ವಿನಯವಾಣಿ ಯಲ್ಲಿ ಇಂದಿನ ರಾಶಿಫಲ ನೋಡಿ ಮುನ್ನಡೆಯಿರಿ
ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತವಾಗಿ ಸಿಗಲಿದೆ. ಚೈತನ್ಯದಾಯಕ ವಾದಂತಹ ಆರ್ಥಿಕ ಸ್ಥಿತಿ ಇಂದು ಕಾಣಬಹುದು. ಕೆಲವು ವೇದಿಕೆಗಳು ನಿಮ್ಮನ್ನು ಆಹ್ವಾನಿಸಬಹುದು. ನಿಮ್ಮ ಬೇಕಾಗಿರುವಂತಹ ಒಂದು ಕೆಲಸವು ನಿಧಾನವಾಗುತ್ತದೆ ಇದರಿಂದ ಚಿಂತೆ ಹೆಚ್ಚಾಗಬಹುದು, ಧೈರ್ಯದಿಂದ ಈ ಕಾರ್ಯವನ್ನು ಬೇಗ ಮಾಡಿಸು ಮಾಡಿ ಮುಗಿಸಬಹುದಾಗಿದೆ. ನಿಮ್ಮ ವಿರೋಧಿಗಳು ಸುಖಾ ಸುಮ್ಮನೆ ನಿಮ್ಮ ವಿರುದ್ಧ ಮಾತನಾಡಬಹುದು, ಯಾವುದಕ್ಕೂ ನಿಮ್ಮಲ್ಲಿ ತಾಳ್ಮೆ ಅತಿ ಅವಶ್ಯಕ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಷಭ ರಾಶಿ
ಆರ್ಥಿಕ ವ್ಯವಸ್ಥೆ ಸುಧಾರಣೆ ಕಂಡುಕೊಳ್ಳುವ ಮಾರ್ಗ ಯೋಚಿಸುವ ಸಂದರ್ಭವಿದು. ವೈಯಕ್ತಿಕ ಸಮಸ್ಯೆಗಳು ಬಗೆಹರಿಯುತ್ತವೆ. ಸನ್ನಿವೇಶಕ್ಕೆ ತಕ್ಕ ಹಾಗೆ ಮಾತನಾಡಿ ಅವಕಾಶಗಳನ್ನು ನಿಮ್ಮಂತೆ ಮಾಡಿಕೊಳ್ಳುವುದು ಒಳ್ಳೆಯದು. ಇಂದು ದೇವಸ್ಥಾನಗಳ ಭೇಟಿ ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ. ಬರಿ ಮಾತುಗಳು ಹೊಟ್ಟೆ ತುಂಬಿಸಲಾರದು, ಮನಸ್ಸಿನಲ್ಲಿ ಕೆಲವು ನಿರ್ಣಯ ತೆಗೆದುಕೊಂಡು ಕಾರ್ಯದಲ್ಲಿ ತೊಡಗಿ ಖಂಡಿತ ಶುಭವಾಗಲಿದೆ. ವ್ಯವಹಾರ ನಿಮಿತ್ತ ಲಾಭಾಂಶದ ಪ್ರಯಾಣ ನಿರೀಕ್ಷಿಸಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 994509826
ಮಿಥುನ ರಾಶಿ
ಬೇಕಾಗಿರುವುದನ್ನು ಪಡೆಯಿರಿ ಬೇಡವಾದದ್ದನ್ನು ಬಿಟ್ಟುಬಿಡಿ, ಸಹವಾಸ ದೋಷದಿಂದ ಸಮಸ್ಯೆಗಳು ನಿಮ್ಮನ್ನು ಆವರಿಸಿಕೊಳ್ಳುತ್ತದೆ ಎಚ್ಚರವಿರಲಿ. ನಿಮ್ಮ ವಿರುದ್ಧ ಅಪಪ್ರಚಾರ ಮಾಡುವ ಕೆಲವು ಜನಗಳು ಇರುವರು ಆದಷ್ಟು ಅವರಿಂದ ಅಂತರ ಕಾಯ್ದುಕೊಳ್ಳಿ. ಕೆಲಸದಲ್ಲಿ ಶ್ರದ್ಧೆ ಇರಲಿ ಹಿಡಿದ ಕೆಲಸ ಪರಿಪೂರ್ಣ ವಾಗುವುದಕ್ಕೆ ರೂಪರೇಷೆ ಸಿದ್ಧಪಡಿಸಿಕೊಳ್ಳಿ. ಶೈಕ್ಷಣಿಕ ಶಿಕ್ಷಣಾರ್ಥಿಗಳಿಗೆ ಕಲಿಕೆಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ನಿಮ್ಮ ಗುರಿ ಸಾಧನೆಗೆ ಹಲವರು ಸಹಕಾರ ನೀಡುವರು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಪ್ರೀತಿಪಾತ್ರರ ಮೇಲೆ ತಪ್ಪಾಗಿ ತಿಳಿದುಕೊಂಡು ನಂತರ ವ್ಯಥೆಪಡುವ ಸಾಧ್ಯತೆ ಇದೆ. ಇಂದು ಕುಟುಂಬದಲ್ಲಿ ವೈಯಕ್ತಿಕ ವಿಚಾರಗಳಿಗೆ ಚರ್ಚೆ ನಡೆಸುವ ಸಾಧ್ಯತೆ. ಯೋಜನೆಯು ಜನರಿಗೆ ಮುಟ್ಟಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ. ನಿಮ್ಮ ಗುಣಗಾನಗಳನ್ನು ನೀವೇ ಮಾಡಿಕೊಳ್ಳುವುದು ಅಷ್ಟು ಚೆಂದ ಕಾಣುವುದಿಲ್ಲ. ಬಂದಂತಹ ಅವಕಾಶವನ್ನು ಹೆಚ್ಚು ತಡ ತಡಮಾಡದೆ ಹಾಗೂ ಯೋಚಿಸಿ ಒಪ್ಪಿಕೊಳ್ಳುವುದು ಸರಿ. ಹಿರಿಯರು ನಿಮ್ಮ ಮೇಲೆ ಹೆಚ್ಚು ನಂಬಿಕೆಯ ಇಟ್ಟಿರುತ್ತಾರೆ ಅವರ ನಂಬಿಕೆ ಖಂಡಿತವಾಗಿ ಉಳಿಸಿಕೊಳ್ಳುತ್ತೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಜೀವನದ ಸಂಕಷ್ಟಗಳಿಗೆ ಹೆದರಬೇಡಿ, ಎಲ್ಲರ ಅಭಿಲಾಷೆ ಪೂರೈಸುವ ಸಾಮರ್ಥ್ಯ ನಿಮ್ಮಲ್ಲಿದೆ. ಮಕ್ಕಳ ಶಿಕ್ಷಣಕ್ಕೆ ನಿಮ್ಮ ನೆರವು ಅಗತ್ಯ ಬೀಳಲಿದೆ. ಸಾಲ ಪಡೆಯುವ ಅಥವಾ ಕೊಡುವ ವಿಚಾರವನ್ನು ಇಂದು ಮಾಡದಿರುವುದು ಸೂಕ್ತ. ಕೊಟ್ಟಿರುವ ಸಾಲವನ್ನು ಬೇಗನೆ ಪಡೆದುಕೊಂಡು ನಿಮ್ಮ ಅವಶ್ಯಕತೆಗೆ ಬಳಸಿಕೊಳ್ಳಿ. ಆನಂದ ಪಡುವ ಹಲವು ವಿಷಯಗಳು ಇಂದು ನಿಮ್ಮ ಮನೆಯಲ್ಲಿ ಜರುಗಬಹುದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಕೆಲವು ಇಷ್ಟದ ಕೆಲಸವು ಪರಿಪೂರ್ಣವಾಗುತ್ತದೆ. ಉದ್ಯೋಗರಂಗದಲ್ಲಿ ಹೆಚ್ಚುವರಿ ಕೆಲಸಗಳು ನಿಮಗೆ ಸಂಕಷ್ಟ ತಂದುಕೊಡಬಹುದು. ಹೊಸ ಒಪ್ಪಂದಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಬಲಿಷ್ಟವಾಗಿಸುತ್ತದೆ. ಕೆಲಸದಲ್ಲಿ ನಿರಾಸಕ್ತಿಯ ಬದಲು ಇಷ್ಟಪಡುವುದನ್ನು ರೂಡಿಸಿಕೊಳ್ಳಿ. ನಿಮ್ಮ ಚತುರತೆಯ ಇಂದು ತುಂಬಾ ಉಪಯೋಗವಾಗುವುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ತುಲಾ ರಾಶಿ
