ಮದುವೆ ಉಡುಗೆಯಲ್ಲಿಯೇ ಶುರು ಪುಷಪ್ಸ್ , ವಿಡಿಯೋ ಫುಲ್ ವೈರಲ್
ಮದುವೆ ಉಡುಗೆಯಲ್ಲಿಯೇ ಶುರು ಪುಷಪ್ಸ್ , ವಿಡಿಯೋ ಫುಲ್ ವೈರಲ್
ವಿವಿ ಡೆಸ್ಕ್ಃ ಮದುವೆಯೊಂದರಲ್ಲಿ ಗಿಫ್ಟ್ ಕೊಡುವದು, ಅವುಗಳನ್ನು ಅತಿಯಾಗಿ ಪೇಪರ್ ಸುತ್ತಿ ವಧು ವರರಿಗೆ ಅದನ್ನು ಬಿಚ್ಚಲು ಹಚ್ಚುವ ಮೂಲಕ ತಮಾಷೆ ಮಾಡುವದು ಅಥವಾ ಕೋಲ್ಡ್ರಿಂಕ್ಸ್, ಎಳೆ ನೀರು ಕುಡಿಸುವ ತಮಾಷೆ ಮತ್ತು ವಧು ವರರು ಡ್ಯಾನ್ಸ್ ಮಾಡವ ವಿಡಿಯೋಗಳು ಸಾಕಷ್ಟು ನೋಡಿರುತ್ತೀರಿ.
ಆದರೆ ಇಲ್ಲೊಂದು ವಿಚಿತ್ರ ಮದುವೆ ವಿಡಿಯೋ ವೈರಲ್ ಆಗಿದೆ. ಅದೇ ಇದೇನು ಮದುವೆ ಸ್ಟೇಜ್ ಮೇಲೆ ವ್ಯಾಯಾಮ ಮಾಡುತ್ತಿದ್ದಾರೆ. ದಂಡ್ (PUSH UP) ಹೊಡೆಯುತ್ತೀದ್ದಾರೆಂದು ಅಚ್ಚರಿ ಪಡುವದು ಸಹಜ.
ಈ ವಧು ವರರಿಬ್ಬರು ಮದುವೆ ಸ್ಟೇಜ್ ಮೇಲೆ ದಂಡ್ ಹೊಡೆಯುತ್ತಿದ್ದು, ಇದು ತಮಾಷೆಗಾಗಿ ಅನ್ಕೋಬೇಡಿ, ಅಥವಾ ಅನ್ಕೊಂಡ್ರೂ ಪರವಾಗಿಲ್ಲ. ಇಬ್ಬರು ಪುಷ್ ಅಪ್ ಮಾಡೋ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಅಕ್ಷತಾರೋರಾ ಮತ್ತು ಗಂಡ ಆದಿತ್ಯ ಮಹಾಜನ್ ಮದುವೆ ಸ್ಟೇಜ್ ಮೇಲೆ ಅಕ್ಷತಾ ಹಾಕಿದ ಸವಾಲ್ ಸ್ವೀಕರಿಸಿದ ಗಂಡ ಆದಿತ್ಯ ಮದುವೆ ಉಡುಗೆಯಲ್ಲಿಯೇ ಪುಷ್ ಅಪ್ ಹೊಡೆಯಲು ಶುರು ಮಾಡಿದ್ದಾರೆ. ಅಕ್ಷತಾರೋರ ಸ್ವತಃ ಪುಷ್ ಅಪ್ ಹೊಡೆಯುತ್ತಿದ್ದು ನೋಡಿ ಕೆಲವರು ದಂಗಾಗಿ ಹೋಗಿದ್ದಾರೆ.
ಅಂದ ಹಾಗೇ ಅಕ್ಷತಾ ಸಾಮಾನ್ಯ ಹುಡುಗಿ ಅಲ್ಲ, ಆಕೆ ಫಿಟ್ನೆಸ್ ಕೋಚರ್ ಆಗಿದ್ದಾಳೆ. ಸಾಕಷ್ಟು ಜನರಿಗೆ ವ್ಯಾಯಾಮ್ ಫಿಟ್ನೆಸ್ ತರಬೇತಿ ನೀಡಿದ್ದು, ಇದೀಗ ಮದುವೆ ವೇದಿಕೆ ಮೇಲೆ ಗಂಡನ ಜೊತೆ ಫಿಟ್ನೆಸ್ ಸವಾಲೆಸೆದಿದ್ದಾಳೆ.
ಇಬ್ಬರು ಪುಷ್ ಅಪ್ ಹೊಡೆಯುವದು ನೋಡಿದರೆ ಜನ ಬೆರಗಾಗಿದ್ದಾರೆ. ಈ ಇಬ್ಬರ ಫಿಟ್ನೆಸ್, ಆರೋಗ್ಯದ ಬಗ್ಗೆ ಮಾತಾಡುವಂತಾಗಿದೆ. ಈ ಮೂಲಕ ಎಲ್ಲರಲ್ಲೂ ಆರೋಗ್ಯ ಜಾಗೃತಿ ಮೂಡಿಸಿದ ತೃಪ್ತಿ ಅವರಿಗಿದೆಯಂತೆ. ಏನೇ ಆಗಲಿ ನೂತನ ದಂಪತಿಗಳಿಬ್ಬರಿಗೂ ಶುಭವಾಗಲಿ.