡಬೇಕೆಂದಿಲ್ಲ. ನಾವೆಲ್ಲ ನಮ್ಮ ನಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕವು ದೇಶ ಸೇವೆ ಮಾಡಿದಂತೆ ಇದರಿಂದ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಾಣೆ ಮಾಡಿದರು, ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಂಗಣ್ಣ ದಿಗ್ಗಿ, ಸಂತೋಷ ಚಿಕ್ಕಮಠ, ಡಿಸಿಸಿ ಬ್ಯಾಂಕ್ ಅಸಿಸ್ಟಂಟ್ ಮ್ಯಾನೇಜರ್ ರಮೇಶ ನಗನೂರ ಇತರರು ಉಪಸ್ಥಿತರಿದ್ದರು. ಶಿಕ್ಷಕ ವೃಂದಕ್ಕೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡುವ ಮೂಲಕ ಶಿಕ್ಷಕರನ್ನು ಸ್ವಾಗತಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.