ಪ್ರಮುಖ ಸುದ್ದಿ
ನವವಧು ನೇಣಿಗೆ ಶರಣು?
ಬೆಂಗಳೂರು: ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವವಧು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿರುವ ಘಟನರ ಆದರ್ಶ ನಗರದ ನಿವಾಸದಲ್ಲಿ ನಡೆದಿದೆ. ಪಲ್ಲವಿ(25) ಮೃತ ದುರ್ದೈವಿ ಆಗಿದ್ದು ಪತಿ ನವೀನ್ ವಿರುದ್ಧ ಮೃತಳ ಪೋಷಕರು ಕಿರುಕುಳ ಆರೋಪ ಮಾಡಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದಾಗಿ ಪಲ್ಲವಿ ಸಾವಿಗೆ ನಿಖರವಾದ ಕಾರಣ ಏನೆಂಬುದು ಬಯಲಾಗಬೇಕಿದೆ.