ಪ್ರಮುಖ ಸುದ್ದಿ

ಜನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸಿ : ಡಾ.ಎಸ್.ಬಾಲಾಜಿ ಕರೆ

ಜನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸೋಣ : ಡಾ.ಎಸ್.ಬಾಲಾಜಿ

ಯಾದಗಿರಿ : ಜನಪದ ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕನ್ನಡ ಜಾನಪದ ಪರಿಷತ್ತು ಕೆಲಸ ಮಾಡುತ್ತಿದ್ದು, ಸರ್ವರೂ ಪ್ರಯತ್ನ ಪಟ್ಟಲ್ಲಿ ಕಲೆ ಮತ್ತು ಕಲಾವಿದರೂ ಕೂಡ ಉಳಿಯಲಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕದ ಉದ್ಘಾಟನೆ ಮತ್ತು ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹ ಸಮಾರಂಭ, ಕನ್ನಡ ಜಾನಪದ ಲೋಕದಲ್ಲಿ ಕಟ್ಟಿರೋ ಗೆಜ್ಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶೋಭಾನೆ ಪದಗಳು, ಹಂತಿ ಪದಗಳು, ಮೋಹರಂ ಪದಗಳು, ಸಾಂಪ್ರದಾಯ ಹಾಡುಗಳು ಮುಂತಾದವರು ಬುಡಕಟ್ಟು ಸಂಸ್ಕøತಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪರಿಷತ್ತು ಹೊಸ ಯೋಜನೆ ಹಾಕಿಕೊಂಡಿದೆ. ನಾಡಿನಾದ್ಯಂತ ಕನ್ನಡ ಜಾನಪದ ಪರಿಷತ್ತು ಘಟಕಗಳನ್ನು ಮಾಡಿ ಯುವ ಬ್ರಿಗೆಡ್ ಸ್ಥಾಪನೆ ಮಾಡಲಾಗುವುದು ಅದರ ಜೊತೆಗೆ ಸರ್ಕಾರ ಬುಡಕಟ್ಟು ಸಂಸ್ಕøತಿಯ ಅಕಾಡೆಮಿ ಸ್ಥಾಪಿಸಿ ಕಲೆ ಮತ್ತು ಕಲಾವಿದರನ್ನು ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷರಾದ ಶರಣಪ್ಪ ತೋರಣಕರ್ ಮಾತನಾಡಿ, ಜನಪದ ಕಲೆಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇದ್ದು, ಪೂರ್ವ ಕಾಲದಿಂದಲೂ ವಿವಿಧ ಜಾನಪದ ಕಲೆಗಳಿಗೆ ಜಾನಪದವೇ ಮೂಲ ತಾಯಿಬೇರು ಆಗಿದೆ. ಮೂಲ ಜಾನಪದ ಕಲೆಗಳನ್ನು ಉಳಿಸಬೇಕು ಮತ್ತು ಬೆಳೆಸಬೇಕು ಈ ಎಲ್ಲಾ ಕಲೆಗಳನ್ನು ಬೆಳಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಕೃಷಿ ಅಧಿಕಾರಿ ಸಾಯಿಬಪ್ಪ ಕಡೆಚೂರು, ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನ ಅಧ್ಯಕ್ಷ ರಾಜು ಹೆಂದೆ, ಶರಣಬಸ್ಸಪ್ಪ ನಾಸಿ, ಡಾ.ಭೀಮರಾಯ ಲಿಂಗೇರಿ, ಕುಪೇಂದ್ರ ವಠಾರ, ಸಾಯಿಬಣ್ಣ ಸಿದ್ದಿ, ಹಣಮಂತ ನಾಯಕ, ರಿಯಾಜ್ ಪಟೇಲ ಸೇರಿದಂತೆ ಇತರರಿದ್ದರು.

 

ನಮ್ಮ ನಾಡಿನ ಜನಪದ ಕಲೆಗಳನ್ನು ಉಳಿಸುವುದರ ಜೊತೆಗೆ ಕಲ್ಯಾಣ ಕರ್ನಾಟಕದ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ರಾಜ್ಯಮಟ್ಟದಲ್ಲಿ ಗುರುತಿಸುವ ಕೆಲಸ ಮಾಡುತ್ತೇನೆ. ಅದರಂತೆ ಯಾದಗಿರಿ ಜಿಲ್ಲೆಯ ಕನ್ನಡ ಜಾನಪದ ಪರಿಷತ್ತಿನಿಂದ ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಜಾನಪದ ಸಮ್ಮೇಳನ ಏರ್ಪಡಿಸಲಾಗುವುದು.

-ಶರಣಪ್ಪ ತೋರಣಕರ್ ಜಿಲ್ಲಾಧ್ಯಕ್ಷರು ಕನ್ನಡ ಜಾನಪದ ಪರಿಷತ್ತು ಯಾದಗಿರಿ
——————————-

Related Articles

Leave a Reply

Your email address will not be published. Required fields are marked *

Back to top button