ಶಹಾಪುರಃ ಕೊರೊನಾಗೆ 4 ನೇ ಬಲಿ
ಶಹಾಪುರಃ ಕೊರೊನಾಗೆ 4 ನೇ ಬಲಿ
yadgiri,ಶಹಾಪುರ: ನಗರದ ಆಸರ ಮೊಹಲ್ಲಾದ 52 ವಯಸ್ಸಿನ ಮಹಿಳೆಗೆ ಕೋವಿಡ್-19 ದೃಢಪಟ್ಟಿದ್ದರಿಂದ ಸೋಮವಾರ ಬೆಳಿಗ್ಗೆ ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಬೆಳಗ್ಗೆ ತೀವ್ರ ಜ್ವರದಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಬಂದು ಗಂಟಲು ದ್ರವ ತೆಗೆದು ಪರೀಕ್ಷೆ ಮಾಡಿದಾಗ ಪಾಸಿಟಿವ್ ವರದಿ ಬಂದಿತು. ನಂತರ ಚಿಕಿತ್ಸೆ ಮುಂದುವರೆಸಲಾಯಿತು. ಆದರೆ ಒಂದು ಗಂಟೆಯ ನಂತರ ಅರೋಗ್ಯದಲ್ಲಿ ಏರು ಪೇರಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುತ್ತಾರೆ ಎಂದು ನಗರದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿರ್ ತಿಳಿಸಿದ್ದಾರೆ.
ಜ್ವರ ಕಾಣಿಸಿಕೊಂಡರು ಕೊರೊನಾದ ಭೀತಿಯಿಂದ ಮನೆಯಲ್ಲಿ ಜ್ವರದ ಮಾತ್ರೆಯನ್ನು ತೆಗೆದುಕೊಂಡು ಇದ್ದರು. ರಾತ್ರಿ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗಲಿಲ್ಲ ರೋಗ ಉಲ್ಬಣಿಸಿದಾಗ ಆಸ್ಪತ್ರೆಗೆ ದಾಖಲಿಸಿದೇವು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಾಲೂಕಿನಲ್ಲಿ ಇದುವರೆಗು ಕೊರೊನಾದಿಂದ 4 ಸಾವು ಸಂಭವಿಸಿವೆ. ವಿದ್ಯಾನಗರದ 1, ಸಗರ ಗ್ರಾಮದ -1, ಗೋಗಿ ಗ್ರಾಮ -1 ಮತ್ತು ಇಂದು ಆಸರಮೊಹಲ್ಲಾದಲ್ಕಿ 1 ಒಟ್ಟು 4 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.
—————