ಪ್ರಮುಖ ಸುದ್ದಿ

ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ‌ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ‌ ಬೆಟ್ಟ ಶಿವನ‌ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರ‌ಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ‌ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ‌ ಡಿ.ಕೆ.ಶಿವಕುಮಾರ ಅಭಿಮಾನಿ‌ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ‌ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ‌ ಪ್ರತಿಮೆ‌ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.

ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..?

ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ‌ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಕಪಾಲಿಬೆಟ್ಟ ಅಂದ್ರೆ ಕಾಳಭೈರವನ‌ ಬೆಟ್ಟ ಶಿವನ‌ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ.
ಯಾರ‌ಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು.

ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ‌ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು,
ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ‌ ಡಿ.ಕೆ.ಶಿವಕುಮಾರ ಅಭಿಮಾನಿ‌ ಬಳಗ ಕಟ್ಟುವೆ.

ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ‌ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ‌ ಪ್ರತಿಮೆ‌ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.

Related Articles

Leave a Reply

Your email address will not be published. Required fields are marked *

Back to top button