ಪ್ರಮುಖ ಸುದ್ದಿ

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ.!

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ.!

ನವದೆಹಲಿಃ ಕೇಂದ್ರ ಸಚಿವ, ಬಿಹಾರದ ಲೋಕ ಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ (74) ನಿಧನ ಹೊಂದಿದ್ದಾರೆ. ಈ ಕುರಿತು ಅವರ ಮಗ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಅಲ್ಲದೆ ಪುತ್ರನನ್ನು ಅಪ್ಪಿಕೊಂಡ ರಾಮ್ ವಿಲಾಸ್ ಪಾಸ್ಚಾನ್ ಅವರ ಹಳೇ ಚಿತ್ರವನ್ನು ಹಂಚಿಕೊಂಡಿರುವ ಚಿರಾಗ್..ಅಪ್ಪಾ…ಈಗ ನೀವು ಈ ಜಗತ್ತಿನಲ್ಲಿ ಇಲ್ಲ. ಆದರೆ ನನಗೆ ತಿಳಿದಿದೆ ನೀವು ಎಲ್ಲೇ ಇದ್ದರೂ ಸದಾ ನನ್ನೊಂದಿಗೆ ಇರುತ್ತೀರಿ. ಮಿಸ್ ಯು ಪಾಪಾ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು, ಎದೆ ನೋವಿನ ಕಾರಣ ಕೆಲವು ವಾರಗಳ‌ ಹಿಂದಷ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಹಲೊಕ ತ್ಯೇಜಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button