ಪ್ರಮುಖ ಸುದ್ದಿವಿನಯ ವಿಶೇಷ

ವಿನಯವಾಣಿ‌ ಯಲ್ಲಿ ಗಿರಿಧರ ಶರ್ಮಾ ಅವರಿಂದ‌‌ ಭವಿಷ್ಯವಾಣಿ

ಶ್ರೀ ದತ್ತತ್ರೆಯ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262

ಮೇಷ ರಾಶಿ
ನೀವು ಮಾಡುತ್ತಿರುವ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಕುಶಲತೆಯನ್ನು ಪಡೆದುಕೊಳ್ಳುತ್ತೀರಿ. ಕೆಲಸದಲ್ಲಿ ಕುತೂಹಲಕಾರಿಯಾದಂತಹ ಹಾಗೂ ಲಾಭದಾಯಕ ವಿರುವ ಯೋಜನೆಗಳನ್ನು ಸಿದ್ಧಪಡಿಸುತ್ತಿರಿ. ಮೇಲಾಧಿಕಾರಿಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ. ಹಣಕಾಸಿನ ವ್ಯವಸ್ಥೆಯಲ್ಲಿ ಕೈತುಂಬ ಕೆಲಸವಿದ್ದರೂ ದುಡ್ಡಿಗೆ ಬರ ಇರುವ ಹಾಗೆ ಇಂದು ಸಾಗುತ್ತದೆ. ಸಹಾಯವನ್ನು ಅಪೇಕ್ಷಿಸಿ ಕೆಲವರು ಬರಬಹುದು ಅವರ ಸಂಪೂರ್ಣ ಮಾಹಿತಿಗಳನ್ನು ನೋಡಿ ಮುಂದುವರಿಯುವುದು ಒಳಿತು. ಪತ್ನಿಯ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ವೃಷಭ ರಾಶಿ

ನಿರುದ್ಯೋಗಿಗಳಿಗೆ ಇಂದು ಆಶಾಕಿರಣ ಮೂಡಲಿದೆ, ಆತ್ಮೀಯ ವ್ಯಕ್ತಿಗಳ ಸಹಕಾರ ನಿಮಗೆ ಸಿಗುತ್ತದೆ. ಪ್ರೇಮಿಗಳಿಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸುವ ಶುಭ ದಿನವಿದು. ನಿಮ್ಮ ಕಾರ್ಯಬದ್ದತೆ ಹಾಗೂ ಸಮಾಜಮುಖಿ ಜೀವನವು ವರ್ಚಸ್ಸು ತಂದುಕೊಡಲಿದೆ. ಕೆಲಸಕಾರ್ಯಗಳಿಗೆ ಹೊರಡುವ ಮುನ್ನ ಅಗತ್ಯ ವಸ್ತುಗಳ ಪಟ್ಟಿ ಪರಿಶೀಲಿಸಿಕೊಳ್ಳಿ. ಕೌಟುಂಬಿಕ ವ್ಯಾಜ್ಯಗಳನ್ನು ನಿಮ್ಮ ಕುಟುಂಬಸ್ಥರಲ್ಲಿಯೇ ಬಗೆಹರಿಸಿಕೊಳ್ಳಿ. ಯಾವುದೇ ವದಂತಿಗಳನ್ನು ನಂಬದಿರುವುದು ಒಳ್ಳೆಯದು.

ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ನಿಮ್ಮ ಹಠಮಾರಿ ಸ್ವಭಾವದಿಂದ ಕುಟುಂಬದಲ್ಲಿ ಸಮಸ್ಯೆಗಳು ಬರಬಹುದಾದ ಸಾಧ್ಯತೆ ಇದೆ, ನಿಮ್ಮ ನಿಲುವುಗಳು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು, ಎಲ್ಲರೂ ನಿಮಗಾಗಿ ನೀವು ಎಲ್ಲರಿಗಾಗಿ ಎಂಬುದನ್ನು ಅರಿತುಕೊಳ್ಳಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿ ಇರಲಿದೆ. ನಿಮ್ಮ ಕೆಲವು ಯೋಜನೆಗಳಿಗೆ ಇಚ್ಛಾಶಕ್ತಿಯ ಅವಶ್ಯಕತೆ ಇದೆ. ಕುಟುಂಬದ ಹಿರಿಯರ ಅವಶ್ಯಕತೆಗಳನ್ನು ಪೂರೈಸಲು ಮುಂದಾಗಿ. ಗೃಹ ಕಾಮಗಾರಿ ನಿರೀಕ್ಷೆಯಂತೆ ನಡೆಯಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕಟಕ ರಾಶಿ
ಚಂದ್ರಮಾ ಮನಸೋ ಜಾತಃ ಮನಸ್ಸು ಚಂಚಲತೆಯಿಂದ ಕೂಡಿರಬಹುದು ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಲೇವಾದೇವಿ ವ್ಯವಹಾರಕ್ಕೆ ಹೋಗದಿರಿ. ಕುಟುಂಬದ ಹಿತಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುವಿರಿ. ಕೆಲಸದಲ್ಲಿ ಹೆಚ್ಚಿನ ಚೈತನ್ಯ ಇಂದೂ ಕಾಣಬಹುದು. ನಿಮ್ಮ ಸಿದ್ಧಾಂತಗಳನ್ನು ತಪ್ಪು ಎಂದು ವಿಶ್ಲೇಷಿಸಬಹುದು ಆದರೆ ನಿಮ್ಮ ವಿಚಾರಗಳಲ್ಲಿ ನಂಬಿಕೆ ಇಡುವುದು ಒಳಿತು. ಜ್ಞಾನ ಸಂಪಾದನೆ ಮಾಡುವ ನಿಮ್ಮ ಬಯಕೆ ಉತ್ಕೃಷ್ಟವಾಗಿರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ನಿಮ್ಮ ನಡೆಯು ಸಾಧನೆಗೆ ಪೂರಕವಾಗಿದೆ, ಗುರಿ ತಲುಪುವ ತನಕ ವಿಶ್ರಮಿಸದೇ ಸಾಗಿ. ಮಾರಾಟ ಪ್ರಕ್ರಿಯೆಗಳಲ್ಲಿ ಉತ್ತಮ ವ್ಯವಹಾರ ನಿರೀಕ್ಷಿಸಬಹುದು. ಪತ್ನಿಯ ಬೇಸರವನ್ನು ಸರಿಪಡಿಸಲು ಇಂದು ಪ್ರಯತ್ನಿಸಿ. ನೀವು ಮಾಡಬೇಕೆಂದಿರುವ ಕಾರ್ಯವು ನಿಮ್ಮ ಜೀವನವನ್ನು ಲಾಭಾಂಶವಾಗಿ ಬದಲಾಯಿಸುತ್ತದೆ. ನವೀನ ಉದ್ಯಮ ಪ್ರಾರಂಭ ಮಾಡಲು ಶುಭದಾಯಕವಾಗಿದೆ. ಆರ್ಥಿಕ ದೃಷ್ಟಿಯಿಂದ ಹಿನ್ನಡೆಯನ್ನು ಇಂದು ಕಾಣಬಹುದು. ತಡೆಹಿಡಿದಿರುವ ಕೆಲಸವು ಪ್ರಾರಂಭವಾಗುವ ಸನ್ನಿವೇಶ ಹತ್ತಿರದಲ್ಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಭಗವಂತನ ಪ್ರೇರಣೆಯಿಲ್ಲದೆ ಏನು ನಡೆಯದು, ಅದರಂತೆ ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ದೇವರನ್ನು ನೆನೆದು ಮುಂದೆ ಸಾಗಿ. ನಿಮ್ಮ ಮನಸ್ಸಿನಲ್ಲಿರುವ ಹೊಸ ಕಾರ್ಯ ಆರಂಭ ಮಾಡುವ ಮುನ್ನ ಅದರ ಸಾಧ್ಯಾಸಾಧ್ಯತೆ ಹಾಗೂ ಲಾಭಾಂಶವನ್ನು ಪೂರ್ಣ ಪ್ರಮಾಣದ ಲೆಕ್ಕಾಚಾರ ಮಾಡಿ ಮುಂದೆ ಕೈಹಾಕಿ. ವಾದ-ವಿವಾದಗಳಿಂದ ಬುದ್ದಿವಂತರಾಗಿ ನೀವು ಕಾಣಬಹುದು ಆದರೆ ಸತ್ಯ ಸುಳ್ಳು ಎರಡನ್ನು ಸಹ ಒಪ್ಪಿಕೊಳ್ಳಿ. ನಿಮಗಿಂತ ಕೆಳಮಟ್ಟದವರನ್ನು ತಾತ್ಸಾರದಿಂದ ನೋಡಿದರೆ ಅದು ನಿಮ್ಮ ಬುದ್ಧಿಗೆ ಮಂಕು ಕವಿದಿದೆ ಎಂಬ ಅರ್ಥ, ಮನುಷ್ಯತ್ವ ಹಾಗೂ ಮಾನವೀಯತೆ ಎಂಬುದು ಬದುಕಿನ ಭಾಗ ಎಂಬುದನ್ನು ಮನಗಾಣಿ. ಕುಟುಂಬದಲ್ಲಿ ಹೊಂದಾಣಿಕೆ ಸಾಧಿಸಲು ಪ್ರಯತ್ನ ಪಡುವುದು ಒಳ್ಳೆಯದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ತುಲಾ ರಾಶಿ
ಕೌಟುಂಬಿಕ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ಕಾಣಲು ಪರಿಹಾರ ಹುಡುಕಿ. ವಾದ ವಿವಾದಗಳಿಂದ ಆತ್ಮೀಯರು ದೂರ ಆಗುವ ಸಾಧ್ಯತೆ ಇದೆ. ಮಾನಸಿಕವಾಗಿ ಕೆಲವು ಘಟನೆಗಳು ನಿಮ್ಮ ಚೈತನ್ಯವನ್ನು ಕಡಿಮೆ ಮಾಡಬಹುದು. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ ನಿಮಗೆ ಬರಲಿದ್ದು ಇದರಿಂದ ನಿಮ್ಮ ಸ್ಥಾನ ದೊಡ್ಡಮಟ್ಟದಾಗಲಿದೆ. ಮಡದಿಯೊಡನೆ ಸಣ್ಣ ವಿಷಯಕ್ಕೆ ಕಲಹ ಇಳಿದು ದೊಡ್ಡದಾಗಿ ಚಿತ್ರಸ ಬೇಡಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಉದ್ಯೋಗದಲ್ಲಿ ತಪ್ಪು ನಡೆಯದಂತೆ ಕೆಲಸ ನಿರ್ವಹಿಸಿ. ಹಿರಿಯರ ಹಿತಾಸಕ್ತಿಯನ್ನು ಕಡೆಗಣಿಸದಿರಿ. ವ್ಯವಹಾರದಲ್ಲಿ ಕೌಶಲ್ಯತೆ ಹಾಗೂ ತಾಂತ್ರಿಕವಾಗಿ ಮುಂದುವರಿಯುವ ಸಮಯವಿದು. ನಿಮ್ಮ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಂಡು ಅಭಿವೃದ್ಧಿ ಸಾಧಿಸಲು ಪಣತೊಡಿ. ವಿರೋಧಿ ವರ್ಗದ ಜನಗಳು ನಿಮ್ಮ ಕೆಲಸಗಳಿಗೆ ಮೆಚ್ಚುಗೆ ಸೂಚಿಸುತ್ತಾರೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮ ಪರೋಪಕಾರದ ಗುಣಗಳಿಂದ ಹೆಚ್ಚು ಮನ್ನಣೆ ಗಳಿಸುತ್ತೀರಿ. ಯಾಂತ್ರಿಕವಾಗಿ ಕೆಲಸ ನಿರ್ವಹಿಸುವಾಗ ಜಾಗ್ರತೆ ಇರಲಿ. ನಿರೀಕ್ಷಿತ ಹಣಕಾಸಿನಲ್ಲಿ ವಿಳಂಬ ಪಾವತಿ ನಿಮ್ಮ ಮನಸ್ಸಿಗೆ ಬೇಸರವಾಗುತ್ತದೆ. ವಿವಾಹದ ಆಕಾಂಕ್ಷಿಗಳಿಗೆ ಅತ್ಯುತ್ತಮ ದಿನವಾಗಿದೆ. ಹಳೆಯ ಮಿತ್ರ ವರ್ಗದ ಭೇಟಿಯಿಂದ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ವಾಹನ ಖರೀದಿಯ ಬಯಕೆ ಮೂಡುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ಶುಭ ಕಾರ್ಯಗಳು ನಡೆಸುವ ಬಗ್ಗೆ ಮಾತುಕತೆ ನಡೆಯಲಿದೆ. ಕುಟುಂಬದಿಂದ ಧಾರ್ಮಿಕ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ಕೆಲಸದ ನಿಮಿತ್ತ ಹೆಚ್ಚು ಅಲೆದಾಟ ಕಾಣಬಹುದು ಇದರಿಂದ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಗೃಹ ಖರೀದಿಯ ಯೋಜನೆ ನಿಮ್ಮ ಮುಂದಿದ್ದರೆ ಸ್ವಲ್ಪ ಮುಂದೂಡುವುದು ಒಳಿತು. ಅಗತ್ಯ ವಸ್ತುಗಳ ಖರೀದಿ ಹಾಗೂ ಮನೆಯವರ ಬೇಡಿಕೆ ಪೂರೈಸುವ ನಿಮಿತ್ತ ಬಂದಂತ ಹಣವು ಉಳಿಯಲಾರದೇ ಖರ್ಚಾಗುವ ಸಾಧ್ಯತೆ ಇದೆ. ಉನ್ನತ ವ್ಯಕ್ತಿಗಳ ಒಡನಾಟದಿಂದ ಹೆಚ್ಚಿನ ಅವಕಾಶಗಳನ್ನು ಕಾಣಬಹುದು. ಆರೋಗ್ಯದ ಕಡೆ ಸೂಕ್ತ ಗಮನವಹಿಸುವುದು ಒಳ್ಳೆಯದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕುಂಭ ರಾಶಿ
ಆಧ್ಯಾತ್ಮಿಕ ಚಿಂತನೆ ಹಾಗೂ ಭಕ್ತಿ ಭಾವನೆಯು ನಿಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಪರಿಚಯಿಸುತ್ತದೆ. ಕುಟುಂಬದಲ್ಲಿ ಸೌಖ್ಯದ ವಾತಾವರಣ ಇಂದು ಕಾಣಬಹುದು. ಆರೋಗ್ಯವನ್ನು ಸಮತೋಲಿತ ಆಹಾರದಿಂದ ಕಾಪಾಡಿಕೊಳ್ಳಿ. ನಿಮ್ಮ ಕೆಲಸದ ಅತ್ಯುತ್ತಮ ನಡೆಯನ್ನು ಮನಗಂಡು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಬಂದಂತಹ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಂಡು ಆರ್ಥಿಕ ವಿಸ್ತಾರವನ್ನು ಮಾಡಲು ಮುಂದಾಗಿ. ನಿಮ್ಮ ಪತ್ನಿಯ ಸಾಂಗತ್ಯದಲ್ಲಿ ಇಂದು ಅತ್ಯುತ್ತಮ ದಿನವನ್ನಾಗಿ ಕಾಲ ಕಳೆಯಲಿದ್ದೀರಿ. ಅವರ ಸ್ನೇಹ-ಪ್ರೇಮ ನಿಮ್ಮನ್ನು ಹೆಚ್ಚು ಕಾಡುತ್ತದೆ.
ಶುಭ ಸಂಖ್ಯೆ 7
ಗಿರಿದರ ಶರ್ಮ 9945098262

ಮೀನ ರಾಶಿ
ಅನುಪಯುಕ್ತ ವಸ್ತುಗಳ ಖರೀದಿಗೆ ಮುಂದಾಗಬೇಡಿ ಇದು ನಿಮ್ಮ ಜೇಬು ಖಾಲಿ ಮಾಡಬಹುದು ಎಚ್ಚರ. ಸಹೋದರರಲ್ಲಿ ಕೆಲವೊಂದು ವ್ಯಾಜ್ಯಗಳು ಬರಬಹುದಾಗಿದೆ ಹಿರಿಯರೊಡನೆ ಸಮಾಲೋಚಿಸಿ ರಾಜಿ ಮಾಡಿಕೊಳ್ಳುವುದು ಒಳಿತು. ಅತೀ ಕಡಿಮೆ ಬಂಡವಾಳದಿಂದ ಸ್ಥಾಪಿಸಿದ ವ್ಯಾಪಾರರಂಗವು ಅತಿ ಹೆಚ್ಚು ಲಾಭಾಂಶ ತಂದುಕೊಡಲಿದೆ. ಪ್ರೀತಿಪಾತ್ರರನ್ನು ಸಂತೋಷವಾಗಿ ನೋಡಿ ಕೊಳ್ಳುವಿರಿ. ಕೆಲವು ಕಾರ್ಯಕ್ರಮಗಳನ್ನು ರೂಪಿಸುವಂತಹ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ ಅದನ್ನು ಯಶಸ್ವಿಯಾಗಿ ನಿಭಾಯಿಸಿ ಇದರಿಂದ ನಿಮ್ಮ ಕಾರ್ಯಗಳಲ್ಲಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಆರೋಗ್ಯ, ಮದುವೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button