ಕುಟುಂಬಸ್ಥರ ಬೇಡಿಕೆಗಳನ್ನು ಪೂರೈಸುವುದು ನಿಮ್ಮ ಕರ್ತವ್ಯವಾಗಿರುತ್ತದೆ, ಅವರ ಯಥೇಚ್ಛ ಮಾತುಗಾರಿಕೆ ನಿಮಗೆ ಕಿರಿಕಿರಿ ಅನ್ನಿಸಬಹುದು ಆದರೆ ನಿಮ್ಮ ಕರ್ತವ್ಯ ಪರಿಪಾಲನೆಗೆ ಮುಂದಾಗಿ. ಉದ್ಯೋಗ ಸ್ಥಳದಲ್ಲಿ ವಿವಾದಗಳು ಸಹಜ ಅದನ್ನೇ ದೊಡ್ಡದಾಗಿ ಮಾಡುತ್ತಾ ಸಮಯ ಹರಣ ಮಾಡಬೇಡಿ. ಕೆಲಸದಲ್ಲಿ ಆಶಿಸ್ತು ಬೇಡ ಮುಗಿಸುವ ಹಂತದಲ್ಲಿ ಇರುವಂತಹ ಕೆಲಸವನ್ನು ಪೂರ್ಣಗೊಳಿಸಿ. ನಿಮ್ಮ ಯೋಜಿತ ಕಾರ್ಯಗಳಿಗೆ ಮನೆಯಿಂದ ಅವಶ್ಯಕ ಸಹಕಾರ ದೊರೆಯಲಿದೆ. ಅಂದುಕೊಂಡಿರುವ ಶುಭ ಕಾರ್ಯಗಳು ಕಾರಣಾಂತರಗಳಿಂದ ತಡೆಹಿಡಿಯುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ವ್ಯವಹಾರದಲ್ಲಿ ನಿಮ್ಮ ಯೋಚನೆ ಸರಿಯೆಂಬ ನಿರ್ಣಯ ಪ್ ತಪ್ಪಾಗಬಹುದಾಗಿದೆ. ಕಾರ್ಯಗಳ ಅಧ್ಯಯನಶೀಲತೆ ನಿರಂತರವಾಗಿರುವುದು ಉತ್ತಮ. ವಿಷಯವನ್ನು ವಿಷಯಾಂತರ ಮಾಡಿ ನಿಮ್ಮ ಮುಂದೆ ಪ್ರಸ್ತುತಪಡಿಸುವ ಜನಗಳನ್ನು ದೂರ ಇಡಿ, ಏಕೆಂದರೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಅವರು ಆಟ ಆಡಬಹುದಾದ ಸಾಧ್ಯತೆ ಇದೆ. ವ್ಯವಹಾರ ಒಪ್ಪಿಕೊಳ್ಳುವ ಮುನ್ನ ಸೂಕ್ತ ಲಾಭಾಂಶದ ಲೆಕ್ಕಚಾರ ಮಾಡಿ. ನಿಮ್ಮ ಆದಾಯ ಉತ್ತಮ ದಿಂದ ಕೂಡಿದ್ದರು ನಿಮ್ಮಲ್ಲಿ ಸಂತೋಷ ಇರುವುದು ಕಡಿಮೆ. ಕೆಲವು ಋಣಗಳನ್ನು ಇಂದು ತೀರಿಸಲು ಸಜ್ಜಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಲೇವಾದೇವಿ ವ್ಯವಹಾರದಲ್ಲಿ ನೇರವಾಗಿ ಅಥವಾ ಮಧ್ಯಸ್ಥಿಕೆ ಆಗಿ ಭಾಗವಹಿಸಬೇಡಿ. ಉದ್ಯೋಗರಂಗದಲ್ಲಿ ನಿಮ್ಮ ತಾಳ್ಮೆ ಅವಶ್ಯಕವಾಗಿ ಇರುವುದು ಒಳಿತು. ನಿಮಗೆ ಇಂದು ಹಲವು ರೀತಿಯ ಹೊಸ ಯೋಚನೆಗಳು ಆರ್ಥಿಕ ರಂಗವನ್ನು ಸದೃಢ ಮಾಡಬಹುದಾಗಿದೆ. ಉದ್ಯೋಗದ ಬದಲಾವಣೆಗೆ ಉತ್ತಮ ಫಲಿತಾಂಶ ಇಂದು ಕಾಣಬಹುದು. ದೈವ ದೇಗುಲಗಳಿಗೆ ಭೇಟಿನೀಡುವ ಸಾಧ್ಯತೆಯಿದೆ. ನಿಮ್ಮ ಅತ್ಯಧಿಕ ಶ್ರಮವು ಉತ್ತಮ ರಹದಾರಿಯನ್ನು ಸೃಷ್ಟಿಸುತ್ತದೆ. ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಕರ ರಾಶಿ
ಮನಸ್ಸು ನಿರ್ಲಿಪ್ತತೆಯಿಂದ ಯಾವುದೇ ಒತ್ತಡವಿಲ್ಲದೆ ನಿರಾತಂಕವಾಗಿ ಇರುವುದು. ಇಂದು ಉದ್ಯೋಗಸ್ಥರಿಗೆ ಹೆಚ್ಚಿನ ಸುವರ್ಣವಕಾಶಗಳು ಲಭಿಸಲಿದೆ. ಕೆಲವು ಪ್ರವಾಸಗಳು ನಿಮ್ಮ ಜೀವನದ ಗತಿಯನ್ನು ಬದಲಿಸಬಹುದು. ನಿಮ್ಮ ಉದ್ಯೋಗದಲ್ಲಿನ ದ್ವೇಷಾಸೂಯೆ ಗಳಿಗೆ ಕಡಿವಾಣ ಹಾಕಿ. ನಿಮ್ಮ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಯಾವುದೇ ಸಮಸ್ಯೆಗಳು ಸುಳಿಯದಂತೆ ನಿಮ್ಮ ಹಿತ ಕಾಪಾಡುವುದು. ಯೋಜಿತ ಕಾರ್ಯ ತಕ್ಕಮಟ್ಟಿಗೆ ಯಶಸ್ವಿಯಾಗಲು ನಿಮ್ಮ ಶ್ರಮ ಸಾಲದು, ನಿಮ್ಮ ನಿರಂತರ ಉದ್ಯೋಗದ ಮೇಲಿನ ಕಾಳಜಿ ಹೆಚ್ಚಿನ ಜನರು ಕೊಂಡಾಡುವರು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕುಂಭ ರಾಶಿ
ವ್ಯವಹಾರದಲ್ಲಿ ದೃಢ ನಿರ್ಧಾರ ನಿಮ್ಮ ಯಶಸ್ಸಿನ ಕೀಲಿಕೈ. ಮುಖ್ಯ ಕೆಲಸಗಳಿಗೆ ಕುಟುಂಬಸ್ಥರ ನೆರವು ಹಾಗೂ ಅವರ ಹಿತನುಡಿಗಳನ್ನು ಪಡೆಯುವುದು ಸೂಕ್ತ. ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆ ಗಳಿಸುವ ಸಾಧ್ಯತೆ. ವ್ಯವಹಾರದಲ್ಲಿ ಕೊಂಚಮಟ್ಟಿಗೆ ಭಿನ್ನಾಭಿಪ್ರಾಯ ಬರುವುದು. ನಿಮ್ಮ ಅಧಿಕ ಹಣ ಖರ್ಚು ಮಾಡುವ ಖಯಾಲಿ ಒಳ್ಳೆಯದಲ್ಲ. ಕುಟುಂಬದಿಂದ ಶುಭ ಸುದ್ದಿಯ ನಿರೀಕ್ಷೆ. ಕಲೆಯನ್ನು ಆರಾಧಿಸುವ ಕಲಾಪ್ರೇಮಿಗಳಿಗೆ ಉತ್ತಮವಾದ ವೇದಿಕೆ ಹಾಗೂ ಅವಕಾಶ ಸೃಷ್ಟಿಯಾಗಲಿದೆ. ನಿಮ್ಮ ಆಸ್ತಿ ಹಣಕಾಸಿನ ಕುಟುಂಬದ ಸಮಸ್ಯೆಗಳು ಇಂದು ಹಿರಿಯರ ಸಮ್ಮುಖದಲ್ಲಿ ಇತ್ಯರ್ಥವಾಗುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಉದ್ಯೋಗ ಸ್ಥಳದಲ್ಲಿ ನಿಮಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡುವರು. ಸಂಬಂಧಿಕರೊಡನೆ ಕೆಲವು ವಿವಾದಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ನೀವು ಮಾಡುವ ಪ್ರಮಾದಗಳು ಮುಜುಗರ ತರಿಸಬಹುದು. ನಂಬಿಕಸ್ಥ ಜನಗಳು ನಿಮ್ಮ ಅವಕಾಶಗಳನ್ನು ತಪ್ಪಿಸಬಹುದು ಎಚ್ಚರವಿರಲಿ. ಲೇವಾದೇವಿ ಹಾಗೂ ಹಣಕಾಸಿನಲ್ಲಿ ಜಾಗರೂಕತೆಯನ್ನು ವಹಿಸಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ಆರೋಗ್ಯ, ಸಂತಾನ, ದಾಂಪತ್ಯ, ಶತ್ರುಬಾಧೆ ಇನ್ನು ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ:
9945098262.