
ಹಿಜಾಬ್ ಗೆ ಬೆಂಬಲಿಸಿ ವಾಗ್ವಾದ ನಡೆಸಿದ ಕಾಂಗ್ರೆಸ್ ಅಧ್ಯಕ್ಷ & ಕಾರ್ಯಕರ್ತರು ಪೊಲೀಸರ ವಶಕ್ಕೆ
ಬೆಂಗಳೂರಃ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ಪ್ರಾಚಾರ್ಯರ ಸೂಚನೆ ಮೇರೆಗೆ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ತೆಗೆದಿಟ್ಟು ತೆರಳುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರು ಹಿಜಾಬ್ ಪರವಾಗಿ ಕಾಲೇಜು ಪ್ರಾಂಶುಪಾಲ, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಹಿಜಾಬ್ ಪರವಾಗಿ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಲ್ಲೇಶ್ವರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಮಲ್ಲೇಶ್ವರಂ 13 ಬ್ಲಾಕ್ ವ್ಯಾಪ್ತಿ ಬಡಾವಣೆಯ ಸರ್ಕಾರಿ ಕಾಲೇಜುವೊಂದರಲ್ಲಿ ಈ ಘಟನೆ ನಡೆದಿದ್ದು, ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ಪ್ರಚೋದನೆ ನೀಡಲು ಬಂದಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾರ್ಯಕರ್ತರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಹಿಜಾಬ್ ಕೇಸ್ ಹೈಕೋರ್ಟ್ ತ್ರಿಸದಸ್ಯ ಪೀಠದ ಮುಂದಿರುವಾಗ ಅಂತಿಮ ಆದೇಶದವರೆಗೂ ಹಿಜಾಬ್ ಧರಿಸದೆ ಸಂಯಮವಾಗಿರಬೇಕು.
ಕಾನೂನು ಪಾಲನೆ ಎಲ್ಲರ ಕರ್ತವ್ಯ ಅದು ಬಿಟ್ಟು ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರಚೋದನೆ ನೀಡಲು ತೆರಳಿರುವದು ಅಪರಾಧ. ಕಾಂಗ್ರೆಸ್ ಅಧ್ಯಕ್ಷನ ನಡೆ ಇದೀಗ ಎಲ್ಲರನ್ನು ಉಬ್ಬೇ ರಿಸುವಂತೆ ಮಾಡಿದೆ ಎನ್ನಬಹುದು.