ವಿನಯ ವಿಶೇಷ
ಝಗಮಗ ಸಂಸತ್ ಭವನ!
ನವದೆಹಲಿ : ರಾಜಧಾನಿಯಲ್ಲಿರುವ ಸಂಸತ್ ಭವನ ಬಣ್ಣ ಬಣ್ಣದ ದೀಪಲಾಂಕರದಿಂದ ಕಂಗೊಳಿಸುತ್ತಿದೆ. ಗೋಲ್ಡನ್ , ಬ್ಲೂ ಮತ್ತು ಪಿಂಕ್ ಕಲರ್ ಸೇರಿ ವಿವಿಧ ಬಣ್ಣಗಳಲ್ಲಿ ಸಂಸತ್ ಭವನ ನವ ಮದುವಣಗಿತ್ತಿಯಂತೆ ಮಿರಮಿರ ಮಿಂಚುತ್ತಿದೆ. ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಈ ದೀಪಲಂಕಾರದ ಯೋಜನೆಗೆ ಚಾಲನೆ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಂಸತ್ ಭವನದ ಆಕರ್ಷಕ ಚಿತ್ರಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ.