ಪ್ರಮುಖ ಸುದ್ದಿ
ಪವರ್ ಸ್ಟಾರ್ ಪುನೀತ್ ಜನ್ಮ ದಿನಾಚರಣೆ
ಹಣ್ಣು ಹಂಪಲು ವಿತರಿಸಿದ ಅಭಿಮಾನಿಗಳು
ಯಾದಗಿರಿ, ಶಹಾಪುರಃ ತಮ್ಮ ನೆಚ್ಚಿನ ಚಿತ್ರನಟ ಪುನೀತ್ ರಾಜಕುಮಾರ 44 ನೇ ಜನ್ಮ ದಿನ ಅಂಗವಾಗಿ ಇಲ್ಲಿನ ಅವರ ಅಭಿಮಾನಿ ಬಳಗ ನಗರದಲ್ಲಿರುವ ಅನಾಥಾಲಯಕ್ಕೆ ತೆರಳಿ ಮಕ್ಕಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ನಟ ಪುನೀತ್ ಜನ್ಮ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ ವೀರೇಶ ವಂಶಿ, ನೆಚ್ಚಿನ ನಟ ಪುನೀತ್ ರಾಜಕುಮಾರ ಅವರು, ಅನಾಥ ಮಕ್ಕಳ ಬಗ್ಗೆ ಮತ್ತು ವೃದ್ಧರ ಬಗ್ಗೆ ಅತೀವ ಪ್ರೀತಿ ಹೊಂದಿದ್ದಾರೆ. ಅಸಹಾಯಕರಿಗೆ ಸಹಾಯ ಹಸ್ತ ಚಾಚುವ ಮೂಲಕ ನಿಜ ಜೀವನದಲ್ಲೂ ಹಿರೋ ಆಗಿದ್ದಾರೆ.
ಅವರು ಕನ್ನಡ ಚಿತ್ರ ರಂಗದಲ್ಲಿ ನೂರ್ಕಾಲ ಬಾಳಲಿ. ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಬಳಗದ ಜಿಲ್ಲಾಧ್ಯಕ್ಷ ರಾಮು ಮರಕಲ್ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.