ಪ್ರಮುಖ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಐಐಟಿ, ಐಐಎಂ ಮತ್ತು ಏಮ್ಸ್ ಸ್ಥಾಪನೆ ಗುರಿ -ಮೋದಿ

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವಾದ 370 , 35ಎ ವಿಧಿ ರದ್ದು ಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ…

ಜಮ್ಮೂ ಕಾಶ್ಮೀರದಲ್ಲೂ ಆಡಳಿತದಲ್ಲಿ ಪಾರದರ್ಶಕತೆ ತರುತ್ತೇವೆಂಬ ವಿಶ್ವಾಸವಿದೆ. ಐಐಟಿ, ಐಐಎಂ, ಏಮ್ಸ್ ಸೇರಿದಂತೆ ಪ್ರಮುಖ ಸಂಸ್ಥೆಗಳನ್ನು ಅಲ್ಲಿ ಆರಂಭಿಸುತ್ತೇವೆ. ರೈಲು ಯೋಜನೆ, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದು, ರಸ್ತೆ ಕಾಮಗಾರಿ ಸೇರಿದಂತೆ ಪ್ರಮುಖ ಯೋಜನೆಗಳು, ಮೂಲ ಸೌಕರ್ಯಗಳನ್ನು ಜಮ್ಮು ಕಾಶ್ಮೀರಕ್ಕೆ ಆದ್ಯತೆ ಮೇರೆಗೆ ಕಲ್ಪಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ ಉದ್ಯಮಿಗಳಿಗೂ ಕರೆ ನೀಡಿದ ಮೋದಿ ಆಹಾರ ಸಂಸ್ಕರಣೆ ಮತ್ತು ರಫ್ತು ಉದ್ಯಮಗಳಿಗೆ ಅವಕಾಶವಿದೆ. ಅಲ್ಲಿನ ಉತ್ಪನ್ನಗಳನ್ನೇ ವಿಶ್ವದೆಲ್ಲೆಡೆ ರವಾನಿಸಲು ಮುಂದೆ ಬರಲಿ. ಲಡಾಖ್ -ಕಾರ್ಗಿಲ್ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲಿದೆ. ಆ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸುವ ಪ್ಲಾನ್ ಇದೆ ಎಂದು ಹೇಳುವ ಮೂಲಕ ಜಮ್ಮು ಕಾಶ್ಮೀರದ ಜನರಿಗೆ ಪ್ರಧಾನಿ ಭರವಸೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button