ಪ್ರಮುಖ ಸುದ್ದಿ
ಟಿಕ್ ಟಾಕ್ : ಮಹಿಳಾ ಪೇದೆ ಅಮಾನತ್ತು!
ಗುಜರಾತ್: ಪೊಲೀಸ್ ಠಾಣೆಯ ಲಾಕಪ್ ಬಳಿ ಹಿಂದಿ ಹಾಡೊಂದಕ್ಕೆ ಹೆಜ್ಜೆಹಾಕಿದ್ದ ಮಹಿಳಾ ಪೇದೆ ಈಗ ಕೆಲಸ ಕಳೆದುಕೊಂಡ ಪ್ರಕರಣ ಗುಜರಾತಿನಲ್ಲಿ ನಡೆದಿದೆ. ಮೆಹ್ಸಾನಾ ನಗರದ ಠಾಣೆಯಲ್ಲಿ ಪೇದೆಯಾಗಿದ್ದ ಅರ್ಪಿತಾ ಟಿಕ್ ಟಾಕ್ ಹುಚ್ಚಿಗೆ ಬಿದ್ದು ಠಾಣೆಯ ಲಾಕಪ್ ಮುಂದೆ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದರು.
ಪೇಸೆ ವಿಡಿಯೋ ಟಿಕ್ ಟಾಕ್ ಪ್ಲಾಟ್ ಫಾರ್ಮ್ ನಲ್ಲಿ ಹರಿದಾಡಿದ್ದು ಇತರೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಪೇದೆಯ ಡಾನ್ಸ್ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ತನಿಖೆ ನಡೆಸಿದಾಗ ಕರ್ತವ್ಯದ ಅವಧಿಯಲ್ಲಿ ಸಿವಿಲ್ ದಿರಿಸಿನಲ್ಲಿ ಲಾಕಪ್ ಮುಂದೆ ಡಾನ್ಸ್ ಮಾಡಿರುವುದು ಬೆಳಕಿಗೆ ಬಂದಿರುವ ಕಾರಣ ಅಮಾನತ್ತುಗೊಳಿಸಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.