ಪ್ರಮುಖ ಸುದ್ದಿ
ಮಹಾ ಮಳೆಗೆ ಸಾವಿರಾರು ಕೋಳಿ ಮಾರಣ ಹೋಮ
ಬಾಗಲಕೋಟ್ಃ ಜಿಲ್ಲೆಯ ಮುದೋಳ ಪಟ್ಟಣ ಮಂಟೂರ ರಸ್ತೆ ಬಳಿ ಇರುವ ಕೋಳಿ ಫಾರಂವೊಂದಕ್ಕೆ ನುಗ್ಗಿದ ಮಳೆ ನೀರಿಗೆ ಸಾವಿರಾರು ಕೋಳಿಗಳು ಬಲಿಯಾದ ಘಟನೆ ನಡೆದಿದೆ.
ಬೆಳಗ್ಗೆಯಿಂದ ವರುಣ ಅಬ್ಬರ ಹೆಚ್ಚಾಗಿದ್ದು, ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆ ನೀರಿಗೆ ಮನೆಗಳು, ಅಂಗಡಿಗಳು ಮುಳುಗಡೆಯಾಗಿ ಅವಾಂತರ ಸೃಷ್ಠಿಯಾಗಿದೆ.
ಕೋಳಿ ಫಾರಂಗೂ ನೀರು ನುಗ್ಗಿರುವ ಹಿನ್ನೆಲೆ ಫಾರಂನಲ್ಲಿದ್ದ ಸಾವಿರಾರು ಕೋಳಿಗಳು ನೀರಲ್ಲಿ ಮುಳಗಿದ್ದು, ದೊಡ್ಡ ಅವಘಡವೇ ನಡೆದಿದೆ. ಹೀಗಾಗಿ ಕೋಳಿಗಳು ಸಾವನ್ನಪ್ಪಿವೆ ಎನ್ನಲಾಗಿದೆ. 22 ಟನ್ ಕೋಳಿ ಆಹಾರ ಸಹ ಈ ಸಂದರ್ಭದಲ್ಲಿ ನೀರು ಪಾಲಾಗಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ.