ರಷ್ಯಾ ದಾಳಿಗೆ ಉಕ್ರೇನ್ ನ 1500 ಮನೆಗಳು ನಾಶ, ಸಾಲು ಸಾಲು ಹೆಣಗಳು
ಉಕ್ರೇನ್ ಜನರ ಮನಸ್ಥಿತಿ ಏನಾಗಿರಬೇಡ.? ಯಾರು ಬಲ್ಲರು.!
ರಷ್ಯಾ ದಾಳಿಗೆ ಉಕ್ರೇನ್ ನ 1500 ಮನೆಗಳು ನಾಶ, ಸಾಲು ಸಾಲು ಹೆಣಗಳು
ವಿವಿ ಡೆಸ್ಕ್ಃ ಉಕ್ರೇನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಸೇನಾ ಪಡೆ ಆರ್ಭಟಕ್ಕೆ ಉಕ್ರೇನ್ ನ 1500 ಹೆಚ್ಚು ಮನೆಗಳು ಮತ್ತು 202 ಕ್ಕೂ ಹೆಚ್ಚು ಶಾಲೆಗಳು ಮತ್ತು ಆಸ್ಪತ್ರೆಗಳು ಬೆಂಕಿಗಾಹುತಿಯಾಗಿ ನಾಶಗೊಂಡಿವೆ.
ಅಲ್ಲದೆ ಇಡಿ ಉಕ್ರೇನ್ ಸ್ಮಶಾನದಂತಾಗಿದೆ. ಸಾಲು ಸಾಲು ಹೆಣಗಳು ಬಿದ್ದಿವೆ. ಅವುಗಳ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ 70 ಶವಗಳನ್ನು ಹೂಳಲು ಅಲ್ಲಿನ ಸರ್ಕಾರ ಪರದಾಡಿದೆ. ಅಲ್ಲಿನ ನಾಗರಿಕರ ದುಸ್ಥಿತಿ ಹೇಳತೀರದಂತಾಗಿದೆ.
ಆಸ್ಪತ್ರೆ ಮೇಲೆ ರಷ್ಯಾ ದಾಳಿ ನಡೆಸಿದ ಹಿನ್ನೆಲೆ ಕೀವ್ ನ ಆಸ್ಪತ್ರೆಯಲ್ಲಿ ಗರ್ಭೀಣಿಯೊಬ್ಬಳು ಬಾಂಬ್ ದಾಳಿಗೆ ಹೆದರಿ ಪರದಾಡುವ ಸ್ಥಿತಿ ಮನಕಲುಕುವಂತಿದೆ.
ಒಂದಡೆ ಕ್ರೇನ್ ಮೂಲಕ ನಾಲೆ ತೋಡಿದಂತೆ ಭೂಮಿ ಕೊರೆದು ಸಾಲಾಗಿ ಹೆಣಗಳನ್ನು ಮುಚ್ಚಲ್ಪಟುತ್ತಿದೆ. ಉಕ್ರೇನ್ ನಾಗರಿಕರ ಸ್ಥಿತಿ ಚಿಂತಾಜನಕವಾಗಿದೆ.
ಹಸಿವು, ಕಾಣದ ಸೂರು ಬಾಯಾರಿಕೆಗೆ ಸಿಗದ ನೀರು, ಬಂಕರ್ ಗಳಿಂದ ಹೊರ ಬಂದ್ರೆ ಗುಂಡು, ಬಾಂಬ್ ಸಿಡಿಲ ಮದ್ದುಗಳ ಆತಂಕದ ನಡುವೆ ಬಂಕರ್ ಒಳಗೆ ಕಾಲ ಕಳೆಯುತ್ತಿರುವ ಜನರ ಮನಸ್ಥಿತಿ ಉಕ್ರೇನ್ ನಂಬಿದ್ದ ದೇವರಿಗೆ ಪ್ರೀತಿ.
ಇನ್ನಾದರೂ ಯುದ್ಧ ನಿಲ್ಲಿಸಲಿ ಎರಡು ದೇಶಗಳಿಂದ ಸಕರಾತ್ಮಕ ಮಾತುಕತೆ ನಡೆಯಲಿ ಮಾನವೀಯತೆ ಆಧಾರದ ಮೇಲೆ ಮಾತುಕತೆ ನಡೆಸುವ ಮೂಲಕ ನಿರ್ಧಾರಕ್ಕೆ ಬರಲಿ. ನಾಗರಿಕರ ಬಲಿಗೆ ಕಡಿವಾಣ ಬೀಳಲಿ ಎಂಬುದು ಎಲ್ಲರ ಆಶಯ.
–ಮಲ್ಲಿಕಾರ್ಜುನ ಮುದನೂರ.