Home
ಸಮವಸ್ತ್ರಕ್ಕೆ ರಾಷ್ಟ್ರೀಯ ನೀತಿ ರೂಪಿಸಲಿ – ವಿ.ಎಸ್.ಉಗ್ರಪ್ಪ
ಸಮವಸ್ತ್ರಕ್ಕೆ ರಾಷ್ಟ್ರೀಯ ನೀತಿ ರೂಪಿಸಲಿ – ವಿ.ಎಸ್.ಉಗ್ರಪ್ಪ
ಮಕ್ಕಳನ್ನು ಒಡೆದಾಳುವದು ಸೂಕ್ತ ಕ್ರಮವಲ್ಲ – ಉಗ್ರಪ್ಪ
ವಿಜಯನಗರಃ ನಮ್ಮದು ಧರ್ಮ ನಿರಪೇಕ್ಷಿತ ಸಿದ್ಧಾಂತವಾಗಿದ್ದು, ಧರ್ಮದ ಹೆಸರಿನಲ್ಲಿ ಮಕ್ಕಳನ್ನು ಸಂಕುಚಿತಗೊಳಿಸುವದು ಸರಿಯಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಿಜಾಬ್-ಕೇಸರಿ ಶಾಲು ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದುವರಿದು ಮಾತನಾಡಿದ ಅವರು,
ಮಕ್ಕಳ ಹಿಂದೆ ನಿಂತು ಪ್ರಚೋದಿಸುವದು ಬೇಡ. ಮಕ್ಕಳನ್ನು ಒಡೆದಾಳುವದು ಸರಿಯಾದ ಕ್ರಮವಲ್ಲ.
ಶಾಲಾ ಕಾಲೇಜುಗಳ ಶುಲ್ಕ, ಸಿಲೆಬಸ್, ಸಮವಸ್ತ್ರ ಕುರಿತು ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಸಮವಸ್ತ್ರ ಗೊಂದಲ ಕುರಿತು ವಿವಿಧ ರಾಜ್ಯಗಳ ನ್ಯಾಯಾಲಯಗಳ ತೀರ್ಪು ಆಧರಿಸಿ , ಚರ್ಚಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.