ವಾಲ್ಮೀಕಿ ರಾಮಾಯಣ ನಮ್ಮ ದೇಶದ ದೊಡ್ಡ ಕೊಡುಗೆ; ಜಿಲ್ಲಾಧಿಕಾರಿ ಡಾ.ರಾಗಪ್ರಿಯ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಒಂದು ಲಕ್ಷ ರೂಪಾಯಿ ವಿತರಣೆ
ಯಾದಗಿರಿ-ಮಹರ್ಷಿ ವಾಲ್ಮೀಕಿಯವರು ಬರೆದಿರುವ ರಾಮಾಯಣವು ನಮ್ಮ ದೇಶಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ. ಪ್ರಜೆಗಳ ಪಾಲನೆಯನ್ನು ಅತ್ಯಂತ ಗೌರವದಿಂದ ಮಾಡುತ್ತಿದ್ದ ರಾಮನು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದ. ರಾಮನ ಆಡಳಿತದ ಸಮಯದಲ್ಲಿ ರಾಜ್ಯದಲ್ಲಿದ್ದ ಜನರು ಸುಖಿಗಳಾಗಿದ್ದರು. ಎಲ್ಲಿಯೂ ಕಳ್ಳತನ, ಮೋಸ, ವಂಚನೆ, ಹಸಿವಿನ ಚಿಂತೆ ಇರಲಿಲ್ಲ. ಎಲ್ಲಾ ಪ್ರಜೆಗಳು ಸುಖದಿಂದ ಬಾಳುತ್ತಿದ್ದರು. ರಾಮನ ಉದಾತ್ತ ಆದರ್ಶಗಳನ್ನು ಅವರು ನಂಬಿದ್ದರು. ಎಲ್ಲರಿಗೂ ಸಮಾನತೆ ಸಹಬಾಳ್ವೆ ಎಂಬುದಾಗಿತ್ತು.ಅಂತೂ ರಾಮ ರಾಜ್ಯ ಸುಖೀ ರಾಜ್ಯ ಎಂದು ಕರೆಯಬಹುದಾಗಿತ್ತು.
ಇಂತಹ ರಾಮರಾಜ್ಯದ ಕನಸು ಮಹಾತ್ಮ ಗಾಂಧೀಜಿಯವರದ್ದಾಗಿತ್ತು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ .ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ , ಜಿಲ್ಲಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರ ಸಭೆ ಮತ್ತು ವಾಲ್ಮೀಕಿ ಜಯಂತೋತ್ಸವ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಅವರು ಮಾತನಾಡಿದರು.
ರಾಮಾಯಣವನ್ನು ಅರಿಯುವ ಪ್ರಯತ್ನವನ್ನು ಗುರು-ಹಿರಿಯರಿಗೆ ವಿಧೇಯನಾಗಿರಬೇಕೆಂಬುದನ್ನು
ಸಾಬೀತುಪಡಿಸುವ, ತನ್ನ ವನವಾಸಕ್ಕೆ ಕಾರಣಳಾದ ಕೈಕೇಯಿಯನ್ನೂ ಕೂಡ ದ್ವೇಷಿಸದೆ,
ಪ್ರೀತಿಸಿ, ಹಿರಿಯರಲ್ಲಿ ಭಕ್ತಿ, ವಿನಯತೆಯನ್ನು ಮತ್ತು ಮರ್ಯಾದ ಪುರುμÉೂೀತ್ತಮ ರಾಮನ ಎರಡು ಕಡೆಯ ವ್ಯಕ್ತಿತ್ವವನ್ನು ವಾಲ್ಮೀಕಿ ಮಹರ್ಷಿಯವರು ತೋರಿಸಿದ್ದಾರೆ ಎಂದರು.
ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ನಮ್ಮ ಭಾರತೀಯ ಪರಂಪರೆಯಲ್ಲಿ ಅನೇಕ ದಾರ್ಶನಿಕರು, ವಿದ್ವಾಂಸರು ಮತ್ತು ಸಮಾಜ ಸುಧಾರಕರು ಜನಿಸಿದ್ದಾರೆ.ಇಂತಹ ದೇಶದಲ್ಲಿ ಜನಸಿದ ನಾವು ಪುಣ್ಯವಂತರು ಎಂದರು. ಮಹರ್ಷಿ ವಾಲ್ಮೀಕಿಯು ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮೀತ ಮಾಡಬಾರದು ಅವರು ಈ ದೇಶದ ಬಹುದೊಡ್ಡ ಆಸ್ತಿ ಎಂದರು.
ಜಿಲ್ಲಾ ಪೆÇೀಲೀಸ್ ವರಿμÁ್ಠಧಿಕಾರಿ ಸಿ.ಬಿ ವೇದಮೂರ್ತಿ ಮಾತನಾಡಿ ವಾಲ್ಮೀಕಿ ಬರೆದ ಗ್ರಂಥದಲ್ಲಿ ಮಾತೃ, ಪಿತೃ, ಆಚಾರ್ಯ, ಅತಿಥಿದೇವೋಭವ, ಪಿತೃವಾಕ್ಯ ಪರಿಪಾಲನೆಯ ಹಲವಾರು ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯಲಾಗಿದೆ ಎಂದರು. ಅಸ್ಪೃಶ್ಯತೆ ನಿವಾರಣೆಗೆ ಪೆÇಲೀಸ್ ಇಲಾಖೆಯಿಂದ ಪ್ರತಿ ಹಳ್ಳಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಎಸ್.ಪಿ ಕಚೇರಿಯಲ್ಲಿ ತರಬೇತಿ ನೀಡುತ್ತಿದ್ದೇವೆ ಅದರ ಉಪಯೋಗ ಪಡೆದುಕೊಳ್ಳಿ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಒಂದು ಲಕ್ಷ ರೂಪಾಯಿ ವಿತರಣೆ
ಯಾದಗಿರಿ ತಾಲೂಕಿನ ಠಾಣಗುಂದ ಗ್ರಾಮದ ವಿದ್ಯಾರ್ಥಿಯಾದ ಗೋವಿಂದರಾಜು ತಂದೆ ಪರ್ವತಪ್ಪ ಈತನು ಹೆಡಗಿಮುದ್ರಾ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಿಗೆ 607 ಅಂಕ ಪಡೆದು ಶೇಕಡಾ 97% ಸಾಧನೆ ಮಾಡಿದ್ದಾನೆ. ಈತನಿಗೆ ಜಿಲ್ಲಾಡಳಿತ ವತಿಯಿಂದ ಒಂದು ಲಕ್ಷ ರೂಪಾಯಿಗಳು ಚೆಕ್ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗಾ ಹಾಗೂ ಬಾಲ ಎಂಬ ಯುವಕರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.