ಪ್ರಮುಖ ಸುದ್ದಿ

ಕಾಶ್ಮೀರದಲ್ಲಿ ಖಾಸಗಿ ಕಂಪನಿಗಳ ಸ್ಥಾಪನೆಗೆ ಆದ್ಯತೆ – ಪ್ರಧಾನಿ ಮೋದಿ

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವಾದ 370 , 35ಎ ವಿಧಿ ರದ್ದು ಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ…

ಖಾಸಗಿ ಕಂಪನಿಗಳು ಜಮ್ಮು ಕಾಶ್ಮೀರದಲ್ಲಿ ಸ್ಥಾಪನೆ ಆದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳಿಗೆ ನಾನು ಜಮ್ಮು ಕಾಶ್ಮೀರಕ್ಕೆ ಬರುವಂತೆ ಕರೆ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಮ್ಮು ಕಾಶ್ಮೀರ ವಿಶ್ವದಲ್ಲೇ ಅತಿ ದೊಡ್ಡ ಪ್ರವಾಸೋದ್ಯಮ ಕ್ಷೇತ್ರ ಆಗಲಿದೆ. ಸೌರ ಶಕ್ತಿ ಉತ್ಪಾದನೆಗೆ ಲಡಾಖ್ ನಲ್ಲಿ ವಿಫುಲ ಅವಕಾಶವಿದೆ. ಜಮ್ಮು ಕಾಶ್ಮೀರ ಬೇರೆ ಅಲ್ಲ, ದೇಶದ ಇತರೆ ರಾಜ್ಯದ ಜನ ಬೇರೆ ಅಲ್ಲ. ಹೀಗಾಗಿ, ಅಲ್ಲಿನ ಜನರ ಶ್ರೇಯೋಭಿವೃದ್ಧಿಗಾಗಿ ಹಕ್ಕು ಬಳಸಿಕೊಳ್ಳುವುದು ಅಲ್ಲಿನ ಜನರ ಹಕ್ಕಾಗಿದೆ. ಜಮ್ಮು ಕಾಶ್ಮೀರ ಹಾಗೂ ದೇಶದ ಜನರ ಸಹಕಾರದೊಂದಿಗೆ ಜಮ್ಮು ಕಾಶ್ಮೀರವನ್ನು ಅಭಿವೃದ್ಧಿ ಪಥಕ್ಕೆ ಕೊಂಡಯ್ಯಲಾಗುವುದು ಎಂದು ಮೋದಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button