ಪ್ರಮುಖ ಸುದ್ದಿ

ತಾಯಿ‌ ಅಂತ್ಯಕ್ರಿಯೆಗೆ ದುಬೈಯಿಂದ ಬಂದ 11 ಜನರಿಗೆ ಕೊರೊನಾ ತಂದ

ತಾಯಿ‌ ಅಂತ್ಯಕ್ರಿಯೆಗೆ ದುಬೈಯಿಂದ ಬಂದ 18 ಜನರಿಗೆ ಕೊರೊನಾ ತಂದ
ಮಧ್ಯಪ್ರದೇಶಃ ತಾಯಿಯ‌ ಅಂತಿಮ‌‌ ಸಂಸ್ಕಾರ ನೆರವೇರಿಸಲು ಮಾ.17 ರಂದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಗೆ ಆಗಮಿಸಿದ್ದ ದುಬೈ‌ ಮೂಲದ ವ್ಯಕ್ತಿಯಿಂದ ಅವರ ಕುಟುಂಬದ 11 ಜನರಿಗೆ ಕೊರೊನಾ ವೈರಸ್ ತಗುಲಿರುವದು ಕಂಡು ಬಂದಿದೆ.

ದುಬೈದಿಂದ ಬಂದ ವ್ಯಕ್ತಿ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ಪತ್ತೆಯಾಗಿರುವದು ದೃಢವಾಗಿದ್ದು, ಶುಕ್ರವಾರ ಕುಟುಂಬಸ್ಥರನ್ನು ಪರೀಕ್ಷಿಸಲಾಗಿ 11 ಮಂದಿಯಲ್ಲಿ ಸೋಂಕು ದೃಢವಾಗಿದೆ ಎನ್ನಲಾಗಿದೆ.

ಹೊಸದಾಗಿ‌ ಹತ್ತು ಪ್ರಕರಣಗಳು ಒಂದೇ ಕುಟುಂಬದಿಂದ ಬಂದಿದ್ದು, 28 ಜನರನ್ನು ಪರೀಕ್ಷಿಸಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಪ್ರಿಯಾಂಕಾ ದಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದು‌ ಬಡ ಕುಟುಂಬವಾಗಿದ್ದು, ಸಣ್ಣ ಮನೆಯಲ್ಲಿಯೇ ಎಲ್ಲರೂ ವಾಸವಿರುವ ಕಾರಣ ಕೊರೊನಾ ಎಲ್ಲರಿಗೂ ತಗಲಲು ಸಾಧ್ಯವಾಗಿದೆ ಎಂದ ಅವರು, ಉಳಿದ. 18 ಜನರಲ್ಲಿ ಸೋಂಕು ಇಲ್ಕವೆಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button