ಪ್ರಮುಖ ಸುದ್ದಿ

ಹೆತ್ತ ಕೂಸನ್ನು ಸ್ಮಶಾನದಲ್ಲಿ ಬಿಸಾಕಿ ಹೋದವರಾರು.?

ಹಡೆದ ಕೂಸನ್ನು ಸ್ಮಶಾನದಲ್ಲಿ ಬಿಸಾಕಿ ಹೋದವರಾರು.?

ಯಾದಗಿರಿಃ ಹುಟ್ಟಿ ಒಂದು ದಿನವಾಗಿರಬಹುದು ಜಗತ್ತನ್ನೆ ಕಾಣದ ಆ ನವಜಾತ ಶಿಶು ಮಾಡಿದ ಪಾಪವಾದರೂ ಏನು.?
ಹೌದು ನವಜಾತ ಶಿಶುವೊಂದ ಜಿಲ್ಲೆಯ ಗುರುಮಿಠಕಲ್ ನಗರ ವ್ಯಾಪ್ತಿ ಸ್ಮಶಾನದಲ್ಲಿ ಅದನ್ನು ಹೆತ್ತವರೋ ಅಥವಾ ಅವರ ಹಿತೈಷಿಗಳೋ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಎಸೆದ ಭರದಲ್ಲಿ ಶಿಶು ಮೃತಪಟ್ಟಿದ್ದು, ತಲೆಯನ್ನು ನಾಯಿ, ಹಂದಿಗಳೋ ತಿಂದಿರುವ ಸಾಧ್ಯತೆ ಕಂಡು ಬರುತ್ತಿದೆ. ಆ ಚಿತ್ರ ಪ್ರಸಂಗ ನೋಡುವಂತಿಲ್ಲ ಅಷ್ಟೊಂದು ಘೋರವಾಗಿ‌ ಕಾಣುತ್ತಿದೆ‌.

ಸ್ಥಳಕ್ಕೆ ಗುರುಮಿಠಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಮರಣೋತ್ತರ ಪರೀಕ್ಷೆಗೆ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಪ್ರಕರಣವು ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ. ಮಗು ಎಸೆದವರಾರು ಎಂಬ ಪ್ರಶ್ನೆ ಕಾಡುತ್ತಿದ್ದು, ಸುಲಭವಾಗಿ ಅವರನ್ನು ಸುತ್ತಲಿನ ಜನ ಗುರುತಿಸಬಹುದು. ಪೊಲೀಸರು ಅವರನ್ನು ಹಿಡಿದು ಪ್ರಕರಣ ದಾಖಲಿಸಬಹುದು.

ಆದರೆ ಈ ಮಗುವನ್ನು ಅನಾಚಾರಕ್ಕೆ ಜನ್ಮಿಸಿದರೂ ಹೆತ್ತ ಮಹಾತಾಯಿ‌ಗೆ ತನ್ನದೆ ಮಗುವಿನ ಕನಿಕರ, ಕಾಳಜಿ ಇಲ್ಲವೇ.?  ತಮ್ಮ ಸುಖಕ್ಕೆ ಹೆತ್ತು ನವಜಾತ ಶಿಶುವನ್ನು ಸ್ಮಶಾನಕ್ಕೆ ಎಸೆದರೆ ಮುಗಿಯೀತೆ.? ಆ ಜನುಮದವರೆಗೂ ಪಾಪ ಬಿಡುವದಿಲ್ಲ ಎಂಬ ಅರಿವು ಹೆತ್ತವರಿಗಿರಬೇಕಲ್ಲವೇ.?

ಇಂತಹ‌ ಘೋರ ಘಟನೆ ಕಡಿಮೆ ಆಗಬೇಕಾದರೆ, ಸಮಾಜದಲ್ಲಿ ಜಾಗೃತಿ ಅಗತ್ಯವಿದೆ. ಈ ಕುರಿತು ಸಂಘ, ಸಂಸ್ಥೆಗಳು ಜಾಗೃತಿ ಕಾರ್ಯಕ್ಕೆ ಮುಂದಾಗಬೇಕು.

ಸರ್ಕಾರ ಸಾಕಷ್ಟು ಯೋಜನೆಗಳು ರೂಪಿಸಿದ್ದರೂ ಸಮಾಜದಲ್ಲಿ ಅರಿವು ಮೂಡಿಸುವದು ಕಷ್ಟಕರವಾಗಿದೆ. ಮಹಿಳಾ ಸಂಘಟನೆಗಳು ಈ ಕುರಿತು ಗುಪ್ತ ಕಾರ್ಯಾಚರಣೆ ನಡೆಸಬೇಕಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಮತ್ತು ಜಾಗೃತಿ ಮೂಡಿಸುವದು ಅಗತ್ಯವಿದೆ ಎಂಬುದು ವಿನಯವಾಣಿ ಕಳಕಳಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button