ಹಿಜಾಬ್ ಧರಿಸಿಯೇ ಹೋಗಬೇಕಿದ್ರೆ ಮದರಸಾಗೆ ಹೋಗಿ, ಸಮವಸ್ತ್ರ ಎಲ್ಲರಿಗೂ ಒಂದೇ – ಒಂಟಿ ಸಲಗ ಘರ್ಜನೆ
ಹಿಜಾಬ್ ಧರಿಸಿಯೇ ಹೋಗಬೇಕಿದ್ರೆ ಮದರಸಾಗೆ ಹೋಗಿ, ಸಮವಸ್ತ್ರ ಎಲ್ಲರಿಗೂ ಒಂದೇ – ಒಂಟಿ ಸಲಗ ಘರ್ಜನೆ
ಬೆಂಗಳೂರಃ ಹಿಜಾಬ್ ಧರಿಸಿ ಶಾಲಾ ಕಾಲೇಜಿಗೆ ಹೋಗಬೇಕಿದ್ರೆ ಅಥವಾ ಮುಸ್ಲಿಂ ಧರ್ಮದ ಪಾಲನೆಯೇ ಮಾಡಬೇಕಿದ್ರೆ ಅದ್ಕೆ ಮದರಸಾ ಇದೆ ಅಲ್ಲಿಗೆ ಹೋಗಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಘರ್ಜಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು,
ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಸಮವಸ್ತ್ರ ಯಾವ ಕಾರಣಕ್ಕೆ ರೂಪಿಸಲಾಯಿತು ಎಂಬ ಜ್ಞಾನವಾದರೂ ಬೇಕು. ಅದು ಬಿಟ್ಟು ಮತಾಂಧರಂತೆ ವರ್ತಿಸಿದರೆ, ಮುಸ್ಲಿಂ ಧರ್ಮದಂತೆ ನಡೆದುಕೊಳ್ಳಲು ತಮಗೆ ಪೂಜ್ಯ ಶ್ರೀಮಹಾತ್ಮ ಗಾಂಧೀಜಿಯವರು ಪಾಕಿಸ್ತಾನಕ್ಕೆ ಅಸ್ತು ನೀಡಿದ್ದಾರೆ. ಮುಸ್ಲಿಂ ಧರ್ಮದಂತೆ ನಡೆದುಕೊಳ್ಳಲು ನಿಮಗೆ ಪ್ರತ್ಯೇಕ ದೇಶವೇ ಮಾಡಿ ಕೊಡಲಾಗಿದೆ ಅಲ್ಲಿಗೆ ಹೋಗಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲವಾದಲ್ಲಿ ಈ ನೆಲದ ಕಾನೂನು ಗೌರವಿಸಿ ಸಮವಸ್ತ್ರ ಎಲ್ಲಾ ವಿದ್ಯಾರ್ಥಿಗಳನ್ನ ಸಮನಾಗಿ ಕಾಣಲು ಸಮಭಾವ ಜಾಗೃತಿಗಾಗಿ ಆಯಾ ಶಾಲಾ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಆದೇಶದಂತೆ ಜಾರಿಗೆ ತರಲಾಗಿರುತ್ತದೆ ಅದನ್ನು ಕಡೆಗಣಿಸುವದು ಸರಿಯಲ್ಲ.
ಕಾಂಗ್ರೆಸ್ ನಾಯಕರು ಸಮಸಮಾಜ, ಜಾತ್ಯಾತೀತ ಹೆಸರೇಳುವದು ಧರ್ಮಗಳ ಮಧ್ಯ ಕಿಡಿ ಹೊತ್ತಿಸುವದು ಸಿದ್ರಾಮಯ್ಯನವರು ಹಿಂದೂಧರ್ಮದವರೇನು ಅಲ್ಲ ಅನಿಸುತ್ತದೆ. ಅವರು ಓಟ್ ಬ್ಯಾಂಕ್ ರಾಜಕಾರಣಿ ಅದಕ್ಕಾಗಿ ಯಾವಾಗಲೂ ಸಾಬ್ರೂ ಪರವೇ ಮಾತಾಡ್ತಾರೆ. ನ್ಯಾಯ, ಕಾನೂನು ಯಾವದು ಸಂಬಂಧವಿಲ್ಲ ಅವರಿಗೆ ಎಂದು ಗುಡುಗಿದರು.
ಜಾತ್ಯಾತೀತ ತತ್ವ ಪಾಲನೆ ಅಂದರೆ ಇದೇನಾ.? ಒಂದು ಧರ್ಮದವರನ್ನು ಎತ್ತಿ ಕಟ್ಟೋದು ಇನ್ನೊಂದು ಧರ್ಮವನ್ನು ಹಿಯಾಳಿಸೋದು. ಒಟ್ಟಾರೆ ಅಲ್ಪಸಂಖ್ಯಾತರ ಪರವಾಗಿ ಮಾತಾಡಿದರೆ ಜಾತ್ಯತೀತವೇ.? ಎಂದು ಕಾಂಗ್ರೆಸ್ಸಿಗರ ವಿರುದ್ಧ ಗುಡುಗಿದರು.